ಕೋಮುದ್ವೇಷದ ವೀಡಿಯೋ ಪ್ರಸಾರ – ಬೆಳ್ತಂಗಡಿ ಧನುಷ್ ವಿರುದ್ಧ ಪ್ರಕರಣ ದಾಖಲು

ಸಮುದಾಯಗಳ ನಡುವೆ ಕೋಮುದ್ವೇಷ ಉಂಟಾಗಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವಂತಹ ಪ್ರಚೋದನಾತ್ಮಕ ವೀಡಿಯೋವನ್ನು ತಣ್ಣೀರುಪಂಥ ಬೆಳ್ತಂಗಡಿ ನಿವಾಸಿ ಧನುಷ್ ಎಂಬಾತನು ಪ್ರಸಾರ ಮಾಡಿದ್ದನು.
ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಆರೋಪಿತನಾದ ಧನುಷ್ ವಿಡಿಯೋ ಪ್ರಸಾರ ಮಾಡಿದ್ದ ಹಿನ್ನೆಲೆಯಲ್ಲಿ, ಅವನ ವಿರುದ್ಧ ಇಂದು ಮೇ 4ರಂದು ಆದಿತ್ಯವಾರದಂದು ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 30/2025 ಕಲಂ: 196(1)(A), 353(1)(C) BNS-2023 ರಂತೆ ಪ್ರಕರಣ ದಾಖಲು ಆಗಿದೆ.