ಅಬ್ದುಲ್ ರಹಿಮಾನ್ ಎಂಬವರ ಕೊಲೆ ಪ್ರಕರಣದ ಮೂವರು ಆರೋಪಿಗಳ ಸೆರೆ
ಪಿಕಪ್ ಚಾಲಕ ಅಬ್ದುಲ್ ರೆಹಮಾನ್ ಯಾನೆ ರಹೀಂ ಅವರ ಕೊಲೆ ಪ್ರಕರಣದಲ್ಲಿ ಆರೋಪಿಗಳ ಶೀಘ್ರ ಪತ್ತೆಗಾಗಿ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರನ್ನು ಪ್ರಕರಣದ ತನಿಖಾಧಿಕಾರಿಯನ್ನಾಗಿ ನೇಮಿಸಿ 5 ತನಿಖಾ ತಂಡಗಳನ್ನು ರಚಿಸಿ ಆರೋಪಿಯ ಪತ್ತೆ ಕಾರ್ಯವನ್ನು ನಡೆಸಲಾಗಿದೆ. ಆದರಂತೆ ಮೇ 29ರಂದು ಗುರುವಾರ ಬಂಟ್ವಾಳ ಕಳ್ಳಿಗೆ ಗ್ರಾಮದ ಕನಪಾಡಿ ಎಂಬಲ್ಲಿ ದೀಪಕ್, ಪ್ರಥ್ವಿರಾಜ್ ಹಾಗೂ ಚಿಂತನ್ ಎಂಬ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಅವರ ವಿಚಾರಣೆಯನ್ನು ನಡೆಸಲಾಗುತ್ತದೆ. ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ವಶಕ್ಕೆ ಪಡೆಯಲಾಗಿರುವ ಆರೋಪಿಗಳ ವಿವರ :-
1 ದೀಪಕ್ (21) ತಂದೆ ದಿ.ಯೋಗಿಶ್ ಪೂಜಾರಿ, ವಾಸ: ಮುಂಡರಕೋಡಿ ಮನೆ, ಕುರಿಯಾಳ ಗ್ರಾಮ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
2 ಪೃಥ್ವಿರಾಜ್ (21) ತಂದೆ: ಪ್ರಮೋದ್ ರಾಜ್ ಜೋಗಿ, ವಾಸ: ಭದ್ರಾಕಾಳಿ ದೇವಸ್ಥಾನ ಹತ್ತಿರ, ಶಿವಾಜಿ ನಗರ, ಅಮ್ಮುಂಜೆ ಗ್ರಾಮ ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ.
3 ಚಿಂತನ್ (19) ತಂದೆ: ಸುರೇಶ ಬೆಳ್ಳಡ, ವಾಸ: ಶಿವಾಜಿನಗರ ಮನೆ, ಅಮ್ಮುಂಜೆ ಗ್ರಾಮ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.

ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ನಡೆದ ಅಬ್ದುಲ್ ರಹಿಮಾನ್ ಎಂಬವರ ಕೊಲೆ ಮತ್ತು ಅವರ ಜೊತೆಯಿದ್ದ ಕಲಂದರ್ ಶಾಫಿ ಎಂಬವರ ಮೇಲೆ ನಡೆದ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಠಾಣಾ ಆ.ಕ. 54/2025 00: 191[1], 191[2], 191[3], 118[1]. 118 [2], 109, 103 3 190 BNS 2023 20 ಪ್ರಕರಣ ದಾಖಲಾಗಿರುತ್ತದೆ.



