June 14, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನಂತೂರು ಜಂಕ್ಷನ್ ನಲ್ಲಿ ಎಡಕ್ಕೆ ತಿರುಗುವ ವಾಹನಗಳ ಸಂಚಾರ ಮುಕ್ತ

ನಂತೂರು ಜಂಕ್ಷನ್ ನಲ್ಲಿ [ಫ್ರೀ ಲೆಫ್ಟ್] ಮುಕ್ತ ಎಡ ತಿರುವು ಇಲ್ಲದೆ ದೀರ್ಘಕಾಲದಿಂದ ಟ್ರಾಫಿಕ್ ಜಾಮ್ ದೈನಂದಿನ ಸಮಸ್ಯೆಯಾಗಿತ್ತು.  ಆದರೆ ಜೂನ್ 7ರಿಂದ ಶನಿವಾರ ಟ್ರಾಫಿಕ್ ಸಿಗ್ನಲ್ ಗಳೇ ಇಲ್ಲದೆ ವಾಹನಗಳಿಗೆ ಸುಗಮ ಎಡ ತಿರುಗುಗಳ ನಿರ್ಮಾಣವು ಪೂರ್ಣಗೊಂಡಿದೆ. ಆದುದರಿಂದ ರಾಷ್ಟ್ರೀಯ ಹೆದ್ದಾರಿ 66 ಸುರತ್ಕಲ್ ನಿಂದ ರಾಷ್ಟ್ರೀಯ ಹೆದ್ದಾರಿ 75 ಬಿ.ಸಿ. ರೋಡ್ ಕಡೆಗೆ ಸಿಗ್ನಲ್ ಕಿರಿಕಿರಿ ಇಲ್ಲದೆ ಮನ ಬಂದಂತೆ ಎಡಕ್ಕೆ ತಿರುಗಬಹುದು. ಅಂತೆಯೇ ಕುಲಶೇಖರ ಕಡೆಯಿಂದ ಪಂಪ್ ವೆಲ್ ಕಡೆಗೆ ಎಡಕ್ಕೆ ತಿರುಗಬಹುದಾಗಿದೆ. ಪಂಪುವೆಲ್ ಕಡೆಯಿಂದ ಬಂದ ವಾಹನಗಳು ಎಡಕ್ಕೆ ತಿರುಗಿ ಮಲ್ಲಿಕಟ್ಟೆ ಕಡೆಗೆ ಮುಕ್ತವಾಗಿ ಸಂಚರಿಸಬಹುದಾಗಿದೆ.

ಈ ಮೇಲೆ ಹೆಸರಿಸಿದ ಎಲ್ಲಾ ಮುಕ್ತ ಎಡ ತಿರುವುಗಳಿಗೆ ಬಿಟುಮೆನ್ ಕಾಂಕ್ರೀಟ್ ಮೇಲ್ಮೈ ರಸ್ತೆ ನಿರ್ಮಾಣಗೊಂಡಿದೆ. ಆದುದರಿಂದ ನಂತೂರು ಜಂಕ್ಷನ್ ನಲ್ಲಿ ಇದು ವಾಹನದಟ್ಟನೆಯನ್ನು ಹೆಚ್ಚಾಗಿ ಬೆಳಿಗ್ಗೆ ಹಾಗೂ ಸಾಯಂಕಾಲ ಗಮನಾರ್ಹವಾಗಿ ಕಡಿಮೆ ಮಾಡಲಿದೆ. ಮಲ್ಲಿಕಟ್ಟೆಯಿಂದ ಸುರತ್ಕಲ್ ಕಡೆಗೆ ಹೋಗುವ ರಸ್ತೆಗೆ ಮುಕ್ತ ಎಡ ತಿರುವು ಈಗಾಗಲೇ ಇತ್ತು.

ಡ್ರೈನೇಜ್ ಮತ್ತು ಸರ್ವಿಸ್ ರಸ್ತೆ ತಯಾರಿ :-  ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಭಜಕ ಯೋಜನೆಗೆ ಪೂರ್ವಸಿದ್ಧತಾ ಹಂತವಾಗಿ NH 66 ಮತ್ತು NH 75 ರ ಉದ್ದಕ್ಕೂ ಒಳಚರಂಡಿ ಕಾಮಗಾರಿಗಳನ್ನು ಪ್ರಾರಂಭಿಸಿದೆ. ಅಧಿಕಾರಿಯೊಬ್ಬರ ಪ್ರಕಾರ, ಶೋಲ್ಡರ್ ಡ್ರೈನ್ ನಿರ್ಮಾಣವು ಮಳೆಗಾಲದಲ್ಲಿ ಮುಂದುವರಿಯಬಹುದು ಮತ್ತು ಮಳೆಗಾಲದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಒಳಚರಂಡಿ ಕಾಮಗಾರಿಗಳು ಅಂತಿಮಗೊಂಡ ನಂತರ, ಮುಖ್ಯ ರಸ್ತೆಗಳಿಂದ ಸಂಚಾರವನ್ನು ಬೇರೆಡೆಗೆ ತಿರುಗಿಸಲು ಸರ್ವೀಸ್ ರಸ್ತೆಗಳನ್ನು ನಿರ್ಮಿಸಲು ಪ್ರಾಧಿಕಾರವು ಯೋಜಿಸಿದೆ.

You may also like

News

ಕಥೊಲಿಕ್ ಸಭಾ ಕೇಂದ್ರೀಯ ಸಮಿತಿಯ ನೂತನ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರಿಗೆ ಭಾವಪೂರ್ಣ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ಅತ್ಯಂತ ಬಲಿಷ್ಠ ಹಾಗೂ ಪ್ರಭಾವಿ ಸಂಘಟನೆಯಾದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.)ಇದರ ಕೇಂದ್ರೀಯ ಸಮಿತಿಯ ನೂತನ ಆಧ್ಯಾತ್ಮಿಕ ನಿರ್ದೇಶಕರಾಗಿ ನೇಮಕಗೊಂಡಿರುವ ವಂದನೀಯ ಫಾದರ್
News

ಲಘು ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ತುರ್ತು ಸಿಪಿಆರ್ ನೀಡಿ ಜೀವ ಉಳಿಸಿದ ಬಂಟ್ವಾಳ ನಗರ ಠಾಣೆಯ ‘ನೈಟ್ ಬೀಟ್’ ಸಿಬ್ಬಂದಿಗಳು

ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆಗೆ ಪಾತ್ರರಾದ ಸಿಬ್ಬಂದಿಗಳಾದ ವಿನೋದ್ ಹಾಗೂ ಜಯಗಣೇಶ್ ರಾತ್ರಿ ಇಡೀ ಜಗತ್ತು ಮಲಗಿರುವಾಗ ಸಾರ್ವಜನಿಕರ ರಕ್ಷಣೆಗಾಗಿ ಗಸ್ತು ತಿರುಗುವ ಪೊಲೀಸರು, ಕೇವಲ ಕಾನೂನು

You cannot copy content of this page