July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಿಟ್ಲ ಚರ್ಚ್ ಧರ್ಮಗುರು ವಂದನೀಯ ಐವನ್ ರೊಡ್ರಿಗಸ್ ಇವರ ಗುರು ದೀಕ್ಷೆಯ ಬೆಳ್ಳಿ ಹಬ್ಬ ವಿಜೃಂಬಣೆಯಿಂದ ಆಚರಣೆ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಅವರ್ ಲೇಡಿ ಆಫ್ ಡಾಲರ್ಸ್ ಚರ್ಚ್ ವಿಟ್ಲ ಇದರ ಪ್ರಧಾನ ಧರ್ಮಗುರು ಹಾಗೂ ವಿಟ್ಲ ವಲಯದ ಶ್ರೇಷ್ಟ ಗುರು ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಇವರ ಗುರುದೀಕ್ಷೇಯ ಬೆಳ್ಳಿಹಬ್ಬದ ಸಂಭ್ರಮಾಚರಣೆಯು ಮೇ 1ರಂದು ಗುರುವಾರ ವಿಟ್ಲ ಚರ್ಚ್ ನಲ್ಲಿ ವಿಶ್ರಾಂತ ಬಿಷಪ್ ಅತೀ ವಂದನೀಯ ಡಾ. ಎಲೋಶಿಯಸ್ ಪಾವ್ಲ್ ಡಿಸೋಜ, ಧರ್ಮಕ್ಷೇತ್ರದ ಶ್ರೇಷ್ಟ ಗುರು ಅತೀ ವಂದನೀಯ ಮ್ಯಾಕ್ಸಿಂ ಎಲ್. ನೊರೊನ್ಹಾ, ವಲಯದ ಧರ್ಮಗುರುಗಳು ಹಾಗೂ ಇತರ ಧರ್ಮಗುರುಗಳೊಂದಿಗೆ ದಿವ್ಯ ಕೃತಜ್ಞತಾ ಬಲಿಪೂಜೆ ನಡೆಸುವ ಮುಖಾಂತರ ವಿಜೃಂಭಣೆಯಿಂದ ಆಚರಿಸಲಾಯಿತು.

25 ವರ್ಷಗಳ ಹಿಂದೆ ಗುರುದೀಕ್ಷೆ ನೀಡಿದ ಬಿಷಪ್ ರವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿಷಪ್ ರವರು, “ನಿಮ್ಮ ದೀಕ್ಷೆಯ ಈ 25 ನೇ ವಾರ್ಷಿಕೋತ್ಸವವನ್ನು ನಿಮ್ಮೊಂದಿಗೆ ಆಚರಿಸಲು ನನಗಿದು ಗೌರವವಾಗಿದೆ.  ದೇವರು ಮತ್ತು ಆತನ ಜನರ ಸೇವೆ ಮಾಡುವ ನಿಮ್ಮ ಬದ್ಧತೆಯು ನಮ್ಮ ಸಮುದಾಯಕ್ಕೆ ನಿಜವಾದ ಆಶೀರ್ವಾದವಾಗಿದೆ. ನಿಮ್ಮ ಸಮರ್ಪಣೆ ಮತ್ತು ಅಚಲವಾದ ನಂಬಿಕೆಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ನೀವು ನಿಮ್ಮ ನಿಷ್ಟಾವಂತ ಸೇವೆಯನ್ನು ಮುಂದುವರಿಸಿದಂತೆ ಭಗವಂತ ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಶಾಂತಿಯನ್ನು ಆಶೀರ್ವದಿಸಲಿ.” ಎಂದು ನಿವೃತ್ತ ಬಿಷಪ್ ಎಲೋಸಿಯಸ್ ಪಾವ್ಲ್ ಡಿಸೋಜ ಹೇಳಿದರು.

