September 1, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಿಶೇಷಚೇತನ ಮಕ್ಕಳ ಆರೈಕೆ ಮಾಡುವ ಪೋಷಕರಿಗೂ ಇನ್ನು ಮುಂದೆ ಮಾಸಿಕ ಭತ್ಯೆ

ದೇಶದಲ್ಲೇ ಮೊಟ್ಟ ಮೊದಲ ಬಾರಿ ಸಿದ್ದರಾಮಯ್ಯ ಸರಕಾರದಿಂದ ಜಾರಿ

ವಿಶೇಷಚೇತನ ಮಕ್ಕಳನ್ನು ಮನೆಯಲ್ಲೇ ಆರೈಕೆ ಮಾಡುವ ಪೋಷಕರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ವಿಶೇಷಚೇತನರು ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ‘ಮಾಸಿಕ ಭತ್ಯೆ’ ಯೋಜನೆಯನ್ನು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಸಿದ್ದರಾಮಯ್ಯ ಸರಕಾರ ಜಾರಿಗೆ ತಂದಿದೆ. ವಿಶೇಷಚೇತನ ವ್ಯಕ್ತಿಗಳು ತಮ್ಮ ದೈನಂದಿನ ಚಟುವಟಿಕೆಗಳಿಗೆ ತಂದೆ, ತಾಯಿ ಹಾಗೂ ಇತರರ ಮೇಲೆ ಅವಲಂಬಿತರಾಗಿರುತ್ತಾರೆ. ಅಂತಹ ವಿಶೇಷಚೇತನರನ್ನು ನಿರಂತರ ಆರೈಕೆ ಮಾಡುವ ಕುಟುಂಬದ ಸದಸ್ಯರು ಹಾಗೂ ನಿರ್ದಿಷ್ಟ ಆರೈಕೆದಾರರು ಭೌತಿಕ, ಮಾನಸಿಕ ಮತ್ತು ಆರ್ಥಿಕ ಒತ್ತಡ ಅನುಭವಿಸುತ್ತಿರುತ್ತಾರೆ.

ಅಲ್ಲದೇ, ಕುಟುಂಬದ ಸದಸ್ಯರು ತಮ್ಮ ಉದ್ಯೋಗ ತ್ಯಜಿಸಬೇಕಾದ ಅನಿವಾರ್ಯತೆಯೂ ಉಂಟಾಗಿರುತ್ತದೆ. ಈ ಕಾರಣಕ್ಕಾಗಿ ರಾಜ್ಯ ಸರಕಾರ ಯೋಜನೆ ಅನುಷ್ಠಾನಗೊಳಿಸಿದೆ. ಆರೈಕೆದಾರರಿಗೆ ಸಹಾಯ ಹಸ್ತ ಚಾಚುವ ಉದ್ದೇಶದಿಂದ ರಾಜ್ಯ ಸರಕಾರ 2024-25ರ ಆಯವ್ಯಯದಲ್ಲಿ ಸೆರೆಬ್ರಲ್ ಪಾಲ್ಸಿ, ಸ್ನಾಯು ಕ್ಷೀಣತೆ, ಪಾರ್ಕಿನ್ಸನ್ ಕಾಯಿಲೆ, ಮಲ್ಟಿಪಲ್ ಸ್ಟೆರೋಸಿಸ್, ಬುದ್ದಿ ಮಾಂದ್ಯತೆ, ಸ್ವಲೀನತೆ, ಬಹು ಅಂಗವೈಕಲ್ಯದಿಂದ ಬಳಲುತ್ತಿರುವ ವಿಶೇಷಚೇತನರ ಆರೈಕೆದಾರರಿಗೆ ಮಾಸಿಕ ಭತ್ಯೆ ಯೋಜನೆ ರೂಪದಲ್ಲಿ ಆರ್ಥಿಕ ನೆರವು ನೀಡುವ ಯೋಜನೆ ಅನುಷ್ಠಾನಗೊಳಿಸಿದೆ. ಈ ಯೋಜನೆಯ ಸೌಲಭ್ಯವನ್ನು ಇತರ ಅಂಗವೈಕಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ವಿಸ್ತರಿಸಲು ಬಹಳಷ್ಟು ಬೇಡಿಕೆ ಬಂದ ಹಿನ್ನೆಲೆ 2025-26ರ ಆಯವ್ಯಯದಲ್ಲಿ ಆಟಿಸಂ, ಮಾನಸಿಕ ಅಸ್ವಸ್ಥತೆ ಮತ್ತು ಬಹುವಿಧ ಅಂಗವಿಕಲತೆ (ಶ್ರವಣ ನ್ಯೂನತೆ ಮತ್ತು ದೃಷ್ಟಿದೋಷ)ಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೂ ಯೋಜನೆ ವಿಸ್ತರಿಸಿದೆ.

