November 11, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದಕ ಪೋಸ್ಟ್ – ಐವರು ಆರೋಪಿಗಳ ಬಂಧನ

ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಶಾಂತಿ ನೆಮ್ಮದಿಗೆ ಭಂಗವನ್ನು ಉಂಟು ಮಾಡಲು ಹಾಗೂ ಸಮಾಜದ ಸ್ವಾಸ್ಥ್ಯ ಕೆಡಿಸಲು ಪ್ರಯತ್ನಿಸಿ, ಸಮಾಜದ ಶಾಂತಿ ನೆಮ್ಮದಿಗೆ ಅಪಾಯವುಂಟು ಮಾಡುವ ಪ್ರಚೋದನಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ವ್ಯಕ್ತಿಗಳ  ಪತ್ತೆಗಾಗಿ ಮಂಗಳೂರು ನಗರ  ಕಮಿಷನರೇಟ್ ವ್ತಾಪ್ತಿಯಿಂದ  ವಿಶೇಷ ತಂಡಗಳನ್ನು ರಚನೆ ಮಾಡಿದ್ದು, ಈ ಕೆಳಕಂಡ  ಪ್ರಕರಣಗಳಲ್ಲಿ ಆರೋಪಿತರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಲಾಗಿದೆ.

1.ಮೊಹಮ್ಮದ್ ಅಸ್ಲಾಂ, ಪ್ರಾಯ:23 ವರ್ಷ,  ತಂದೆ:ಅಬೂಬಕ್ಕರ್ ಸಿದ್ದಿಕ್, ವಿಳಾಸ: ಗ್ರೀನ್ ಹೌಸ್, ಎನ್.ಎಸ್. ರೋಡ್, ಹೆಜಮಾಡಿ, ಉಡುಪಿ ಜಿಲ್ಲೆ, ಎಂಬಾತನು ಸೌದಿ ಅರೇಬಿಯಾದಿಂದ team_jokerzzz._ಎಂಬ Instagram ಪೇಜ್ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 88/2025 ಕಲಂ.192, 353 (2) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಪ್ರಕರಣದ ಆರೋಪಿ ಮೊಹಮ್ಮದ್ ಅಸ್ಲಾಂ ಎಂಬಾತನ ವಿರುದ್ದ LOC ಹೊರಡಿಸಿ, ದಸ್ತಗಿರಿ ಮಾಡಲಾಗಿದೆ. ತನಿಖೆ ಮುಂದುವರಿದಿದೆ.

2.ಚೇತನ್ ಪ್ರಾಯ: 20 ವರ್ಷ, ತಂದೆ: ನಾಗರಾಜು ಬಂಗೇರ, ವಿಳಾಸ: ಅಶ್ರಯ ಕಾಲೋನಿ, 3 ನೇ ಬ್ಲಾಕ್, ಕಾಟಿಪಳ್ಳ, ಇಡ್ಯಾ ಗ್ರಾಮ, ಸುರತ್ಕಲ್, ಮಂಗಳೂರು, ಮತ್ತು ನಿತಿನ್ ಅಡಪ ಪ್ರಾಯ:23 ವರ್ಷ, ತಂದೆ: ಯೋಗಿಶ್ ಅಡಪ ವಿಳಾಸ: ಖಂಡಿಗೆ ಪಾಡಿ, ಚೇಳ್ಯಾರ್, ಹಳೆಯಂಗಡಿ ಪೋಸ್ಟ್ ಮಂಗಳೂರು ಎಂಬುವರು ಮುಸ್ಲಿಂ ಹೆಸರಿನ  ಸಿಮ್ ಕಾರ್ಡ್ ನ್ನು ಬಳಸಿಕೊಂಡು team_karna_surathkal ಎಂಬ Instagram ಪೇಜ್ ಅನ್ನು ತೆರೆದಿದ್ದು, ಸದ್ರಿ ಪೇಜ್ ನಲ್ಲಿ ಚೆನ್ನಪ್ಪ @ ಮುತ್ತು  ಸುರತ್ಕಲ್ ಎಂಬಾತನು ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 58/2025 ಕಲಂ. 196(1), 353(2) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಪ್ರಕರಣದಲ್ಲಿ ಚೇತನ್ ಮತ್ತು ನಿತಿನ್ ಅಡಪ ಎಂಬವರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರಿದಿದೆ.