ದಿವ್ಯ ಬಲಿಪೂಜೆಯ ಬಳಿಕ ಚರ್ಚ್ ಸಭಾಂಗಣದಲ್ಲಿ ಚರ್ಚ್ ಪಾಲನಾ ಸಮಿತಿಯ ವತಿಯಿಂದ ಸಂಭ್ರಮದ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಟ ಗುರು ಅತೀ ವಂದನೀಯ ಮ್ಯಾಕ್ಸಿಂ ಎಲ್. ನೊರೊನ್ಹಾ, ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಮೈಕಲ್ ಡಿಕುನ್ಹಾ ಹಾಗೂ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ ವಿಟ್ಲ ಇದರ ಪ್ರಾಂಶುಪಾಲರಾದ ವಂದನೀಯ ಫಾದರ್ ಸುನಿಲ್ ಪಿಂಟೊ ಆಗಮಿಸಿದ್ದರು. “ದೀಕ್ಷೆಯ 25 ನೇ ವಾರ್ಷಿಕೋತ್ಸವದ ಆಶಯವು ಸೇವೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಮತ್ತು ದೇವರ ನಿರಂತರ ಶಕ್ತಿ ಮತ್ತು ಆಶೀರ್ವಾದಕ್ಕಾಗಿ ಪ್ರಾರ್ಥನೆಗಳನ್ನು ಸಲ್ಲಿಸಬೇಕು. ನಿಮ್ಮ ದೀಕ್ಷೆಯ ವಾರ್ಷಿಕೋತ್ಸವದಲ್ಲಿ ದೇವರು ನಿಮ್ಮನ್ನು ಆಶೀರ್ವದಿಸುವುದನ್ನು ಮುಂದುವರಿಸಲಿ ಮತ್ತು ಅವನು ಯಾವಾಗಲೂ ನಿಮ್ಮನ್ನು ಆವರಿಸಲಿ. ನಿಮ್ಮ ಎಲ್ಲಾ ಕೆಲಸ ಮತ್ತು ಜೀವನದಲ್ಲಿ ನಿಮ್ಮ ಮಾರ್ಗದರ್ಶಿ ಶಕ್ತಿಯಾಗಿರಲಿ ಎಂದು ನಿವೃತ್ತ ನ್ಯಾಯಾಧೀಶರಾದ ಮೈಕಲ್ ಡಿಕುನ್ಹಾ ಶುಭ ಹಾರೈಸಿದರು.

ಧರ್ಮಕ್ಷೇತ್ರದ ಶ್ರೇಷ್ಟ ಗುರು ಮ್ಯಾಕ್ಸಿಂ ಎಲ್. ನೊರೊನ್ಹಾ ಮಾತನಾಡಿ, “ಗುರು ದೀಕ್ಷೆಯ ವಾರ್ಷಿಕೋತ್ಸವದಂದು ಯಾಜಕರನ್ನು ಅವರ ಸಮರ್ಪಿತ ಸೇವೆಗಾಗಿ ಸಾರ್ವಜನಿಕವಾಗಿ ಅಭಿನಂದಿಸುವುದು ಹಾಗೂ ಅವರ ಸೇವೆಯನ್ನು ಗುರುತಿಸಿ ಧನ್ಯವಾದ ಸಲ್ಲಿಸುವ ಮತ್ತು ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಂಡು ಆಚರಿಸುವ ಒಂದು ಮಾರ್ಗವಾಗಿದೆ. ಇದು ಕಥೊಲಿಕ್ ಸಮುದಾಯವು ಅವರ ನಾಯಕತ್ವ, ಮಾರ್ಗದರ್ಶನ ಮತ್ತು ಅವರು ಒದಗಿಸುವ ಸಂಸ್ಕಾರಗಳಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುವ ಸಮಯ” ಎಂದರು. ಫಾದರ್ ಐವನ್ ಮೈಕಲ್ ರೊಡ್ರಿಗಸ್ ರವರು ಕಳೆದ 25 ವರ್ಷಗಳಲ್ಲಿ ನೀಡಿದ ಸೇವೆಯನ್ನು ಸ್ಮರಿಸಿ ಕೃತಜ್ಞತೆಯನ್ನು ಸಲ್ಲಿಸಿದರು. ಮುಂದಿನ ಸೇವೆಗೆ ಆಶೀರ್ವದಿಸಿದರು.

