November 5, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಾಹನದಲ್ಲಿ ವಕೀಲೇತರರು “ವಕೀಲರ ಚಿಹ್ನೆ” ಸ್ಟಿಕ್ಕರ್ ಬಳಿಸಿದರೆ ಕಠಿಣ ಕ್ರಮದ ಎಚ್ಚರಿಕೆ

ಅಕ್ರಮದ ವಿರುದ್ಧ ಮಾಹಿತಿ ನೀಡುವಂತೆ ವಕೀಲರ ಪರಿಷತ್‌ ಮನವಿ

ವಕೀಲರಲ್ಲದವರೂ ತಮ್ಮ ಖಾಸಗಿ ಯಾ ವಾಣಿಜ್ಯ ವಾಹನಗಳಲ್ಲಿ “ವಕೀಲರ ಚಿಹ್ನೆ” ಸ್ಟಿಕ್ಕರ್ ಬಳಸುತ್ತಿರುವುದು ನಮ್ಮ ಗಮನಕ್ಕೆ ಬಂದರೆ, ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಕೆಲವೆಡೆ ವಾಹನಗಳಲ್ಲಿ ವಕೀಲರಲ್ಲದವರೂ ವಕೀಲರ ಚಿಹ್ನೆ ಬಳಸುತ್ತಿರುವ ದೂರುಗಳು ಕೇಳಿಬಂದಿದೆ. ಅಂಥವರಿಗೆ ಎಚ್ಚರಿಕೆ ನೀಡಲಾಗಿದೆ. ಇನ್ನೂ ಇಂತಹ ಘಟನೆಗಳು ಮರುಕಳಿಸಿದರೆ, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೆಎಸ್‌ಬಿಸಿ ಮುನ್ನೆಚ್ಚರಿಕೆ ನೀಡಿದೆ. ಇಂತಹ ಅಕ್ರಮದ ವಿರುದ್ಧ ಮಾಹಿತಿ ನೀಡುವಂತೆ ವಕೀಲರ ಪರಿಷತ್‌ ಸಾರ್ವಜನಿಕರಿಗೆ ಮನವಿ ಮಾಡಿದೆ. ಈ ಕುರಿತು ವಕೀಲರ ಪರಿಷತ್ತು ಅಧ್ಯಕ್ಷ ಎಸ್.ಎಸ್. ಮಿಟ್ಟಲಕೋಡ ಅವರು ಪ್ರಕಟಣೆ ಹೊರಡಿಸಿದ್ದಾರೆ.

ತಾವು ವಕೀಲರು ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದು, ಅಂತಹವರು ವಕೀಲರ ಸಮುದಾಯದ ಹೆಸರು ದುರುಪಯೋಗ ಹಾಗೂ ವಕೀಲ ವೃತ್ತಿಗೆ ಅವಮಾನ ಮಾಡುತ್ತಿದ್ದಾರೆ. ಅಂತವರ ವಿರುದ್ಧ ಸಂತ್ರಸ್ತರು ಯಾ ಸಾರ್ವಜನಿಕರು ಮಾಹಿತಿ ನೀಡುವಂತೆ ಕೋರಲಾಗಿದೆ. ವಾಹನಗಳ ಸಂಖ್ಯೆ ಅಥವಾ ಫೋಟೋವನ್ನು ಪರಿಷತ್ತಿನ ಈ ಕೆಳಗಿನ ಇ-ಮೇಲ್ ಗೆ ಕಳುಹಿಸಿಕೊಡಲು ಸೂಚಿಸಲಾಗಿದ್ದು, ಮಾಹಿತಿಯನ್ನು ಗೌಪ್ಯವಾಗಿಟ್ಟುಕೊಂಡು ಆರೋಪಿಗಳ ವಿರುದ್ಧ ಕ್ರಮ ಜರುಗಿಸುವ ಭರವಸೆಯನ್ನು ಪರಿಷತ್ತು ನೀಡಿದೆ.

Email: [email protected]

You may also like

News

ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಎತ್ತರ ಜಿಗಿತದಲ್ಲಿ ಅಶ್ಮಿತಾ ಸುವಾರಿಸ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಥೊಲಿಕ್ ಸಭಾ ಸೂರಿಕುಮೇರು ಘಟಕದಿಂದ ಅಭಿನಂದನೆ ಸೂರಿಕುಮೇರು ಚರ್ಚ್ ವ್ಯಾಪ್ತಿಯ ಅರುಣ್ ಮತ್ತು ಪ್ರೀತಿ ಸುವಾರಿಸ್ ದಂಪತಿ ಪುತ್ರಿ ಅಶ್ಮಿತಾ ಸುವಾರಿಸ್ ಬಂಟ್ವಾಳ ತಾಲೂಕು ಮಟ್ಟದಲ್ಲಿ ನಡೆದ
News

Bethany Champion Program 2025 – A Celebration of Leadership and Holistic Growth

The Bethany Champion Program was successfully hosted at Saint Raymond’s English Medium School Vamanjoor, on November 4. The event brought

You cannot copy content of this page