July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸುರತ್ಕಲ್ ನಲ್ಲಿ ಸಾಹಿತ್ಯ ಸಂಭ್ರಮ ಕವಿ ಗೋಷ್ಠಿ

ಕನ್ನಡ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ ಹಾಗೂ ಮಂಗಳೂರು ಘಟಕದ ವತಿಯಿಂದ ಮೇ 4 ರಂದು ಆದಿತ್ಯವಾರ ಇಲ್ಲಿನ ವಿರಾಟ್ ಸಭಾ ಭವನದಲ್ಲಿ ಸಾಹಿತ್ಯ ಸಂಭ್ರಮ ಕವಿ ಗೋಷ್ಠಿಯನ್ನು ನಡೆಸಲಾಯಿತು. ಪ್ರಸಿದ್ಧ ಸಾಹಿತಿ ಡಾ. ಇಂದಿರಾ ಹೆಗಡೆಯವರು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂ.ಪಿ. ಶ್ರೀನಾಥ ವಹಿಸಿದ್ದರು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪಿ. ದಯಾಕರ್, ಮಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಂಜುನಾಥ ರೇವನ್ಕರ್, ವಿನಯ ಆಚಾರ್ ಸಹಿತ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೃಷ್ಣ ಮೂರ್ತಿ ಸುರತ್ಕಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭಾ ಕಾರ್ಯಕ್ರಮ ಹಾಗೂ ಗೀತ ಗಾಯನಗಳ ತರುವಾಯ ನಡೆದ ಕವಿಗೋಷ್ಠಿಯಲ್ಲಿ ವಿವಿಧ ರೀತಿಯ ಸ್ವರಚಿತ ಕಾವ್ಯ ವಾಚನವು ಸಭಿಕರನ್ನು ರಂಜಿಸಿತು. ಪತ್ರಕರ್ತ ರೇಮಂಡ್ ಡಿಕುನ್ಹಾ ತಾಕೊಡೆಯವರು ಸಕಾಲಿಕ ಕವನವನ್ನೂ ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ. ಸುರೇಶ್ ನೆಗಳಗುಳಿ ಇವರು ಸುಮಧುರ ಗಜಲ್ ನ್ನೂ ವಾಚಿಸಿದರು.

ಬಹು ಮುಖ ಕಲೆಯ ಶಿಕ್ಷಕಿ ಪ್ರೇಮಾ ಆರ್. ಶೆಟ್ಟಿಯವರು ರಮ್ಯ ಕವನವನ್ನು ಹಾಗೂ ಕರ್ನಾಟಕ ಬ್ಯಾಂಕ್ ಅಧಿಕಾರಿ ಆಕೃತಿ ಭಟ್ ರವರು ರಾಗ ಬದ್ಧ ಕವನ ಗಾಯನ ಮಾಡಿದರು. ರಾಜೇಶ್ವರಿ ಎಚ್. ರವರು ಹಾಗೂ ಪದ್ಮನಾಭ ಪೂಜಾರಿ ಪ್ರಾಸ ಬದ್ಧ ಕವನ ಹಾಡಿದರು. ನೇರಂಬೋಳು ರಂಜಿತ್ ಸಸಿಹಿತ್ಲು, ಗುಲಾಬಿ ಸುರೇಂದ್ರ ಹಾಗೂ ಸಂಘಟಕಿ ಅನುರಾಧ ಸುರತ್ಕಲ್ ಅವರ ಕವಿಗಳಿಗೆ ವಂದಿಸುವ  ಕವನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

You may also like

News

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ – ಸೆಲೆನ ಬಸ್ ಕಂಡಕ್ಟರ್ ಬಂಧನ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಕೊಂಡು ಅಸಭ್ಯವಾಗಿ ವರ್ತಿಸಿ, ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೆಲೆನ ಬಸ್ ಕಂಡಕ್ಟರ್‌ನನ್ನು ಮಂಗಳೂರು
News

ದಾರುಸ್ಸಲಾಂ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ ಮಹಾಸಭೆ – ಭವ್ಯ ಸ್ವಾಗತ ಸಮಿತಿ ರಚನೆ

ಸ್ಥಳೀಯ ಸಂಸ್ಥೆಯಾದ ದಾರುಸ್ಸಲಾಂ ಸೆಂಟರ್‌ನ 10ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಹಾಗೂ ಪ್ರಥಮ ಸನದುದಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೃಹತ್ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮವು

You cannot copy content of this page