September 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪರಮಪೂಜ್ಯ ಪೋಪ್ ಫ್ರಾನ್ಸಿಸ್‌ರವರಿಗೆ MCC ಬ್ಯಾಂಕ್ ವತಿಯಿಂದ ಗೌರವ ನಮನ

ಮಂಗಳೂರಿನ ಹಂಪನಕಟ್ಟೆಯಲ್ಲಿರುವ MCC ಬ್ಯಾಂಕ್ ಇದರ ಆಡಳಿತ ಕಛೇರಿಯಲ್ಲಿ ಕಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ರವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಎಪ್ರಿಲ್ 24ರಂದು ಗುರುವಾರ ಬ್ಯಾಂಕಿನ ಆಡಳಿತ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕ್ಯಾರೆನ್ ಕ್ರಾಸ್ತಾ ತಂಡದಿಂದ ಪ್ರಾರ್ಥನಾ ಗೀತೆಯೊಂದಿಗೆ ಸಭೆ ಪ್ರಾರಂಭವಾಯಿತು.

ಈ ಸಂದರ್ಭದಲ್ಲಿ ಫಾದರ್ ಮುಲ್ಲರ್ಸ್ ಸಂಸ್ಥೆಯ ನಿಯೋಜಿತ ನೀರ್ದೇಶಕರಾದ ವಂದನೀಯ ಫಾದರ್ ಪೌಸ್ತಿನ್ ಲೋಬೊ ಹಾಜರಿದ್ದರು. ಅವರು ಪೋಪ್ ಫ್ರಾನ್ಸಿಸ್ ರವರ ಆತ್ಮಕ್ಕೆ ಗೌರವ ಸಲ್ಲಿಸಿ, ಹಲವಾರು ಸಂದರ್ಭಗಳಲ್ಲಿ ಪೋಪ್ ಆವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡರು. ಪೋಪ್ ಪ್ರಾನ್ಸಿಸ್ ದ್ವನಿಯಿಲ್ಲದವರ ದ್ವನಿ ಎಂದು ಅವರು ಹೇಳಿದರು. ಅವರು ತಮ್ಮ ಗುರು ಯೇಸುಕ್ರಿಸ್ತನನ್ನು ಭವ್ಯತೆಯಲ್ಲಿ ಅಲ್ಲ, ಬಡವರು ಮತ್ತು ದೀನದಲಿತರಲ್ಲಿ ಕಂಡರು. ತಮ್ಮ ಜೀವನದುದ್ದಕ್ಕೂ ಸರಳ ಮತ್ತು ವಿನಮ್ರ ಜೀವನ ಶೈಲಿಯನ್ನು ನಡೆಸುವ ಮೂಲಕ ಸಂತ ಫ್ರಾನ್ಸಿಸ್ ಅಸ್ಸಿಸಿಯ ಹೆಜ್ಜೆಗಳನ್ನು ಅಕ್ಷರಶ: ಅನುಸರಿಸಿದರು. ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಪ್ರಗತಿಪರರಾಗಿದ್ದರು ಮತ್ತು ಅನಗತ್ಯ ಮತ್ತು ಅಪ್ರಸ್ತುತ ಅಭ್ಯಾಸಗಳನ್ನು ತೆಗೆದು ಹಾಕುವಲ್ಲಿ ನಂಬಿಕೆ ಇಟ್ಟಿದರು. ಪ್ರಪಂಚದಾದ್ಯಂತ ಯುದ್ದಗಳು ಮತ್ತು ಸಂಘರ್ಷಗಳಿಂದಾಗಿ ಬಳಲುತ್ತಿರುವ ಮಾನವಕುಲದ ಬಗ್ಗೆ ಅವರು ಆಳವಾದ ಸಹಾನಭೂತಿಯನ್ನು ಹೊಂದಿದ್ದರು. ಅವರು ಜನರಲ್ಲಿ ಅಂತರ್ ಧರ್ಮೀಯ ಸಾಮರಸ್ಯವನ್ನು ಪ್ರತಿಪಾದಿಸಿದರು ಮತ್ತು ಶಾಂತಿಯನ್ನು ತರಲು ಬಯಸಿದರು. ಅವರು ಮಾನವಕುಲದ ಸುಧಾರಣೆಗಾಗಿ ನಿಜವಾದ ಅರ್ಥದಲ್ಲಿ ಶ್ರಮಿಸುವ ಜಾಗತಿಕ ವ್ಯಕ್ತಿತ್ವ (ವಿಶ್ವ ಮಾನವ) ಆಗಿದ್ದರು. ಅವರ ನಿಧನದಿಂದಾಗಿ ಜಗತ್ತು ಅನಾಥವಾಗಿದೆ ಮತ್ತು ಅವರ ಪವಿತ್ರತೆಯು ನಮ್ಮ ಜೀವನದಲ್ಲಿ ಅವರ ಆದರ್ಶಗಳನ್ನು ಅನುಸರಿಸಲು ನಮ್ಮ ಬೆಳಕಿನ ದಾರಿದೀಪವಾಗಲಿ ಎಂದು ಹೇಳಿದರು.

