ICYM ಸೂರಿಕುಮೇರು ಬೊರಿಮಾರ್ ಘಟಕಕ್ಕೆ ನೂತನ ಅಧ್ಯಕ್ಷ ರಿಯೋನ್ ಮೊನಿಸ್ ಹಾಗೂ ಉಪಾಧ್ಯಕ್ಷೆಯಾಗಿ ವಿಶಾ ಡಿಸೊಜ ಸರ್ವಾನುಮತದಿಂದ ಆಯ್ಕೆ
ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ಇದರ ICYM ಸೂರಿಕುಮೇರು ಬೊರಿಮಾರ್ ಘಟಕಕ್ಕೆ 2025-26ನೇ ಸಾಲಿನ ವಾರ್ಷಿಕ ಚುನಾವಣೆಯು ಚರ್ಚ್ ಧರ್ಮಗುರು ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜರವರ ಮಾರ್ಗದರ್ಶನದಲ್ಲಿ ಮೇ 18ರಂದು ಆದಿತ್ಯವಾರ ನಡೆಯಿತು. ನೂತನ ಅಧ್ಯಕ್ಷರಾಗಿ ರಿಯೋನ್ ಸ್ನೇಹಿತ್ ಮೊನಿಸ್ ಹಾಗೂ ಉಪಾಧ್ಯಕ್ಷೆಯಾಗಿ ವಿಶಾ ಡಿಸೋಜ ಸರ್ವಾನುವತದಿಂದ ಆಯ್ಕೆಯಾದರು.

ಪದಾಧಿಕಾರಿಗಳಾಗಿ ಕಾರ್ಯದರ್ಶಿ ಸವಿತಾ ಪಿಂಟೊ, ಸಹ ಕಾರ್ಯದರ್ಶಿ ಮೆಲಿಟಾ ಪಾಯ್ಸ್, ಖಜಾಂಚಿ ಕಿರಣ್ ಸಿಕ್ವೇರಾ, ಆಮ್ಚೊ ಯುವಕ್ ಪ್ರತಿನಿಧಿ ವಿನಿಶಾ ಮಸ್ಕರೇನ್ಹಸ್, ರೆಡ್ ಡ್ರಾಪ್ ಪ್ರತಿನಿದಿ ಅರ್ವಿನ್ ಪಿಂಟೊ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪ್ರತಿನಿದಿ ಲೆಸ್ಟರ್ ಡಿಕುನ್ಹಾ ಆಯ್ಕೆಯಾದರು. ನಿಕಟ ಪೂರ್ವ ಅಧ್ಯಕ್ಷೆ ಪ್ರಿನ್ಸಿಟಾ ಡಿಸೋಜ ಆಗಿರುತ್ತಾರೆ. ಇವರೆಲ್ಲರಿಗೂ ಇಂದು ಮೇ 25ರಂದು ಆದಿತ್ಯವಾರ ಪೂಜೆಯ ಬಳಿಕ ಪ್ರಮಾಣ ವಚನ ಬೋಧಿಸಲಾಯಿತು.

ಆಯ್ಕೆಗೊಂಡ ಎಲ್ಲರಿಗೂ ಚರ್ಚ್ ಧರ್ಮಗುರು ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್, ಆಯೋಗಗಳ ಸಂಯೋಜಕ ಎಲಿಯಾಸ್ ಪಿರೇರಾ ಹಾಗೂ ಕಥೊಲಿಕ್ ಸಭಾ ಅಧ್ಯಕ್ಷ ತೊಮಸ್ ಲಸ್ರಾದೊ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.




