ಕೊಳತ್ತಮಜಲು ರಹಿಮಾನ್ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ – AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್
ಬಂಟ್ವಾಳದ ಕೊಳತ್ತಮಜಲು ಅಬ್ದುಲ್ ರಹಿಮಾನ್ ಎಂಬ ಯುವಕನನ್ನು ಮೇ 27ರಂದು ಮಂಗಳವಾರ ದುಷ್ಕರ್ಮಿಗಳು ವ್ಯವಸ್ಥಿತ ಹಾಗೂ ಪೂರ್ವ ಯೋಜಿತವಾಗಿ ಹತ್ಯೆ ಮಾಡಿದ್ದು, ಹತ್ಯೆಯ ಸಂಚುದಾರರು ಈ ಹಿಂದೆಯೇ ಬಹಿರಂಗವಾಗಿ ಘೋಷಿಸಿದ್ದು ಪೊಲೀಸರು ಕೂಡಲೇ ಹತ್ಯೆಯಲ್ಲಿ ಭಾಗಿಯಾದ ನೇರ ಮತ್ತು ಪರೋಕ್ಷ ಕೃತ್ಯದಾರರನ್ನು ಬಂಧಿಸಬೇಕಿದೆ.

ಅಮಾಯಕ ವ್ಯಕ್ತಿಯ ಹತ್ಯೆ ಖಂಡನೀಯ. ಹತ್ಯೆದಾರರು ಈ ಕೊಲೆಯನ್ನು ಮತೀಯ ದ್ವೇಷದಿಂದ ಕೊಲೆ ಮಾಡಿದ್ದಾರೆ. ಅಬ್ದುಲ್ ರಹಿಮಾನ್ ಎಂಬ ವ್ಯಕ್ತಿ ಯಾರಿಂದಲೂ ದ್ವೇಷಕ್ಕೆ ಗುರಿಯಾಗಿದ್ದ ವ್ಯಕ್ತಿ ಅಲ್ಲ. ಮರಳು ಸಾಗಣಿಕೆ ಪೂರೈಸಲು ಬರ ಮಾಡಿಕೊಂಡು ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳ ಇಂತಹ ನಡೆ ಖಂಡನೀಯ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ದುಷ್ಕರ್ಮಿಗಳನ್ನು ಶೀಷ್ರ ಬಂಧಿಸುವಂತೆ AICU ರಾಜ್ಯಾಧ್ಯಕ್ಷ ಹಾಗೂ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ತೀವ್ರವಾಗಿ ಖಂಡಿಸಿದ್ದಾರೆ.




