November 8, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬ್ಯಾರಿ ಜಾನಪದ ಕಥೆಗಳ ಇಂಗ್ಲಿಷ್ ಅನುವಾದಿತ ಕೃತಿ ಬಿಡುಗಡೆ

ನಾಡಿನ ಬೇರೆ ಬೇರೆ ಲೇಖಕ-ಲೇಖಕಿಯರು ಬ್ಯಾರಿ ಭಾಷೆಯಲ್ಲಿ ಬರೆದ ಜಾನಪದ ಕತೆಗಳ ಸಂಕಲನ “ಚನ್ನನ”ದ ಇಂಗ್ಲಿಷ್ ಅನುವಾದಿತ ಕೃತಿ ’The Fakir’s Daughter and other Beary Folktales” ಅನ್ನು ಮಂಗಳೂರು ನಗರದ ಸೈಂಟ್ ಅಲೋಶಿಯಸ್ ಡೀಮ್ಡ್ ವಿಶ್ವ ವಿದ್ಯಾನಿಲಯ ಅಡ್ಮಿನ್ ಬ್ಲಾಕ್‌ನ ಸಭಾಂಗಣದಲ್ಲಿ ಮೇ 21ರಂದು ಬುಧವಾರ ಬಿಡುಗಡೆಗೊಳಿಸಲಾಯಿತು.

ಸೈಂಟ್ ಅಲೋಶಿಯಸ್ ಡೀಮ್ಡ್ ವಿವಿಯ ಉಪಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಕೃತಿಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಭಾಷೆ ಮತ್ತು ಸಾಂಸ್ಕ್ರತಿಕ ಅಧ್ಯಯನ ನಿಕಾಯವು ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಸಂಸ್ಕೃತಿ ನೆಲೆನಿಲ್ಲಲು ಇಂತಹ ವೌಲಿಕ ಕೃತಿಗಳ ಪ್ರಕಟನೆಯ ಅಗತ್ಯವೂ ಇದೆ. ಇವುಗಳನ್ನು ಓದುವ ಮೂಲಕ ಸಂಸ್ಕೃತಿ – ಬದುಕಿನ ಬಗ್ಗೆ ಅರಿಯಲು ಸಾಧ್ಯವಿದೆ ಎಂದರು.

ಕೃತಿಯ ಸಂಪಾದಕ, ಪತ್ರಕರ್ತ ಹಂಝ ಮಲಾರ್ ಮಾತನಾಡಿ ಬ್ಯಾರಿ ಕ್ಷೇತ್ರಕ್ಕೆ ಸಂಬಂಧಿಸಿ ಈವರೆಗೆ ಬ್ಯಾರಿ, ಕನ್ನಡ, ಇಂಗ್ಲಿಷ್‌ನಲ್ಲಿ 125 ಕೃತಿಗಳು ಪ್ರಕಟಗೊಂಡಿವೆ. ಆದರೆ ಬ್ಯಾರಿ ಭಾಷೆಯಲ್ಲಿ ಪ್ರಕಟಗೊಂಡ ಕೃತಿ ಇದೇ ಮೊದಲ ಬಾರಿಗೆ ಇಂಗ್ಲಿಷ್‌ಗೆ ಅನುವಾದಗೊಂಡಿದೆ. ಅದಕ್ಕಾಗಿ ಅನುವಾದಕಿ ಡಾ. ಸಿಲ್ವಿಯಾ ರೇಗೋ ಅಭಿನಂದನಾರ್ಹರು ಎಂದರು. ವೇದಿಕೆಯಲ್ಲಿ ಹಿರಿಯ ಸಂಶೋಧಕ ವಂದನೀಯ ಡಾ. ವಿಲ್ಲಿ ಡಿಸಿಲ್ವ, ಕೃತಿಯ ಅನುವಾದಕಿ – ಸೈಂಟ್ ಅಲೋಶಿಯಸ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕಿ ಡಾ. ಸಿಲ್ವಿಯಾ ರೇಗೋ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳನ್ನು ಡಾ. ಝೀಟ ಲೋಬೊ ಪರಿಚಯಿಸಿದರು. ಕೊಂಕಣಿ ವಿಭಾಗದ ಮುಖ್ಯಸ್ಥೆ ಪ್ರೊ. ಫ್ಲೋರಾ ಕ್ಯಾಸ್ಟಲಿನೊ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಜೊಕಿಂ ಪಿಂಟೊ ವಂದಿಸಿದರು. ರೇಡಿಯೋ ಸಾರಂಗ್‌ನ ಕಾರ್ಯಕ್ರಮ ನಿರ್ವಾಹಕ ಸೈಫ್ ಕುತ್ತಾರ್ ಸಹಕರಿಸಿದರು. ಪ್ರಾಧ್ಯಾಪಕ ಸ್ಯಾಮುವೆಲ್ ಪೀಟರ್ಸ್ ಕಾರ್ಯಕ್ರಮ ನಿರೂಪಿಸಿದರು.

You may also like

News

ಸೈಂಟ್ ತೆರೆಸಾ ಆಫ್ ಲಿಶುಕ್ಸ್ ರವರ ಸಂತ ಪದವಿಯ ಶತಮಾನೋತ್ಸವ

ನಾಳೆ ನವೆಂಬರ್ 9ರಂದು ಬೆಂದೂರ್ ಚರ್ಚ್ ಇಲ್ಲಿ ದಿವ್ಯ ಬಲಿಪೂಜೆ   ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾರವರ ನೇತೃತ್ವ ಸೈಂಟ್ ತೆರೆಸಾ ಆಫ್
News

ಪ್ರಾಥಮಿಕ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ನೇರಳಕಟ್ಟೆಯ ತರುಣ್ ಕೃಷ್ಣ ಜಿ.ಎಸ್. ರಾಜ್ಯ ಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಜರಗುವ ರಾಜ್ಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟಕ್ಕೆ ಬಂಟ್ವಾಳ ತಾಲೂಕಿನ ನೇರಳಕಟ್ಟೆಯ ತರುಣ್ ಕೃಷ್ಣ ಜಿ.ಎಸ್.  ಆಯ್ಕೆಯಾಗಿರುತ್ತಾನೆ.

You cannot copy content of this page