ಗಡಿಪಾರು ನೋಟೀಸ್ – 8 ಮಂದಿ ವಕೀಲರ ಮೂಲಕ ಸಹಾಯಕ ಆಯುಕ್ತರ ಮುಂದೆ ಹಾಜರು
ಜೂನ್ 21 ಕ್ಕೆ ಮುಂದಿನ ವಿಚಾರಣೆ ಮುಂದೂಡಿಕೆ

ಪೋಲೀಸ್ ಇಲಾಖೆಯ ಗಡಿಪಾರು ನೋಟೀಸ್ ವಿಚಾರಣೆ ಇಂದು ಜೂನ್ 6ರಂದು ಶುಕ್ರವಾರ ಪುತ್ತೂರಿನ ಸಹಾಯಕ ಆಯುಕ್ತರ ಕಛೇರಿಯಲ್ಲಿ ನಡೆದಿದ್ದು, ಗಡಿಪಾರು ನೊಟೀಸ್ ಪಡೆದ 8 ಮಂದಿ ತಮ್ಮ ವಕೀಲರ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ. ದಕ್ಷಿಣ ಕನ್ನಡ ಪೋಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಗೆ ಸಂಬಂಧಿಸಿದಂತೆ ಸುಮಾರು 36 ಮಂದಿ ಹಳೆ ಆರೋಪಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲು ಪಟ್ಟಿ ತಯಾರಿಸಲಾಗಿತ್ತು. ಅದರಲ್ಲಿ 8 ಮಂದಿಗೆ ಪೊಲೀಸ್ ಇಲಾಖೆ ನೋಟೀಸ್ ನೀಡಿತ್ತು. ಅದರಂತೆ ಇಂದು ಜೂನ್ 6ರಂದು ಶುಕ್ರವಾರ ನೋಟೀಸ್ ಜಾರಿಯಾದ 8 ಮಂದಿ ತಮ್ಮ ವಕೀಲರ ಜೊತೆ ಸಹಾಯಕ ಆಯುಕ್ತರ ಮುಂದೆ ಹಾಜರಾಗಿದ್ದಾರೆ.


ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಹಕೀಂ ಕೂರ್ನಡ್ಕ, ಅಬ್ದುಲ್ ರಹಮಾನ್, ಅಝೀಜ್, ಮಹಮ್ಮದ್ ಶಕೀರ್, ಅಬ್ದುಲ್ ಅಝೀಜ್, ಅಶ್ರಫ್, ಮನೋಜ್ ಕುಮಾರ್ ವಿಚಾರಣೆ ತಮ್ಮ ವಕೀಲರ ಮೂಲಕ ಹಾಜರಾಗಿದ್ದಾರೆ. ಸದ್ಯ ಜೂನ್ 21 ಕ್ಕೆ ಮುಂದಿನ ವಿಚಾರಣೆ ಮುಂದೂಡಲಾಗಿದೆ.




