May 9, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕ್ರಿಶ್ಚಿಯನ್ ಜಗದ್ಗುರು ಪೋಪ್ ಫ್ರಾನ್ಸಿಸ್ ರವರಿಗೆ ಮಂಗಳೂರಿನಲ್ಲಿ ಅರ್ಪಿಸಿದ ಸರ್ವಧರ್ಮ ಶ್ರದ್ಧಾಂಜಲಿ

ಮಂಗಳೂರು ಧರ್ಮಕ್ಷೇತ್ರದ ವತಿಯಿಂದ ಕಥೊಲಿಕರ ಪರಮೋಚ್ಛ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರಿಗೆ ಶ್ರದ್ಧಾಂಜಲಿ ಸಭೆ ಇಂದು ಎಪ್ರಿಲ್ 25ರಂದು ಶುಕ್ರವಾರ ನಗರದ ಮಿಲಾಗ್ರಿಸ್ ಚರ್ಚ್ ವಠಾರದಲ್ಲಿ ನಡೆಸಲಾಯಿತು.

ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ಶ್ರದ್ದಾಂಜಲಿ ಅರ್ಪಿಸಿ ಮಾತನಾಡಿ, ಪೋಪ್ ಫ್ರಾನ್ಸಿಸ್ ರವರು ಜಗತ್ತಿಗೆ ಬೆಳಕಾಗಿದ್ದಾರೆ. ಮಕ್ಕಳು, ಯುವಕರು, ಬಡವರು, ದೀನರು ಮತ್ತು ವಲಸಿಗರಿಗೆ ಹತ್ತಿರವಾಗಿದ್ದರು. ಪೋಪ್ ಫ್ರಾನ್ಸಿಸ್ ನಮಗೆ ಸಹೋದರತ್ವವನ್ನು ಕಲಿಸಿದ್ದಾರೆ ಎಂದು ಹೇಳಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಮಾತನಾಡಿ, ಪೋಪ್ ಫ್ರಾನ್ಸಿಸ್ ರವರು ಪ್ರೀತಿ, ಸರಳತೆಯ ಜೀವನದಿಂದಾಗಿ ಜಾಗತಿಕ ಸುಧಾರಣಾವಾದಿಯಾಗಿ ಗುರುತಿಸಿಕೊಂಡಿದ್ದಾರೆ. ಜಗತ್ತಿಗೆ ಪರಿಸರ ಪ್ರೀತಿ, ಸಹಬಾಳ್ವೆಯ ಪಾಠ ಮಾಡಿದ್ದಾರೆ. ಸಂಪ್ರದಾಯವಾದಿಯಾಗದೆ ಪವಿತ್ರಸಭೆಯಲ್ಲಿ ಬದಲಾವಣೆ, ನವೀನತೆಯೊಂದಿಗೆ ಜನರ ಪೋಪ್ ಎಂದೇ ಕರೆಯಲ್ಪಟ್ಟವರು. ಚರ್ಚ್ ಬಡವರ ಪರ ಇರಬೇಕೆಂದು ಹೇಳಿದರು. ರೋಮಿನಲ್ಲಿ ಕೈದಿಗಳ ಪಾದ ತೊಳೆದು ಜಗತ್ತಿಗೆ ಸರಳತೆಯನ್ನು ತೋರಿದವರು. ಧರ್ಮ ಸರಳೀಕರಣಗೊಳಿಸಿ ಜನರ ಪ್ರೀತಿ ಗಳಿಸಿ, ಯುವಜನತೆಯನ್ನು ಚರ್ಚ್‌ಗಳತ್ತ ಆಕರ್ಷಿಸಿದರು. ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ್ದಾರೆ. ಪೋಪ್ ಅವರ ಅಗಲಿಕೆ ಜಗತ್ತಿಗೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದರು.

ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ ವಿಶ್ವದಲ್ಲಿ ಪ್ರೀತಿಯ ಹೃದಯ ತೆರೆದವರಾಗಿದ್ದಾರೆ. ಬಡವರ ಕಣ್ಣೀರು ಒರೆಸಿ ಅವರನ್ನು ಮುನ್ನಡೆಸಿದ್ದಾರೆ. ಜಗತ್ತಿನ ಮಾನವ ಸಂಕುಲಕ್ಕೆ ಅವರ ನಿಧನ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದರು. ಸಾಹಿತಿ ಜ್ಯೋತಿ ಚೇಳಾರು ಉಪನ್ಯಾಸ ನೀಡಿದರು.