3.ರಿಯಾಝ್ ಇ್ರಬಾಹಿಂ, ಪ್ರಾಯ: 30 ವರ್ಷ, ತಂದೆ: ಇಬ್ರಾಹಿಂ ವಿಳಾಸ: ಕೊಪ್ಪಲ್ ಹೌಸ್, ಅರ್ಕುಳ, ಫರಂಗಿಪೇಟೆ ಮಂಗಳೂರು ಎಂಬಾತನು ಸೌದಿ ಅರೇಬಿಯಾದಿಂದ Beary_royal_nawab ಎಂಬ Instagram ಪೇಜ್ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ, ಆಧಾರದಲ್ಲಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 44/2025 ಕಲಂ. 353 (2) ಭಾರತೀಯ ನ್ಯಾಯ ಸಂಹಿತೆ ಮತ್ತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 42/2025 ಕಲಂ.353 (1) (c), 353(2) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಪ್ರಕರಣದಲ್ಲಿ ರಿಯಾಝ್ ಇ್ರಬಾಹಿಂ ಎಂಬಾತನ ವಿರುದ್ದ LOC ಹೊರಡಿಸಿ, ದಸ್ತಗಿರಿ ಮಾಡಲಾಗಿದೆ. ತನಿಖೆ ಮುಂದುವರಿದಿದೆ.

4.ಜಮಾಲ್ ಝಾಕೀರ್, ಪ್ರಾಯ:21 ವರ್ಷ, ತಂದೆ: ದಿ.ಮೊಹಮ್ಮದ್ ಮುಸ್ತಾಫ, ವಾಸ: ಕಿಲೇರಿಯಾ ಮಸೀದಿಯ ಬಳಿ, ಕಸಬಾ ಬೆಂಗ್ರೆ, ಕೂಳೂರು ಅಂಚೆ ಮಂಗಳೂರು ನಗರ ಎಂಬಾತನು Troll_bengare_ro_makka ಎಂಬ Instagram ಪೇಜ್ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 44/2025 ಕಲಂ.353 (1) (c), 353(2) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ. ಸದ್ರಿ ಪ್ರಕರಣದಲ್ಲಿ ಜಮಾಲ್ ಝಾಕೀರ್ ಎಂಬಾತನನ್ನು ದಸ್ತಗಿರಿ ಮಾಡಲಾಗಿದ್ದು,  ತನಿಖೆ ಮುಂದುವರಿದಿದೆ.

5.ಗುರು ಪ್ರಸಾದ್, ವಾಸ: ಕೊಳವೈಲ್, ಹಳೆಯಂಗಡಿ, ಮಂಗಳೂರು ನಗರ ಎಂಬಾತನು  Guru dprasad Haleyangadi ಎಂಬ Facebook ಖಾತೆಯ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 53/2025 ಕಲಂ.196(1),(A),353(2),79,56 ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ, ಸದ್ರಿ ಗುರು ಪ್ರಸಾದ್ ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ. ತನಿಖೆ ಮುಂದುವರಿದಿದೆ.

ಸದ್ರಿ ಪ್ರಕರಣಗಳ ತನಿಖೆಯನ್ನು ಮಂಗಳೂರು ನಗರ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಐ.ಪಿ.ಎಸ್., ಉಪ ಪೊಲೀಸ್ ಆಯುಕ್ತರರಾದ ಸಿದ್ದಾರ್ಥ ಗೋಯಲ್ ಐ.ಪಿ.ಎಸ್. (ಕಾ ಮತ್ತು ಸು) ಮತ್ತು ರವಿಶಂಕರ್ (ಅ ಮತ್ತು ಸಂ) ರವರ ಮಾರ್ಗದರ್ಶನದಲ್ಲಿ, ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿರವರ ವಿಶೇಷ ತಂಡಗಳಿಂದ ಮುಂದುವರೆಸಲಾಗಿದೆ.

You may also like

News

2026 ಜನವರಿ 16 ರಿಂದ  25 ವರೆಗೆ ಕಾಜೂರು ಮಖಾಂ ಉರೂಸ್  

ಗೌರವಾಧ್ಯಕ್ಷ ಸಯ್ಯಿದ್ ಕೆ.ಎಸ್. ಆಟ್ಟಕೋಯ ತಂಙಳ್ ಕುಂಬೋಳ್ ಇವರಿಂದ ದಿನಾಂಕ ಘೋಷಣೆ ಹಾಗೂ ಪೋಸ್ಟರ್ ಬಿಡುಗಡೆ ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಇತಿಹಾಸ ಪ್ರಸಿದ್ಧ
News

ಪಾಲ್ದನೆ ಚರ್ಚ್ ನಲ್ಲಿ ಪ್ರಕೃತಿಯಲ್ಲಿ ಒಂದು ದಿನ ಆಚರಣೆ

ಮಂಗಳೂರಿನ ಪಾಲ್ದನೆ ಸಂತ ತೆರೆಜಾ ಚರ್ಚ್ ಪಾಲನಾ ಸಮಿತಿ ಮತ್ತು ಚರ್ಚ್ ನ ಕ್ರೈಸ್ತ ಶಿಕ್ಷಣ ಬೋಧಿಸುವ ಶಿಕ್ಷಕ-ಶಿಕ್ಷಕಿಯರು ಜಂಟಿಯಾಗಿ ‘ಪ್ರಕೃತಿಯಲ್ಲಿ ಒಂದು ದಿನ’ ಆಚರಣೆಯ ಅಂಗವಾಗಿ

You cannot copy content of this page