ಬ್ಯಾಂಕಿನ ನಿರ್ದೇಶಕಿ ಐರಿನ್ ರೆಬೆಲ್ಲೊ ಪೋಪ್ ಫ್ರಾನ್ಸಿಸ್ ರವರು ರೋಮನ್ ಕ್ಯಾಥೊಲಿಕ್ ಚರ್ಚ್ ನ ಸರ್ವೋಚ್ಛ ಮಠಾಧೀಶರಾಗಿ ವಹಿಸಿದ್ದ ಸ್ಥಾನಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತಾ ಸಾಗಿದ ಹಾದಿಯನ್ನು ಪ್ರಸ್ತುತಪಡಿಸಿದರು. ಪೋಪ್ ಫ್ರಾನ್ಸಿಸ್ ರವರ ಜೀವನ ಪ್ರಯಾಣವನ್ನು ಪ್ರಸ್ತುತಪಡಿಸುವಾಗ ಪೋಪ್‌ರವರ ಸರಳತೆ, ರೋಗಿಗಳು, ಬಡವರು ಮತ್ತು ದೀನದಲಿತರ ಬಗ್ಗೆ ಅವರ ಕಾಳಜಿಯನ್ನು ಎತ್ತಿ ತೋರಿಸಿದರು. ಪುರಾತನ ಪದ್ದತಿಗಳು ಮತ್ತು ನಂಬಿಕೆಗಳನ್ನು ನಿರ್ಮೂಲನೆ ಮಾಡುವಲ್ಲಿ ಮತ್ತು ಬಡವರ ಜೀವನವನ್ನು ಸುಧಾರಿಸುವಲ್ಲಿ ಅವರ ಪ್ರಯತ್ನಗಳನ್ನು ಅವರು ವಿವರಿಸಿದರು. ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ಅವರ ಪ್ರಯತ್ನಗಳನ್ನು ಸಹ ಅವರು ವಿವರಿಸಿದರು. ಹೃದಯದ ಶುದ್ದತೆ ಮತ್ತು ಮಾನವಕುಲದ ಮೇಲಿನ ಅತ್ಯಂತ ಪ್ರೀತಿಯೊಂದಿಗೆ ದೈವಿಕ ಅನುಗ್ರಹವನ್ನು ಪ್ರತಿಬಿಂಬಿಸುವ ಮುಖ. ಪ್ರವಿತ್ರರ ಜೀವನವು ಮಾನವಕುಲವು ತಮ್ಮ ಜೀವನದಲ್ಲಿ ಅನುಕರಿಸಲು ಮಾದರಿಯಾಗಬೇಕೆಂದು ಅವರು ಬಯಸಿದರು.

ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊರವರು ಬ್ಯಾಂಕಿನ ಎಲ್ಲಾ ನಿರ್ದೇಶಕರು, ಗ್ರಾಹಕರು ಮತು ಸಿಬ್ಬಂದಿಗಳ ಪರವಾಗಿ ಹಾಗೂ ವಂದನೀಯ ಫಾದರ್ ಪೌಸ್ತಿನ್ ಲೋಬೊ ಮತ್ತು ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ ಪರಮಪೂಜ್ಯ ಪೋಪ್ ಫ್ರಾನ್ಸಿಸ್ ರವರ ಭಾವಚಿತ್ರಕ್ಕೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು.

ಬ್ಯಾಂಕಿನ ಎಲ್ಲಾ ನಿರ್ದೇಶಕರು, ಅಡಳಿತ ಕಛೇರಿ ಮತ್ತು ಸಂಸ್ಥಾಪಕ ಶಾಖೆಯ ಸಿಬ್ಬಂದಿಗಳು ಹಾಜರಿದ್ದರು. ಮಹಾಪ್ರಬಂಧಕ ಸುನಿಲ್ ಮಿನೇಜಸ್ ವಂದಿಸಿದರು. ಹಿರಿಯ ಪ್ರಬಂಧಕ ಡೇರಿಲ್ ಲಸ್ರಾದೊ ನಿರೂಪಿಸಿದರು.

You may also like

News

ಮಂಗಳೂರಿನ ಸಿಒಡಿಪಿಯಲ್ಲಿ ಲಿಂಗ ಸಮಾನತಾ ತಂಡಕ್ಕೆ ಸಾಮರ್ಥ್ಯ ತರಬೇತಿ

ಮಹಿಳಾ ಸಬಲೀಕರಣ ಯೋಜನೆಯಡಿ 50 ಮಂದಿ ಭಾಗಿ ಮಹಿಳಾ ಸಬಲೀಕರಣ ಯೋಜನೆಯಡಿ ಬೆಂಗಳೂರು ಕ್ರಾಸ್ ಸಂಸ್ಥೆ ಹಾಗೂ ಮಂಗಳೂರು ಸಿಒಡಿಪಿ ಸಂಸ್ಥೆಗಳ ಸಹಯೋಗದಲ್ಲಿ ಲಿಂಗ ಸಮಾನತಾ ಪ್ರೇರಕ
News

Father Muller Homoeopathic Pharmaceutical Division and P.A. College of Pharmacy Sign MoU to Strengthen Academic–Industry Collaboration

Father Muller Homoeopathic Pharmaceutical Division (FMHPD), a unit of Father Muller Charitable Institutions, and P.A. College of Pharmacy, Mangaluru, entered

You cannot copy content of this page