ಪ್ರಯಾಣ ಉಚಿತವಾದರೂ ‘ಶಕ್ತಿ ಯೋಜನೆ’ಯ ಫಲಾನುಭವಿಗಳು ಟಿಕೆಟ್ ಪಡೆಯಲೇಬೇಕು
ಟಿಕೆಟ್ ಇಲ್ಲದೆ ಪ್ರಯಾಣಿಸಿದ ಫಲಾನುಭವಿಗಳಿಂದ 7.32ಲಕ್ಷ ದಂಡ ಸಂಗ್ರಹ

ಕರ್ನಾಟಕದಾದ್ಯಂತ ‘ಶಕ್ತಿ ಯೋಜನೆ’ಯ ಭಾಗವಾಗಿ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅರ್ಹರಾಗಿದ್ದಾರೆ. ಆದರೆ, ಉಚಿತ ಎಂಬ ಒಂದೇ ಕಾರಣಕ್ಕೆ ಟಿಕೆಟ್ ಪಡೆಯದೆ ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವವರಿಗೆ ಈಗ KSRTCಯಿಂದ ಭಾರಿ ದಂಡ ವಿಧಿಸಲಾಗುತ್ತಿದೆ. KSRTC ಏಪ್ರಿಲ್ ತಿಂಗಳೊಂದರಲ್ಲೇ 3,780 ಟಿಕೆಟ್ ರಹಿತ ಪ್ರಯಾಣಿಕರಿಂದ 7.32 ಲಕ್ಷ ರೂಪಾಯಿ ದಂಡವನ್ನು ಸಂಗ್ರಹಿಸಿದೆ. ಅಷ್ಟೇ ಅಲ್ಲದೆ ಟಿಕೆಟ್ ರಹಿತ ಪ್ರಯಾಣಿಕರ ವಿರುದ್ಧ ಶಿಸ್ತು ಕ್ರಮವನ್ನು ಪ್ರಾರಂಭಿಸಲಾಗಿದೆ. ಶಕ್ತಿ ಯೋಜನೆಯ ಅನುಷ್ಠಾನದ ನಂತರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಹೆಚ್ಚಿನ ಪ್ರಯಾಣಿಕರನ್ನು ಹೊಂದಿವೆ. ವಿಶೇಷವಾಗಿ ಮಹಿಳೆಯರು ಗುಂಪುಗಳಲ್ಲಿ ಆಧಾರ್ ಕಾರ್ಡ್‌ಗಳನ್ನು ಹಿಡಿದುಕೊಂಡು ಉಚಿತ ಪ್ರಯಾಣವನ್ನು ಮಾಡುತ್ತಾರೆ.

ಉಚಿತ ಪ್ರಯಾಣದ ಹೊರತಾಗಿಯೂ ಮಹಿಳಾ ಪ್ರಯಾಣಿಕರಿಗೆ ಟಿಕೆಟ್ ತೆಗೆದುಕೊಳ್ಳುವುದರಿಂದ ವಿನಾಯಿತಿ ಇಲ್ಲ. ಅವರು ತಮ್ಮ ಕರ್ನಾಟಕದ ವಿಳಾಸ ಇರುವ ಆಧಾರ್ ಕಾರ್ಡ್ ಅನ್ನು ತೋರಿಸಬೇಕು ಮತ್ತು ಟಿಕೆಟ್ ಅನ್ನು ಪಡೆದುಕೊಳ್ಳಲೇಬೇಕು. ಟಿಕೆಟ್‌ನಲ್ಲಿ ನಮೂದಿಸಲಾದ ಸ್ಟಾಪ್‌ನಲ್ಲೇ ಅವರು ಇಳಿಯಬೇಕು.

ನಿಯಮಗಳ ಯಾವುದೇ ಉಲ್ಲಂಘನೆಯು ದಂಡಕ್ಕೆ ಕಾರಣವಾಗುತ್ತದೆ. ಪುರುಷ ಪ್ರಯಾಣಿಕರು ಕೂಡ ಟಿಕೆಟ್ ಖರೀದಿಸಬೇಕು. ಹಾಗೆ ಮಾಡಲು ವಿಫಲವಾದರೆ ಅತೀ ಹೆಚ್ಚು ದಂಡವನ್ನು ವಿಧಿಸಲಾತ್ತದೆ.