ಗುರು ದೀಕ್ಷೇಯ 25 ವರ್ಷಗಳಲ್ಲಿ ಮಂಗಳೂರು ಧರ್ಮಕ್ಷೇತ್ರದ ವಿವಿಧ ಧರ್ಮಕೇಂದ್ರಗಳಲ್ಲಿ ಸೇವೆಯನ್ನು ನೀಡುತ್ತಾ ಬಂದಿದ್ದೇನೆ. ದೇವರು ನನ್ನನ್ನು ಯಾಜಕನಾಗಲು ಕರೆದಿದ್ದು ಖಂಡಿತವಾಗಿಯೂ ಅದೊಂದು ನನಗೆ ಲಭಿಸಿದ ಆಶೀರ್ವಾದ. ಯಾಜಕರ ಪ್ರಾಥಮಿಕ ಪಾತ್ರವು ದೇವರ ಅನುಗ್ರಹದ ಸಾಧನವಾಗುವುದು, ಸಂಸ್ಕಾರಗಳನ್ನು ಹಂಚಿಕೊಳ್ಳುವುದು, ನಂಬಿಕೆಯನ್ನು ಬೋಧಿಸುವುದು ಮತ್ತು ಸಮುದಾಯಕ್ಕೆ ಮಾರ್ಗದರ್ಶನ ನೀಡುವುದು. ನಾನು ಸೇವೆ ನೀಡಿದ ಪ್ರತಿಯೊಂದೂ ಧರ್ಮಕೇಂದ್ರಗಳಲ್ಲಿ ಭಕ್ತಾಧಿಗಳು ನನ್ನನ್ನು ಪ್ರೀತಿಸಿದ್ದಾರೆ. ನಾನೂ ಕೂಡ ಭಕ್ತಾಧಿಗಳ ಪ್ರೀತಿಯನ್ನು ಮಾಡಿದ್ದೇನೆ. ಸಂಪೂರ್ಣ ಸೇವೆ ನೀಡಿದ ಸಂತೃಪ್ತಿ ನನ್ನಲ್ಲಿದೆ. 25 ವರ್ಷಗಳಲ್ಲಿ ದೇವರು ಕರುಣಿಸಿದ ಎಲ್ಲಾ ಆಶೀರ್ವಾದಗಳಿಗೆ ನಾನು ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ದೈವಾಧೀನರಾದ ತನ್ನ ತಂದೆ ತಾಯಿಯನ್ನು ಸ್ಮರಿಸುತ್ತಾ ಸಹೋದರ ಸಹೋದರಿಯರಿಗೆ, ಕುಟುಂಬದ ಎಲ್ಲಾ ಸದಸ್ಯರಿಗೆ ಋಣಿಯಾಗಿದ್ದೇನೆ. ನನ್ನ ಗುರು ದೀಕ್ಷೆಯ 25ನೇ ವಾರ್ಷಿಕೋತ್ಸವವನ್ನು ಆಚರಿಸಲು ನಾನು ನಿಜವಾಗಿಯೂ ಬಯಸಲಿಲ್ಲ. ವಿಟ್ಲ ಚರ್ಚ್ ಪಾಲನಾ ಸಮಿತಿಯ ಎಲ್ಲಾ ಸದಸ್ಯರು ಮತ್ತು ಚರ್ಚ್ ಭಕ್ತಾಧಿಗಳು ಒಮ್ಮನಸ್ಸಿನಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಎಲ್ಲರಿಗೂ ಆಶೀರ್ವಾದಗಳನ್ನು ನೀಡುತ್ತಾ ಕಾರ್ಯಕ್ರಮ ಆಯೋಜಿಸಿದ ಪ್ರತಿಯೊಬ್ಬರಿಗೂ ನಾನು ಚಿರಋಣಿಯಾಗಿದ್ದೇನೆ. ನಿಮ್ಮ ಪ್ರಾರ್ಥನೆಗಳು, ನಿಮ್ಮ ಬೆಂಬಲ ಮತ್ತು ನಿಮ್ಮ ಅಚಲ ನಂಬಿಕೆಯು ನನ್ನ ಪ್ರಯಾಣದ ಉದ್ದಕ್ಕೂ ಶಕ್ತಿ ಮತ್ತು ಸ್ಫೂರ್ತಿಯ ಮೂಲವಾಗಿದೆ. ನಿಮ್ಮ ಉಪಸ್ಥಿತಿ, ನಿಮ್ಮ ಪ್ರಾರ್ಥನೆಗಳು ಮತ್ತು ನಿಮ್ಮೆಲ್ಲರ ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನಿಮ್ಮ ಉಪಸ್ಥಿತಿಯಿಂದ ಈ ವಿಶೇಷ ಸಂದರ್ಭವನ್ನು ಅಲಂಕರಿಸಿದ ಪ್ರತಿಯೊಬ್ಬರಿಗೂ ನಾನು ಕೃತಜ್ಞತೆ ಅರ್ಪಿಸುತ್ತೇನೆ ಎಂದು ಫಾದರ್ ಐವನ್ ಮೈಕಲ್ ರೊಡ್ರಿಗಸ್ ಹೇಳಿದರು.

ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಿಜಯ್ ಪಾಯ್ಸ್ ಸನ್ಮಾನ ಪತ್ರವನ್ನು ವಾಚಿಸಿದರು.  ಕಾರ್ಯದರ್ಶಿ ಶ್ವೇತಾ ಪಾಯ್ಸ್ ವಂದಿಸಿದರು. ವಿಟ್ಲ ವಲಯದ ಎಲ್ಲಾ ಸಂಘಟನೆಗಳ ಮುಖ್ಯಸ್ಥರು ಪುಷ್ಪಗುಚ್ಚ ನೀಡಿ ಅಭಿನಂದಿಸಿದರು. ನೆರೆದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page