September 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನಾಳೆ ಮೇ 11ರಂದು ಕಥೊಲಿಕ್ ಸಭಾ ಕೇಂದ್ರೀಯ ವಾರ್ಷಿಕ ಚುನಾವಣೆ

ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಪತ್ರಿಕಾ ಪ್ರಕಟನೆ

 

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂಘಟನೆಯ 2025-26 ನೇ ಅವಧಿಗೆ ಕೇಂದ್ರೀಯ ವಾರ್ಷಿಕ ಚುನಾವಣೆ ನಾಳೆ ಮೇ 11ರಂದು ಆದಿತ್ಯವಾರ ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಬಿಷಪ್ಸ್ ಹೌಸ್ ನ ಸಭಾ ಭವನದಲ್ಲಿ ನಡೆಯಲಿದೆ. ಪ್ರಸ್ತುತ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇವರ ಅವಧಿಯು ನಾಳೆ ಮುಗಿಯಲಿರುವುದರಿಂದ ಈ ಚುನಾವಣೆ ನಡೆಯಲಿದೆ.

ಅಧ್ಯಕ್ಷ, ಉಪಾಧ್ಯಕ್ಷ ಪ್ರಥಮ, ಉಪಾಧ್ಯಕ್ಷ ದ್ವಿತೀಯ, ಪ್ರಧಾನ ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ, ಖಜಾಂಚಿ ಮತ್ತು ಸಹ ಖಜಾಂಚಿ ಹುದ್ದೆಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಅಧಿಕಾರಿಯಾಗಿ ಮಾಜಿ ಅಧ್ಯಕ್ಷ ಲ್ಯಾನ್ಸಿ ಡಿಕುನ್ಹಾ ಹಾಗೂ ವೀಕ್ಷಣಾಧಿಕಾರಿಯಾಗಿ ಮಾಜಿ ಅಧ್ಯಕ್ಷ ಜೆರಿ ಪೀಟರ್ ರೊಡ್ರಿಗಸ್ ಇವರು ಚುನಾವಣೆಯನ್ನು ನಡೆಸಲಿರುವರು ಎಂದು ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇವರು ಇಂದು ಮೇ 10ರಂದು ಶನಿವಾರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

You may also like

News

ಕಬಡ್ಡಿ–ತ್ರೋಬಾಲ್‌ನಲ್ಲಿ ಹಯಾತುಲ್ ಇಸ್ಲಾಂ ಶಾಲೆಯ ಭರ್ಜರಿ ಸಾಧನೆ – ತಾಲೂಕು ಮಟ್ಟಕ್ಕೆ ತಂಡಗಳ ಆಯ್ಕೆ

ಗೂಡಿನಬಳಿ ಹಯಾತುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾ ಪ್ರತಿಭೆ ಮತ್ತೊಮ್ಮೆ ಗಮನ ಸೆಳೆದಿದ್ದು, ಶಾಲೆಯ ಕಬಡ್ಡಿ ಹಾಗೂ ತ್ರೋಬಾಲ್ ತಂಡಗಳು ವಲಯ ಮಟ್ಟದ ಪಂದ್ಯಾಟದಲ್ಲಿ ದ್ವಿತೀಯ
News

ಜಿಲ್ಲಾಮಟ್ಟದ ಟೇಕ್ವಾಂಡೋದಲ್ಲಿ ರಿಯೋನ್ ಲಸ್ರಾದೊ ಚಿನ್ನದ ಸಾಧನೆ – ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆ

ವಿಟ್ಲದ ಪಿಎಂಶ್ರಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಟೇಕ್ವಾಂಡೋ ಪಂದ್ಯಾಟದಲ್ಲಿ ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ರಿಯೋನ್ ಲಸ್ರಾದೊ 41 ಕೆ.ಜಿ.

You cannot copy content of this page