May 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ವತಿಯಿಂದ ಪೀಡಿಯಾಕಾನ್ – 2025 ಪ್ರಾದೇಶಿಕ ಸಮ್ಮೇಳನ

ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್ ಅಧೀನದಲ್ಲಿರುವ ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ವತಿಯಿಂದ ಸ್ವಿಫ್ಟ್ ಹ್ಯಾಂಡ್ಸ್-ಸೇಫ್‌ಗಾರ್ಡಿಂಗ್ ಲಿಟಲ್ ಲೈವ್ಸ್ ಎಂಬ ಧ್ಯೇಯದಡಿ ಪೀಡಿಯಾಕಾನ್-2025 ಪ್ರಾದೇಶಿಕ ಸಮ್ಮೇಳನ ಕಾಲೇಜಿನ ಫ್ಲೋರೆನ್ಸ್ ನೈಂಟಿಗೇಲ್ ಸಭಾಂಗಣದಲ್ಲಿ ನಡೆಯಿತು.

ಮಕ್ಕಳ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ನರ್ಸ್ ಗಳ ಕೌಶಲ್ಯ ವೃದ್ಧಿಯ ದೃಷ್ಟಿಯಿಂದ ಆಯೋಜಿಸಿದ್ದ ಈ ಸಮ್ಮೇಳನದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿ ಫಾದರ್ ಮುಲ್ಲರ್ ಹೆಲ್ತ್ ಕೇರ್ ಸಿಮ್ಯುಲೇಶನ್ ಎಜ್ಯುಕೇಶನ್‌ನ ಮುಖ್ಯಸ್ಥ ಡಾ| ಲುಲು ಶರೀಫ್ ಮಹ್ಮೂದ್ ರವರು, ಗರ್ಭಾಶಯದಿಂದ ನವಜಾತ ಶಿಶುವಿನವರೆಗಿನ ಸೂಕ್ಷ್ಮ ಆರೈಕೆಯ ಕುರಿತು ವಿವರಿಸಿದರು.

ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ ನ ನಿರ್ದೇಶಕ ವಂದನೀಯ ಫಾದರ್ ರಿಚ್ಚಾರ್ಡ್ ಅಲೋಶಿಯಸ್ ಕುವೆಲ್ಲೊ ಮಾತನಾಡಿ ತುರ್ತು ಸಂದರ್ಭಗಳಲ್ಲಿ ಮಕ್ಕಳ ಆರೈಕೆ, ಆರೋಗ್ಯದ ಸಮಯೋಚಿತ ನಿರ್ವಹಣೆ ಅತಿ ಅಗತ್ಯವಾಗಿದೆ ಎಂದರು.

ಸಮಾರಂಭದಲ್ಲಿ ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ ನ ನಿಯೋಜಿತ ನಿರ್ದೇಶಕ ವಂದನೀಯ ಫಾದರ್ ಪಾವುಸ್ತಿನ್ ಲುಕಾಸ್ ಲೋಬೊ, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ವಂದನೀಯ ಫಾದರ್ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ವೈದ್ಯಕೀಯ ಅಧೀಕ್ಷಕ ಡಾ| ಕಿರಣ್ ಶೆಟ್ಟಿ, ಆಯೋಜನಾ ಸಮಿತಿ ಕಾರ್ಯದರ್ಶಿ ಜಾಯ್ಸ್ ಫೆನಾಂಡಿಸ್ ಉಪಸ್ಥಿತರಿದ್ದರು. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಭಗಿನಿ ಡಾ| ಜೂಡಿ ಸ್ವಾಗತಿಸಿದರು. ಆಯೋಜನಾ ಸಮಿತಿಯ ಜಾನೆಟ್ ಸಿಕ್ವೇರಾ ವಂದಿಸಿದರು. ಸಹ ಪ್ರಾಧ್ಯಾಪಕಿ ಡಾ| ಎಡ್ವಿನಾ ಫಿಲಿಪ್ ಮೊನಿಸ್ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಪ್ರಿನ್ಸಿಟಾ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಕಾಲೇಜುಗಳ ಒಟ್ಟು 211 ಮಂದಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

You may also like

News

ಉಡುಪಿ ಧರ್ಮಕ್ಷೇತ್ರದ ನೂತನ ಶ್ರೇಷ್ಠ ಗುರುಗಳಾಗಿ ವಂದನೀಯ ಫಾದರ್ ಫ್ರಾನ್ಸಿಸ್ ಕ್ಸೇವಿಯರ್ ಲೂವಿಸ್ ನೇಮಕ

ಬಿಷಪ್ ಪರಮ ಪೂಜ್ಯ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರಿಂದ ಅಧಿಕಾರ ಸ್ವೀಕಾರ ಉಡುಪಿ ಧರ್ಮಕ್ಷೇತ್ರದ ನೂತನ ಬಿಷಪ್ ಪರಮ ಪೂಜ್ಯ ಅತೀ ವಂದನೀಯ ಡಾ. ಲೆಸ್ಲಿ
News

ಉಡುಪಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವಾರ್ಷಿಕ ಸಭೆ – ಸಂಘಟನೆ ಬಲವರ್ಧನೆಗೆ ಪಣ

ಉಡುಪಿ: ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವಾರ್ಷಿಕ ಮಹಾಸಭೆಯು ಮೇ 1ರಂದು ಶುಕ್ರವಾರ ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯಶಸ್ವಿಯಾಗಿ ಜರುಗಿತು. ಜಿಲ್ಲೆಯ ಯುವ ಶಕ್ತಿಯನ್ನು ರಾಜಕೀಯವಾಗಿ

You cannot copy content of this page