ಮೊಗರ್ನಾಡ್ ಚರ್ಚ್ ನಲ್ಲಿ ಯುವಕರಿಗೆ ಮತ್ತು ಪುರುಷರಿಗೆ ಕಾರ್ಮಿಕರ ದಿನ ಆಚರಣೆ
ದೇವ ಮಾತಾ ಚರ್ಚ್ ಮೊಗರ್ನಾಡ್ ಇದರ 250ನೇ ವರ್ಷದ ಜುಬಿಲಿ ಆಚರಣಾ ಸಂದರ್ಭದಲ್ಲಿ ಚರ್ಚ್ ನಲ್ಲಿ ಕಾರ್ಮಿಕ ದಿನ ಹಾಗೂ ಪುರುಷರ ದಿನವನ್ನು ಮೇ 25ರಂದು ಆದಿತ್ಯವಾರ ಸಂಭ್ರಮದಿಂದ ಆಚರಿಸಲಾಯಿತು.



ದಿವ್ಯ ಬಲಿಪೂಜೆಯೊಂದಿಗೆ ಪ್ರಾರಂಭಗೊಂಡ ಆಚರಣೆಯಲ್ಲಿ ಮೊಗರ್ನಾಡ್ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊರವರು ಬಲಿಪೂಜೆಯ ನೇತೃತ್ವವನ್ನು ವಹಿಸಿದ್ದರು. ವಂದನೀಯ ಫಾದರ್ ಜೋಸೆಫ್ ಕಿರಣ್ ಮೊಂತೇರೊ ಮತ್ತು ವಂದನೀಯ ಫಾದರ್ ರೋಹನ್ ಡಿಸೋಜರವರು ಬಲಿಪೂಜೆಯಲ್ಲಿ ಭಾಗವಹಿಸಿದ್ದರು.








ಪೂಜೆಯ ಬಳಿಕ ಕಾರ್ಮಿಕರ ಸಮಾವೇಶವನ್ನು ಚರ್ಚ್ ಸಭಾಂಗಣದಲ್ಲಿ ನೆರವೇರಿಸಲಾಯಿತು. ಮುಖ್ಯ ಅತಿಥಿಗಳಾಗಿ ದೇವ ಮಾತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೊ, ಬಂಟ್ವಾಳ ಕಾರ್ಮಿಕ ಇಲಾಖೆಯ ಇನ್‌ಸ್ಪೆಕ್ಟರ್ ಲವೀನಾ ಡಿಸೋಜ, ಅರುಣ್ ರಾಯ್ ರೊಡ್ರಿಗಸ್, ಸಂತ ಅಂತೋನಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ಆ್ಯನಿ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ‍್ಯದರ್ಶಿ ವಿಲ್‌ಫ್ರೆಡ್ ಲೋಬೊ, ಆಯೋಗಗಳ ಸಂಯೋಜಕಿ ಎಮಿಲಿಯಾ ಡಿಕುನ್ಹಾ, ಜುಬಿಲಿ ಆಚರಣೆಯ ಸಮಿತಿಯ ಸಂಚಾಲಕ ನವೀನ್ ರಾಜೇಶ್ ಉಪಸ್ಥಿತರಿದ್ದರು. ಮೊಗರ್ನಾಡ್ ಚರ್ಚ್ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ ಸ್ವಾಗತಿಸಿದರು. ಲವೀನಾ ಡಿಸೋಜರವರು ಕಾರ್ಮಿಕರ ಸೌಲಭ್ಯಗಳು, ಕಾರ್ಮಿಕರ ಕಾರ್ಡು ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.


















ಈ 250ನೇ ವರ್ಷಾಚರಣೆಯ ಸಲುವಾಗಿ ಚರ್ಚಿನ 5 ವಲಯಗಳ ಯುವಕರ ಮತ್ತು ಪುರುಷರ ವಿಶೇಷ ಸಾಧನೆಗಳನ್ನು ಗುರುತಿಸಿ ಅವರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು. ಚರ್ಚ್ ನ 5 ವಲಯಗಳಿಗೆ ಸಾಂಸ್ಕೃತಿಕ ಕಾರ‍್ಯಕ್ರಮಗಳ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಮುಖ್ಯ ತೀರ್ಪುಗಾರರಾಗಿ ಅರುಣ್ ರೋಯ್ ರೊಡ್ರಿಗಸ್ ಮತ್ತು ಲವೀನಾ ಡಿಸೋಜ ಸಹಕರಿಸಿದರು. ಸತೀಶ್ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದ ಬಳಿಕ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.




