ಮಿಫ್ತಾಉಲ್ ಉಲೂಂ ಮದ್ರಸಾದಲ್ಲಿ ಅದ್ದೂರಿಯಾಗಿ ನಡೆದ ಬೇಸಿಗೆ ರಜಾ ಶಿಬಿರ – 2025
ಮಾಣಿ ಇಲ್ಲಿನ ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿ ಅಧೀನದ ಮಿಫ್ತಾಉಲ್ ಉಲೂಂ ಮದ್ರಸಾದಲ್ಲಿ ಆರು ದಿನಗಳ ಬೇಸಿಗೆ ರಜಾ ಶಿಬಿರ – 2025 ಎಂಬ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಹುಮ್ಮಸ್ಸು ಹೆಚ್ಚಿಸುವ ಉದ್ದೇಶದಿಂದ ಈ ಶಿಬಿರವನ್ನು ನಡೆಸಲಾಯಿತು. ಶಿಬಿದವನ್ನು ಅಧ್ಯಕ್ಷ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಉದ್ಘಾಟಿಸಿದರು, ಹಸೈನಾರ್ ಸಅದಿ ಪೆರ್ಲ, ನಾಸಿರ್ ಸಅದಿ ನೇರಳಕಟ್ಟೆ, ಹನೀಫ್ ಸಅದಿ ಸೆರ್ಕಳ, ಮುಸ್ತಫಾ ಸಅದಿ ರಿಯಾದ್, ತರಗತಿಗಳನ್ನು ನಡೆಸಿಕೊಟ್ಟರು.

ಶಿಬಿರದಲ್ಲಿ ಮೋಟಿವೇಶನ್ ಸಹಿತ ವಿವಿಧ ತರಗತಿಗಳು, ಕ್ವಿಝ್, ಸ್ಪರ್ಧೆಗಳೊಂದಿಗೆ ಬಹುಮಾನ ಮತ್ತು ಸ್ಮರಣಿಕೆ ವಿತರಣೆ ನಡೆಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು. ಮದ್ರಸಾ ಸಮಿತಿಯ ಚೆಯರ್‌ಮೆನ್ ಹನೀಫ್ ಸಂಕ, ಕನ್ವೀನರ್ ಅಝೀಂ ನೆಲ್ಲಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಸೀದಿ ಪ್ರಧಾನ ಕಾರ್ಯದರ್ಶಿ ಅಮೀರುದ್ದೀನ್, ಸದಸ್ಯರುಗಳಾದ ಅಬ್ದುಲ್ ಕರೀಂ ನೆಲ್ಲಿ, ಹಂಝ ಕಾಯರಡ್ಕ, ಅಶ್ರಫ್ ಸಖಾಫಿ, ಮದ್ರಸಾ ಸಮಿತಿ ಸದಸ್ಯರುಗಳಾದ ನಾಸಿರ್ ಬದ್ರಿಯಾ ಗ್ರೌಂಡ್, ಅಬ್ದುರ್ರಹ್ಮಾನ್ ಪುತ್ತು, ಇಬ್ರಾಹಿಂ ನೆಲ್ಲಿ ಮುಂತಾದವರು ಉಪಸ್ಥಿತರಿದ್ದರು.




