ಮಾಣಿ ಸಮೀಪದ ಹಳೀರ ನಿವಾಸಿ ಡ್ರೈವರ್ ಅಬುಬಕ್ಕರ್ ರವರು ನಿಧನ
ಮಾಣಿ ಇಲ್ಲಿನ ಸೂರಿಕುಮೇರು ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮಾಣಿ ಸಮೀಪದ ಹಳೀರ ನಿವಾಸಿಯಾಗಿರುವ ಕಬಡ್ಡಿ ಆಟಗಾರ ಮಜೀದ್, ಹಸೈನಾರ್ ಮತ್ತು ಹುಸೈನಾರ್, (ಅಚ್ಚೋನು – ಉಚ್ಚೋನು ) ಮಾಣಿ ಹೋಟೆಲ್ ಮಾಲಕ ಸಲೀಂ, ಮತ್ತು ಅಶ್ರಫ್ (ಈಚ) ಮತ್ತು ರಿಕ್ಷಾ ಚಾಲಕ ಹಮೀದ್ (ಅಮ್ಮಿ) ಹಾಗೂ ನೇರಳಕಟ್ಟೆ ನಿವಾಸಿ ಹನೀಫ್ ರವರ ತಂದೆ 85ವರ್ಷ ಪ್ರಾಯದ ಡ್ರೈವರ್ ಅಬುಬಕ್ಕರ್ ರವರು ಇಂದು ಜೂನ್ 10ರಂದು ಮಂಗಳವಾರ ಅವರ ಹಿರಿಯ ಮಗ ಹನೀಫ್ ರವರ ನೇರಳಕಟ್ಟೆಯ ಮನೆಯಲ್ಲಿ ನಿಧನರಾದರು. ಇವರು ಮಂಗಳೂರಿನ ವೈಎಂಕೆ ಪ್ರತಿಷ್ಠಿತ ಕಂಪೆನಿಯಲ್ಲಿ ಹಲವಾರು ವರ್ಷಗಳ ಕಾಲ ಲಾರಿ ಡ್ರೈವರ್ ಆಗಿ ಸೇವೆ ಸಲ್ಲಿಸಿದ್ದಾರೆ.


ಮಾಣಿ ಸಮೀಪದ ನೇರಳಕಟ್ಟೆಯಲ್ಲಿರುವ ಅವರ ಹಿರಿಯ ಮಗ ಹನೀಫ್ ರವರ ಮನೆಯಲ್ಲಿ ಮಯ್ಯಿತ್ ಪರಿಪಾಲನಾ ಕಾರ್ಯಕ್ರಮ ನಡೆಯಲಿದೆ ಬಳಿಕ ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯಲ್ಲಿ ಇಂದು ಸಂಜೆ ವೇಳೆಗೆ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.




