ನಗರಸಭೆ ಸದಸ್ಯ ರಮೇಶ್ ರೈ ಆತ್ಮಹತ್ಯೆ – ಪಾಣೆಮಂಗಳೂರು ಬಳಿ ನದಿಯಲ್ಲಿ ಮೃತದೇಹ ಪತ್ತೆ
ಪುತ್ತೂರು ನಗರಸಭೆ ಸದಸ್ಯ ರಮೇಶ್ ರೈ ಅವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಜೂನ್ 5ರಂದು ಗುರುವಾರ ನಡೆದಿದೆ. ಅವರ ಮೃತದೇಹ ಪತ್ತೆಯಾಗಿದ್ದು, ನದಿಯಿಂದ ಮೇಲಕ್ಕೆತ್ತಲಾಗಿದೆ.

ರಮೇಶ್ ರೈ ಅವರು ಇತ್ತೀಚಿಗೆ ಪುತ್ತೂರು ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. ಜೂನ್ 5ರಂದು ಬೆಳಿಗ್ಗೆ ಸುಮಾರು 11 ಗಂಟೆಯಿಂದ ಬೈಕ್ ಹಾಗೂ ಚಪ್ಪಲಿ ಪಾಣೆಮಂಗಳೂರು ಹಳೆ ಸೇತುವೆ ಕೆಳಭಾಗದಲ್ಲಿ ಕಂಡು ಬಂದಿತ್ತು. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕುಟುಂಬದ ಸದಸ್ಯರು, ಪೊಲೀಸರು ಆಗಮಿಸಿದ್ದು, ಹುಡುಕಾಟ ನಡೆಸಲಾಗಿತ್ತು. ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.




