September 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಹೋಟೆಲ್ ಮೋತಿಮಹಲ್, 1.70 ಎಕ್ರೆ ಜಮೀನು ಹಾಗೂ ರೂಪಾಯಿ 11.50 ಕೋಟಿ ಸಮೇತ ಮಂಗಳೂರು ಧರ್ಮಕ್ಷೇತ್ರದ ಸಂಸ್ಥೆಗೆ ಹಸ್ತಾಂತರಿಸಿದ ಎ.ಜೆ. ಶೆಟ್ಟಿ ಆ್ಯಂಡ್ ಕಂಪೆನಿ

ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ನಿನ್ನೆ ಎಪ್ರಿಲ್ 30ರಂದು ಬುಧವಾರ ಎ.ಜೆ ಶೆಟ್ಟಿ ಆ್ಯಂಡ್ ಕಂಪನಿಯು, ಹೋಟೆಲ್ ಮೋತಿಮಹಲ್ ಕಟ್ಟಡ ಸಮೇತ 1.70 ಎಕ್ರೆ ಜಮೀನು ಹಾಗೂ 11.50 ಕೋಟಿ ರೂಪಾಯಿ ಮೂಲ ಮಾಲಕರಾದ ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಸೈಂಟ್ ಆ್ಯಂಟನೀಸ್ ಚಾರಿಟೇಬಲ್ ಟ್ರಸ್ಟಿಗೆ ಕೋರ್ಟ್ ಆದೇಶದಂತೆ ಹಸ್ತಾಂತರಿಸಿತು.

ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಹಾಗೂ ಚಾರಿಟೇಬಲ್ ಟ್ರಸ್ಟ್ ಮೂಲಿ ಹಾಗೂ ಮೂಲಗೇಣಿ ಹಕ್ಕು ಹೊಂದಿರುವ 1.70 ಎಕರೆ ಜಮೀನು ಹಾಗೂ ಅದರಲ್ಲಿರುವ ಮೋತಿಮಹಲ್ ಹೋಟೆಲ್ ಅನ್ನು ಲೀಸ್ಡ್ ಶರ್ತ ಪ್ರಕಾರ ಮೂಲಿಗೆ ಒಪ್ಪಿಸಲು ಹಾಗೂ 2011ರ ನಂತರ ಅಂದರೆ ಲೀಸ್ ಅವಧಿ ಮುಗಿದ ಬಳಿಕವೂ ಸ್ವಾಧೀನವನ್ನು ಎ.ಜೆ. ಶೆಟ್ಟಿ ಆ್ಯಂಡ್ ಕಂಪೆನಿ ಬಿಟ್ಟು ಕೊಡದ ಕಾರಣಕ್ಕಾಗಿ ಸೈಂಟ್ ಆ್ಯಂಟನೀಸ್ ಚಾರಿಟೇಬಲ್ ಟ್ರಸ್ಟ್ ಗೆ 11.50 ಕೋಟಿ ರೂಪಾಯಿಗಳನ್ನು ಎಪ್ರಿಲ್ 30ರ ಒಳಗೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನಿನ್ನೆ ಎಪ್ರಿಲ್ 30ರಂದು 1.70 ಎಕ್ರೆ ಜಮೀನು ಅದರಲ್ಲಿರುವ ಕಟ್ಟಡ ಹಾಗೂ 11.50 ಕೋಟಿ ರೂಪಾಯಿ ಹಸ್ತಾಂತರಿಸುವ ಮೂಲಕ ಕೋರ್ಟ್ ಆದೇಶಕ್ಕೆ ಎ.ಜೆ. ಶೆಟ್ಟಿ ಆ್ಯಂಡ್ ಕಂಪೆನಿ ಗೌರವಿಸಿತು.

ಸೈಂಟ್ ಆ್ಯಂಟನೀಸ್ ಚಾರಿಟೇಬಲ್ ಟ್ರಸ್ಟ್ ಪರವಾಗಿ ವಕೀಲರಾದ ಎಂ.ಪಿ. ನೊರೊನ್ಹಾ ಹಾಗೂ ವಂದನೀಯ ಫಾದರ್ ಜೆ.ಬಿ. ಕ್ರಾಸ್ತ ಉಪಸ್ಥಿತರಿದ್ದರು.

You may also like

News

ಕಲ್ಲುಗುಂಡಿ ದರೋಡೆ ಪ್ರಕರಣದಲ್ಲಿ ಶ್ರೀನಿವಾಸ ದೋಷಮುಕ್ತ

ಆರೋಪಿ ಪರ ಪ್ರಖ್ಯಾತ ವಕೀಲರಾದ ಪುತ್ತೂರು ಮಹೇಶ್ ಕಜೆ ಯಶಸ್ವಿ ವಾದ ಪುತ್ತೂರು: ಸುಮಾರು 13 ವರ್ಷಗಳ ಹಿಂದೆ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿ ಎಂಬಲ್ಲಿ
News

ಪುತ್ತೂರು ಪ್ರೆಸ್ ಕ್ಲಬ್ ಎದುರು ಸಾರ್ವಜನಿಕ ಶಾಂತಿಗೆ ಭಂಗ – ಮೂವರ ವಿರುದ್ಧ ಎಫ್‌ಐಆರ್ ದಾಖಲು

ಪುತ್ತೂರು: ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿ ಗಲಾಟೆ ನಡೆಸಿ, ಸಾರ್ವಜನಿಕ ಶಾಂತಿಗೆ ಭಂಗ ತಂದಿರುವ ಘಟನೆಗೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳು ಸೇರಿದಂತೆ ಇತರರ ವಿರುದ್ಧ ಪುತ್ತೂರು ನಗರ

You cannot copy content of this page