August 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಾಣಿ‌ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸ್ವಸ್ತಿ ಎಸ್. ಭಟ್ ರಾಜ್ಯಕ್ಕೆ 8ನೇ ಸ್ಥಾನ

ಬಂಟ್ವಾಳ ತಾಲೂಕಿನ ಮಾಣಿ‌ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಈ‌ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ‌ ಸಾಧನೆ ಮಾಡಿದ್ದು ಶಾಲಾ ವಿದ್ಯಾರ್ಥಿನಿ ಸ್ವಸ್ತಿ ಎಸ್. ಭಟ್ 618 ಅಂಕಗಳಿಸಿ ಶಾಲೆಗೆ ಮೊದಲಸ್ಥಾನಿಯಾಗಿದ್ದು, ರಾಜ್ಯಕ್ಕೆ 8ನೇ ಸ್ಥಾನಿಯಾಗಿದ್ದಾಳೆ.

ಉಳಿದಂತೆ ವಿದ್ಯಾರ್ಥಿಗಳಾದ ವೈಷ್ಣವಿ 615, ನಿವ್ಯಾ ರೈ 608, ಮಹಮ್ಮದ್ ತಝೀಮ್ ಇಕ್ಬಾಲ್ 608, ಲೊಯ್ಲಿನ್ ಪಾಯ್ಸ್ 607, ಸೌರಭ್ ಪ್ರಭು 606  ಹಾಗೂ ಆರನ್ ಪಾಯ್ಸ್ 600 ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.  ಶಾಲೆಯಿಂದ ಪರೀಕ್ಷೆಗೆ ಹಾಜರಾದವರ ಪೈಕಿ 25 ವಿದ್ಯಾರ್ಥಿಗಳು 90ಶೇಕಡಾಕ್ಕಿಂತಲೂ ಹೆಚ್ಚು ಅಂಕ ಗಳಿಸಿದ್ದು, 37 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.  ಎಲ್ಲಾ‌ ವಿದ್ಯಾರ್ಥಿಗಳನ್ನು ಶಾಲಾ ‌ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.

You may also like

News

CODP Extends Education Aid to Students, Spreads Awareness on Government Welfare Schemes

The Canara Organisation for Development and Peace (CODP) organised an Education Aid Cheque Distribution Programme along with an awareness session
News

ಮುದರಂಗಡಿ ಉದ್ಯಮಿ ಡೇವಿಡ್ ಡಿಸೋಜ ಹತ್ಯೆ – ಕೆಲವೇ ಗಂಟೆಗಳಲ್ಲಿ ಉಡುಪಿ ಪೊಲೀಸರಿಂದ ಆರೋಪಿ ರಾಜು ಬಂಧನ

ಮುದರಂಗಡಿ ಪೇಟೆಯಲ್ಲಿ ಹಾಡಹಗಲೇ ಉದ್ಯಮಿ ಡೇವಿಡ್ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನದ

You cannot copy content of this page