ಮುಸ್ಲಿಂ ಸಮಾಜ ಬಂಟ್ವಾಳ ನಿಯೋಗದಿಂದ ಮುಖ್ಯಮಂತ್ರಿ ಭೇಟಿ
ಮುಸ್ಲಿಂ ಸಮಾಜ ಬಂಟ್ವಾಳ ನಿಯೋಗವು ಮೇ 30ರಂದು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಇತ್ತೀಚಿಗೆ ಸಂಘಪರಿವಾರದ ಭಯೋತ್ಪಾದಕರಿಂದ ಹತ್ಯೆಯಾದ ಕೊಳತ್ತಮಜಲು ಅಬ್ದುಲ್ ರಹೀಂ ವಿಚಾರವಾಗಿ ಮಾತುಕತೆ ನಡೆಸಿತು.




ಜಿಲ್ಲೆಯ ಶಾಂತಿ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಮುಸ್ಲಿಂ ಸಮಾಜ ಬಂಟ್ವಾಳವು ಕೆಲವು ಬೇಡಿಕೆಗಳನ್ನು ಮುಖ್ಯಮಂತ್ರಿಯ ಮುಂದಿಟ್ಟಿದ್ದು ಅವರು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಿಯೋಗದಲ್ಲಿ ಕೆಪಿಸಿಸಿ ವಕ್ತಾರೆ ನಜ್ಮಾ ಚಿಕ್ಕನೇರಳೆ, ಸಮಾಜ ಬಂಟ್ವಾಳ ಅಧ್ಯಕ್ಷ ಕೆ.ಎಚ್. ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಹನೀಫ್ ಖಾನ್ ಕೊಡಾಜೆ, ಪಿ.ಎ. ರಹೀಂ, ಇಕ್ಬಾಲ್ ಐಎಮ್ಆರ್, ಜೈನುಲ್ ಅಕ್ಬರ್, ಹಸನ್ ಸುಲೈಮಾನ್, ಮುಷ್ತಾಕ್ ತಲಪಾಡಿ ಉಪಸ್ಥಿತರಿದ್ಧರು.




