SKSSF ವತಿಯಿಂದ ಆತೂರಿನಲ್ಲಿ ಸಾಮೂಹಿಕ ವಿವಾಹ
ರಾಮಕುಂಜ ಬದ್ರಿಯಾ ಜುಮಾ ಮಸೀದಿ ಆತೂರು ಹಾಗೂ SKSSF ಆತೂರು ಶಾಖೆ ಇದರ ವತಿಯಿಂದ 2 ಬಡ ಸಹೋದರಿಯರ ಸಾಮೂಹಿಕ ವಿವಾಹ ಕಾರ್ಯಕ್ರಮವು ಮೇ 18ರಂದು ಆತೂರು ಸುಲ್ತಾನುಲ್ ಹಿಂದ್ ವೇದಿಕೆಯಲ್ಲಿ ನಡೆಯಿತು. ಉಸ್ತಾದ್ ಉಸ್ಮಾನ್ ಫೈಝಿ ತೋಡರು ನಿಖಹ್ ಗೆ ನೇತೃತ್ವ ನೀಡಿ ಸಂದೇಶ ಭಾಷಣ ಮಾಡಿದರು. ಅಸ್ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಗಳ್ ಆತೂರುರವರು ಕಾರ್ಯಕ್ರಮದ ಉದ್ಘಾಟನೆಯ ಮೂಲಕ ದುಆಗೆ ನೇತೃತ್ವ ನೀಡಿದರು. ಅಹಮದ್ ಕುಂಞಿರವರು ಅಧ್ಯಕ್ಷತೆ ವಹಿಸಿದರು. ಮುಹಮ್ಮದ್ ಮುಸ್ಲಿಯಾರ್ ಮುಂದೊಳೆ ಮುಖ್ಯ ಪ್ರಭಾಷಣ ಮಾಡಿದರು.


ಕಾರ್ಯಕ್ರಮದಲ್ಲಿ ಸತ್ತಾರ್ ಅಸ್ ನವಿ, ಆಸೀಫ್ ಆಝ್ ಹರಿ, ಅಬ್ದುಲ್ ಸಮದ್ ಅನ್ಸಾರಿ, ಹಂಝ ಸಖಾಫಿ, ಹನೀಫ್ ಅಸ್ಲಾಮಿ, ರಿನಾಝ್ ಬುರ್ ಹಾನಿ, ಬಶೀರ್ ಸಹದಿ ನಾವೂರು, ಸಫ್ವನ್ ಜಾಹರಿ ಬೈತಡ್ಕ, ಅಬ್ದುಲ್ಲ ಮುಸ್ಲಿಯಾರ್, ಸೌಕತ್ ಅಸ್ಲಾಮಿ, ಮುಹಮ್ಮದ್ ಸಫ್ವನ್ ಯಮಾನಿ, ಅಬ್ದುಲ್ ರಹಿಮಾನ್, ಸಿದ್ದಿಕ್ ಫೈಝಿ, ಬಿ.ಕೆ. ಮುಹಮ್ಮದ್ ಹಾಜಿ, ಖಲಿಲ್ ಹಾಜಿ, ಮುಹಮ್ಮದ್ ರಫೀಕ್ ಜಿ., ಇಸಾಕ್ ಎನ್ ಎ., ನೌಫಲ್, ಅಶ್ರಫ್, ಎಚ್. ಗಫರ್ ಹಾಜಿ, ಸಿರಾಜ್ ಬಡ್ಡಮೆ, ಬಿ.ಅರ್. ಅಬ್ದುಲ್ ಖಾದರ್, ಇಸ್ಮಾಯಿಲ್ ವೈ., ಹನೀಫ್ ಜನಪ್ರಿಯ, ನಾಸಿರ್ ಕಲಾಯಿ, ಇಸ್ಮಾಯಿಲ್ ಗೊಳಿತ್ತಾಡಿ ಉಪಸ್ಥಿತರಿದ್ದರು. ಸಮಸ್ತ ಪಬ್ಲಿಕ್ ಪರೀಕ್ಷೆಯಲ್ಲಿ, ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತಿರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಅಬೂ ಉವೈಸ್ ಅಸ್ಲಾಮಿ ಖಿರಹತ್ ಪಠಿಸಿದರು. ಝಕರಿಯಾ ಮುಸ್ಲಿಯಾರ್ ಸ್ವಾಗತಿಸಿ, ರಫೀಕ್ ಗೊಳಿತ್ತಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಬಿ.ಕೆ. ಅಬ್ದುಲ್ ರಝಕ್, ಸಿದ್ದಿಕ್ ಎನ್., ಅಝೀಝ್ ಪಲ್ತಾಡಿ, ನಾಸಿರ್ ಮರೋಡಿ, ಜೈನುದ್ದೀನ್, ಸಿರಾಜ್, ಉಮರುಲ್ ಫಾರೂಕ್, ಮುನೀರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.




