ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಇವರಿಗೆ ಹುಟ್ಟೂರಿನ ಬಜ್ಪೆ ಚರ್ಚ್ ನಲ್ಲಿ ಸನ್ಮಾನ
ಚರ್ಚ್ ಧರ್ಮಗುರು ಫಾದರ್ ಕುಟಿನ್ಹೊ ಹಾಗೂ ಭಕ್ತಾಧಿಗಳಿಂದ ಅಭಿನಂದನೆ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂತೋಷ್ ಡಿಸೋಜ ಬಜ್ಪೆ ಇವರನ್ನು ತನ್ನ ಹುಟ್ಟೂರಿನ ಬಜ್ಪೆಯ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಧರ್ಮ ಕೇಂದ್ರದ ಸರ್ವ ಭಕ್ತಾಧಿಗಳ ಪರವಾಗಿ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಡಾ. ರೊನಾಲ್ಡ್ ಕುಟಿನ್ಹೊ ಶಾಲು ಹೊದಿಸಿ, ಹೂಗುಚ್ಚ ನೀಡಿ ಮೇ 18ರಂದು ಭಾನುವಾರ ಪೂಜೆಯ ಬಳಿಕ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದರು. ಸಂತೋಷ್ ಡಿಸೋಜರವರು ಬಜ್ಪೆ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾಗಿ, ಕಥೊಲಿಕ್ ಸಭಾ ಘಟಕ ಅಧ್ಯಕ್ಷರಾಗಿ ಹಾಗೂ ವಲಯ ಅಧ್ಯಕ್ಷರಾಗಿ ನೀಡಿದ ನಿಷ್ಟಾವಂತ ಸೇವೆಗೆ, ಕಥೊಲಿಕ್ ಸಭಾದ ಕೇಂದ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗುವ ಮುಖಾಂತರ ಅವರನ್ನು ಚರ್ಚ್ ಪಾಲಕರಾದ ಸಂತ ಜೋಸೆಫರು ಆಶೀರ್ವದಿಸಿದ್ದಾರೆ ಎಂದು ಫಾದರ್ ಕುಟಿನ್ಹೊ ಹೇಳಿದರು.


ಈ ಶುಭ ಸಂದರ್ಭದಲ್ಲಿ ಸೈಂಟ್ ಜೋನ್ ಪಾವ್ಲ್ ದ್ವಿತೀಯ ಪುಣ್ಯ ಕ್ಷೇತ್ರದ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಜೇಸುದಾಸ್ ಡಿಕೋಸ್ತ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟ್ಯಾನಿ ಡಿಸೋಜ, ಕಾರ್ಯದರ್ಶಿ ಗ್ರೇಸಿ ಸಿಕ್ವೇರಾ ಹಾಗೂ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು. ಐರಿನ್ ಡಿಸಿಲ್ವ ಕಾರ್ಯಕ್ರಮ ನಿರೂಪಿಸಿದರು.