12 ಕೋಟಿ ರೂ. ಮೀಸಲು: ಶೇಕಡಾ 75ಕ್ಕೂ ಹೆಚ್ಚು ಅಂಗವೈಕಲ್ಯದಿಂದ ಬಳಲುತ್ತಿರುವ ಅರ್ಹ ಫಲಾನುಭಾವಿಗಳಿಂದ ಅರ್ಜಿ ಆಹ್ವಾನಿಸಿದ್ದು, ರಾಜ್ಯದಲ್ಲಿ ಒಟ್ಟು 10 ಸಾವಿರ ಫಲಾನುಭವಿಗಳು ಆಯ್ಕೆಯಾಗಿದ್ದಾರೆ. ಅವರ ಆರೈಕೆದಾರರಿಗೆ ಪ್ರತಿ ತಿಂಗಳು ಸಾವಿರ ರೂಪಾಯಿ ನೀಡಲಾಗುತ್ತದೆ. ಇದಕ್ಕಾಗಿ ರಾಜ್ಯ ಸರಕಾರ 12 ಕೋಟಿ ರೂಪಾಯಿ ಮೀಸಲಿರಿಸಿದೆ. ದೇಶದಲ್ಲಿ ಬೇರೆ ಯಾವ ರಾಜ್ಯದಲ್ಲೂ ಈ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂಬುದು ವಿಶೇಷ. ಶೇಕಡಾ 75ಕ್ಕೂ ಹೆಚ್ಚು ಅಂಗವೈಕಲ್ಯದಿಂದ ಬಳಲುತ್ತಿರುವ ವಿಶೇಷಚೇತನರ ಆರೈಕೆದಾರರು ಈ ಯೋಜನೆಗೆ ಅರ್ಹರು. ವಿಶೇಷಚೇತನರಿಗೆ ಸಿಗುವ ಮಾಸಿಕ ಪಿಂಚಣಿ ಜತೆಗೆ ವಿಶೇಷಚೇತನರ ಆರೈಕೆದಾರರಿಗೆ ಮಾಸಿಕ ಸಾವಿರ ರೂಪಾಯಿ ನೀಡಲಾಗುತ್ತದೆ.

You may also like

News

 ‘ರಾಕ್ಣೊ’ ಸಾಹಿತ್ಯ ಪ್ರಶಸ್ತಿ–2026 ಘೋಷಣೆ

ಸಂಪಾದಕರಾದ ಫಾದರ್ ರೂಪೇಶ್ ಮಾಡ್ತಾ ಅವರಿಂದ ಪ್ರಕಟಣೆ ಮಂಗಳೂರಿನಿಂದ ಪ್ರಕಟವಾಗುತ್ತಿರುವ ಕೊಂಕಣಿ–ಇಂಗ್ಲಿಷ್ ದ್ವಿಭಾಷಾ ವಾರಪತ್ರಿಕೆ ‘ರಾಕ್ಣೊ’ ತನ್ನ ವಾರ್ಷಿಕ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ–2026’ ಅನ್ನು ಸೆಪ್ಟೆಂಬರ್ 1ರಂದು
News

ರಾಷ್ಟ್ರೀಯ ತನಿಖಾಧಿಕಾರಿ ಸೋಗಿನಲ್ಲಿ ಸುಲಿಗೆ – 11 ಹೆಸರುಗಳಿದ್ದ ಖತರ್ನಾಕ್ ವಂಚಕ ಸ್ಯಾಮ್ ಪೀಟರ್ ಮಂಗಳೂರು ಸಿಸಿಬಿ ವಶಕ್ಕೆ!

ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ಹಿರಿಯ ನಿರ್ದೇಶಕ ಅಥವಾ ಅಧಿಕಾರಿಯೆಂದು ಸುಳ್ಳು ಗುರುತು ಹೇಳಿಕೊಂಡು ಕೋಟಿ ಕೋಟಿ ರೂಪಾಯಿ ವಂಚನೆ ಹಾಗೂ ಸುಲಿಗೆ ನಡೆಸುತ್ತಿದ್ದ ಖತರ್ನಾಕ್

You cannot copy content of this page