ಮಂಗಳೂರು ಧರ್ಮಕ್ಷೇತ್ರದ ವಿಶ್ರಾಂತ ಬಿಷಪ್ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್, ಹರೀಶ್ ಪೂಂಜಾ, ಮಾಜಿ ಸಚಿವ ಬಿ. ರಮಾನಾಥ ರೈ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ಮಾಜಿ ಶಾಸಕ ಜೆ.ಆರ್. ಲೋಬೊ, ಬಿಜೆಪಿ ಯುವ ಮೋರ್ಚ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ ಹಾಗೂ ರೋಯ್ ಕ್ಯಾಸ್ತಲಿನೊ, ವಂದನೀಯ ಫಾದರ್ ಫಾವುಸ್ತಿನ್ ಲೋಬೊ, ವಂದನೀಯ ಫಾದರ್ ಡಾ. ಡೇನಿಯಲ್ ವೇಗಸ್, ವಂದನೀಯ ಡಾ. ಜೋಸೆಫ್ ಮಾರ್ಟಿಸ್, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಮಂಗಳೂರಿನ ಪ್ರತಿಷ್ಟಿತ ನ್ಯಾಯವಾದಿ ಎಂ.ಪಿ. ನೊರೊನ್ಹಾ,  ಪಿಯುಸ್ ಎಲ್. ರೊಡ್ರಿಗಸ್,  ಎಲಿಯಾಸ್ ಫೆರ್ನಾಂಡಿಸ್, ಜೋಯ್ಲಾಸ್ ಪಿಂಟೊ, ಶ್ರೀಕಾಂತ್ ಕಾಸರಗೋಡು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರು ಧರ್ಮಕ್ಷೇತ್ರದ ಪಾಲನಾ ಪರಿಷದ್ ನ ಕಾರ್ಯದರ್ಶಿ ಡಾ. ಜಾನ್ ಡಿಸಿಲ್ವಾ ಧನ್ಯವಾದವಿತ್ತರು.

You may also like

News

ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಹೊಸ ಪೋಪ್ ‘ಲಿಯೋ XIV’ ಆಗಿ ಆಯ್ಕೆ

ಕ್ಯಾಥೋಲಿಕ್ ಚರ್ಚ್‌ಗೆ ಐತಿಹಾಸಿಕ ಮತ್ತು ಸಂತೋಷದಾಯಕ ಕ್ಷಣದಲ್ಲಿ ಚಿಕಾಗೋದಲ್ಲಿ ಜನಿಸಿದ ಮಿಷನ್ ಮತ್ತು ಸೇವೆಗೆ ಆಳವಾದ ಬದ್ಧತೆಯನ್ನು ಹೊಂದಿರುವ 69 ವರ್ಷ ವಯಸ್ಸಿನ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್
News

ನೂತನ ಯಾಜಕ ಸ್ಟ್ಯಾನಿ ಪಿಂಟೊ ಇವರ ಪ್ರಥಮ ಕೃತಜ್ಞತಾ ದಿವ್ಯ ಬಲಿಪೂಜೆ

ಕಾರ್ಮೆಲೈಟ್ ಸಂಸ್ಥೆಗೆ ಸೂರಿಕುಮೇರು ಬೊರಿಮಾರ್ ಚರ್ಚ್ ನಿಂದ ಪ್ರಥಮ ಯಾಜಕ ಚರ್ಚ್ ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಆಯೋಗಗಳ ಸಂಯೋಜಕರಿಂದ ಅಭಿನಂದನೆ ಮಂಗಳೂರಿನ ಬಿಕರ್ನಕಟ್ಟೆಯಲ್ಲಿರುವ ಬಾಲಯೇಸು ಪುಣ್ಯ ಕ್ಷೇತ್ರದಲ್ಲಿ

You cannot copy content of this page