ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್‌ಗೆ ನೂತನ ಧರ್ಮಗುರುಗಳಾಗಿ ಫಾದರ್ ಪ್ಯಾಟ್ರಿಕ್ ಸಿಕ್ವೇರಾ ನೇಮಕ
ಮೇ 25ರಂದು ಆದಿತ್ಯವಾರ ಅಧಿಕಾರ ಸ್ವೀಕಾರ

ಮಂಗಳೂರು ಧರ್ಮಕ್ಷೇತ್ರದ ಸೂರಿಕುಮೇರು ಬೊರಿಮಾರ್ ಧರ್ಮಕೇಂದ್ರಕ್ಕೆ ನೂತನ ಧರ್ಮಗುರುಗಳಾಗಿ ವಂದನೀಯ ಫಾದರ್ ಪ್ಯಾಟ್ರಿಕ್ ಸಿಕ್ವೇರಾರವರನ್ನು ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ನೇಮಿಸಿದ್ದಾರೆ.


ವಂದನೀಯ ಫಾದರ್ ಪ್ಯಾಟ್ರಿಕ್ ಸಿಕ್ವೇರಾರವರು ಬೋಂದೆಲ್, ಪಕ್ಷಿಕೆರೆ ಮತ್ತು ಕುಲಶೇಕರ ಚರ್ಚ್ ಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಹಾಗೂ ಪ್ರಸ್ತುತ ಬೆಳ್ಳೂರು ಚರ್ಚ್ ನಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

132 ವರ್ಷಗಳ ಇತಿಹಾಸವಿರುವ ಸಂತ ಜೋಸೆಫರ ದೇವಾಲಯಕ್ಕೆ 27ನೇ ಧರ್ಮಗುರುಗಳಾಗಿ ಮೇ 25ರಂದು ಆದಿತ್ಯವಾರ ಸಂಜೆ 4:00 ಗಂಟೆಗೆ ಸೂರಿಕುಮೇರು ಬೊರಿಮಾರ್ ಚರ್ಚ್ ನ ಪ್ರಸ್ತುತ ಧರ್ಮಗುರು ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜರವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ಬಿಷಪ್ ಪ್ರತಿನಿದಿಯಾಗಿ ವಿಟ್ಲ ವಲಯದ ಶ್ರೇಷ್ಠ ಗುರು ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ರವರು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಬಂಟ್ವಾಳ ಹಾಗೂ ವಿಟ್ಲ ವಲಯದ ಇತರ ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಭಕ್ತಾಧಿಗಳು ಉಪಸ್ಥಿತಲಿರುವರು ಎಂದು ಸೂರಿಕುಮೇರು ಬೊರಿಮಾರ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್, ಆಯೋಗಗಳ ಸಂಯೋಜಕ ಎಲಿಯಾಸ್ ಪಿರೇರಾ ಹಾಗೂ ಕಥೊಲಿಕ್ ಸಭಾ ಸೂರಿಕುಮೇರು ಬೊರಿಮಾರ್ ಘಟಕದ ಅಧ್ಯಕ್ಷ ತೊಮಸ್ ಲಸ್ರಾದೊ ಪ್ರತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.




