ಅಜಾಗರೂಕ ಬೈಕ್ ಸವಾರರ ಮೇಲೆ ಸಂಚಾರಿ ಪೊಲೀಸರ ಕ್ರಮ – ವಾಹನಗಳ ವಶ
ಮಂಗಳೂರು ನಗರದಲ್ಲಿ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಗಳ ವಿರುದ್ಧ ಸಂಚಾರಿ ಪೊಲೀಸರು ಕ್ರಮ ಕೈಗೊಂಡು ಬೈಕ್ ವಶಪಡಿಸಿಕೊಂಡಿದ್ದಾರೆ.


ತನ್ನ ಸ್ವಂತ ಜೀವಕ್ಕೆ ಮಾತ್ರವಲ್ಲದೆ ಇತರ ರಸ್ತೆ ಬಳಕೆದಾರರಿಗೂ ಅಪಾಯವನ್ನುಂಟು ಮಾಡುವ ರೀತಿಯಲ್ಲಿ, ದ್ವಿಚಕ್ರ ವಾಹನ ಚಲಾಯಿಸುತ್ತಿರುವ ವಿಡಿಯೋ ಜೂನ್ 12ರಂದು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂತು. ಬೈಕ್ ಒಂದರ ಹಿಂದೆ ಕಾರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಸೆರೆಹಿಡಿದಿರುವ ವಿಡಿಯೋದಲ್ಲಿ, ಹೆಲ್ಮೆಟ್ ಧರಿಸದೆ ಇಬ್ಬರನ್ನು ಹಿಂಬದಿ ಕೂರಿಸಿ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸುತ್ತಿರುವುದು ಆ ದ್ರಶ್ಶಾವಳಿಯಲ್ಲಿ ಇತ್ತು. ಕೆಲವು ದಿನಗಳ ಹಿಂದೆ ಕಾಣಿಸಿಕೊಂಡ ಮತ್ತೊಂದು ವೀಡಿಯೊದಲ್ಲಿ, ಲಾಲ್‌ಬಾಗ್‌ನಲ್ಲಿ ಮೂವರು ಯುವಕರು ದೋಷಯುಕ್ತ ನಂಬರ್ ಪ್ಲೇಟ್‌ನ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ಕಾರ್ ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಶೀಘ್ರವಾಗಿ ವೈರಲ್ ಆಗಿದೆ.

ಆನಂತರ ಎಚ್ಚೆತ್ತ ಸಂಚಾರಿ ಪೊಲೀಸರು ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ್ದಕ್ಕಾಗಿ ಸೆಕ್ಷನ್ 194-ಡಿ; ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಸವಾರಿ ಮಾಡಿದ್ದಕ್ಕಾಗಿ ಕಲಂ 180; ಟ್ರಿಪಲ್ ರೈಡಿಂಗ್ ಸೆಕ್ಷನ್ 194-ಸಿ, ದೋಷಯುಕ್ತ ನೋಂದಣಿ ನಂಬರ್ ಪ್ಲೇಟ್‌ಗೆ ಸೆಕ್ಷನ್ 177 ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184, ಸೇರಿದಂತೆ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.



