ಕಿಯಾ ಮೋಟರ್ಸ್ ಇಂಡಿಯಾ ಇವರ ನೂತನ ಕಿಯಾ ಕಾರೆನ್ಸ್ ಕ್ಲಾವಿಸ್ ಕಾರು ಮಾರುಕಟ್ಟೆಗೆ
ದೇಶದ ಪ್ರಖ್ಯಾತ ಅಟೋಮೊಬೈಲ್ ಕಂಪನಿ ಕಿಯಾ ಮೋಟರ್ಸ್ ಇಂಡಿಯಾ ಇವರ ನೂತನ ಕಿಯಾ ಕಾರೆನ್ಸ್ ಕ್ಲಾವಿಸ್ ಕಾರನ್ನು ಕಿಯಾ ಇಂಡಿಯಾದ ಕರಾವಳಿ ಕರ್ನಾಟಕ ಮತ್ತು ಕೊಡಗು ಜಿಲ್ಲೆಯ ಪ್ರಥಮ ಅಧಿಕೃತ ಡೀಲರ್ ಎ.ಆರ್.ಎಂ. ಮೋಟರ್ಸ್ ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಮಾನಾಥ ಎಂಟರ್‌ಪ್ರೈಸಸ್ ಇದರ ವ್ಯವಸ್ಥಾಪಕ ನಿರ್ದೇಶಕರು ಪ್ರಸನ್ನ ಹಾಗೂ ಕಿಯಾ ಕಾರೆನ್ಸ್ ಕ್ಲಾವಿಸ್ ಕಾರಿನ ಗ್ರಾಹಕರಾದ ಮಹಮ್ಮದ್ ರಶೀದ್‌ರವರು ನೂತನ ಕಾರನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಎ.ಆರ್.ಎಂ. ಮೋಟರ್ಸ್‌ನ ಎಂ.ಡಿ. ಆರೂರು ಗಣೇಶ್ ರಾವ್, ಡೈರೆಕ್ಟರ್ಸ್ ಆರೂರು ವರುಣ್ ರಾವ್, ಆರೂರು ವಿಕ್ರಂ ರಾವ್ ಹಾಗೂ ಸಂಸ್ಥೆಯ ಜನರಲ್ ಮ್ಯಾನೇಜರ್-ಸೇಲ್ಸ್ ನಿತೀನ್ ಕೃಷ್ಣ, ಜನರಲ್ ಮ್ಯಾನೆಜರ್ ಸರ್ವೀಸ್- ಶಶಿಕುಮಾರ್, ಸೇಲ್ಸ್ ಮ್ಯಾನೇಜರ್ ಹರೀಶ್ ರಾವ್ ಉಪಸ್ಥಿತರಿದ್ದರು. ಬಿಡುಗಡೆಗೊಂಡ ನೂತನ ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಕಾರು ಹೊಸ ವಿನ್ಯಾಸದೊಂದಿಗೆ ಅತ್ಯಾಧುನಿಕ ವೈಶಿಷ್ಟ್ಯಗಳಾದ ಡ್ಯುಯಲ್ ಪ್ಯಾನರೋಮಿಕ್ ಸನ್‌ರೂಫ್, 26.62 ಡ್ಯೂಯಲ್ ಪ್ಯಾನರೋಮಿಕ್ ಡಿಸ್‌ಪ್ಲೇ, ಅಡಾಸ್ ಲೆವೆಲ್ 2, ವೆಂಟಿಲೇಟೆಡ್ ಸೀಟ್, 17″ ಕ್ರಿಸ್ಟಲ್ ಕಟ್ ಅಲಾಯ್ ವೀಲ್, 8 ಬೋಸ್ ಪ್ರೀಮಿಯಂ ಸ್ಪೀಕರ್, ಐಸ್‌ಕ್ಯೂಬ್ LED ಹೆಡ್‌ಲ್ಯಾಂಪ್ಸ್ ಅಲ್ಲದೆ ಕ್ಲಾವೀಸ್ ಕಾರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯಗಳನ್ನು ಹೊಂದಿದೆ. ಸಂಸ್ಥೆಯ ಟೀಮ್ ಮ್ಯಾನೇಜರ್ ಡಿಂಪಲ್ ಸಾಲ್ಯಾನ್ ವಾಹನದ ವೈಶಿಷ್ಟ್ಯಗಳನ್ನು ವಿವರಿಸಿದರು. ಕಸ್ಟಮರ್ ಕೇರ್ ಮ್ಯಾನೇಜರ್ ದೀಕ್ಷಾ ಅಂಚನ್‌ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನೂತನ ಕೀಯಾ ಕ್ಯಾರೆನ್ಸ್ ಕ್ಲಾವೀಸ್ ಕಾರು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು ಅತ್ಯಾಧುನಿಕ ಸೇಫ್ಟಿ ವಿಶೇಷತೆಗಳೊಂದಿಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಇಂಜಿನಲ್ಲಿ ಲಭ್ಯವಿದೆ.

ನೂತನ ವಾಹನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಥವಾ ಟೆಸ್ಟ್ ಡ್ರೈವ್‌ಗಾಗಿ ಎ.ಆರ್.ಎಂ. ಮೋಟಾರ್ಸ್‌ನ ಮಂಗಳೂರಿನ ಕದ್ರಿ, ಕಣ್ಣೂರು, ಕೂಳೂರು ಹಾಗೂ ಉಡುಪಿ ಮತ್ತು ಕುಶಾಲನಗರ ಶಾಖೆಯನ್ನು ಸಂಪರ್ಕಿಸಬಹುದು. ಗ್ರಾಹಕರ ವಿನಂತಿಯ ಮೇರೆಗೆ ಸಂಸ್ಥೆಯು ಎಲ್ಲಾ ಆದಿತ್ಯವಾರವೂ ತೆರೆದಿರುತ್ತದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿರುತ್ತದೆ.




