November 10, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ ಕೆವಿಎಎಫ್‌ಎಸ್‌ಯು ಆಡಳಿತ ಮಂಡಳಿಗೆ ನಾಮನಿರ್ದೇಶನ

ಮಂಗಳೂರಿನ ರೈಸನ್ ನ್ಯೂಟ್ರಿಷನ್‌ ಸಂಸ್ಥೆಯ ನಿರ್ದೇಶಕ ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ ಅವರನ್ನು ಕರ್ನಾಟಕ ಸರ್ಕಾರವು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ (ಕೆವಿಎಎಫ್‌ಎಸ್‌ಯು) ಆಡಳಿತ ಮಂಡಳಿಗೆ ನಾಮನಿರ್ದೇಶನ ಮಾಡಿದೆ. ಅವರ ಅಧಿಕಾರಾವಧಿ ಮುಂದಿನ ಮೂರು ವರ್ಷಗಳವರೆಗೆ ಇರುತ್ತದೆ.

ಡಾ. ಸುಶಾಂತ್‌ ರೈ ಅವರು ಪಶುವೈದ್ಯಕೀಯ ಮತ್ತು ಕಕ್ಕುಟೋದ್ಯಮದಲ್ಲಿ ಗುರುತಿಸಲ್ಪಟ್ಟ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಅವರು ಈ ಹಿಂದೆ 2019 ರಿಂದ 2024 ರವರೆಗೆ ಕರ್ನಾಟಕ ಕೋಳಿ ಸಾಕಣೆದಾರರ ಮತ್ತು ತಳಿಗಾರರ ಸಂಘದ (ಕೆಪಿಎಫ್‌ಬಿಎ) ಅಧ್ಯಕ್ಷರಾಗಿ ಸತತ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. ಅವರು ಹೈದರಾಬಾದ್‌ನ ಐಸಿಎಆರ್-ಎನ್‌ಐಎಎನ್‌ಪಿ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ನ್ಯೂಟ್ರಿಷನ್ ಆ್ಯಂಡ್ ಫಿಸಿಯಾಲಜಿ) ಮತ್ತು ಐಸಿಎಆರ್-ಡಿಪಿಆರ್ (ಡೈರೆಕ್ಟರೇಟ್ ಆಫ್ ಪೌಲ್ಟ್ರಿ ರಿಸರ್ಚ್) ನ ಸಂಶೋಧನಾ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. 2024 ರಲ್ಲಿ ಅವರು ಕರ್ನಾಟಕದಿಂದ ಭಾರತೀಯ ಪಶುವೈದ್ಯಕೀಯ ಮಂಡಳಿಯ (ವಿಸಿಐ) ಆಡಳಿತ ಮಂಡಳಿಗೆ ಆಯ್ಕೆಯಾಗುವ ಮೂಲಕ ಉದ್ಯಮದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲ ಪಡಿಸಿದ್ದರು.

ತಮ್ಮ ದೂರದೃಷ್ಟಿಯ ನಾಯಕತ್ವ ಮತ್ತು ಸಹಯೋಗದ ಪ್ರಕ್ರಿಯೆಗೆ ಹೆಸರುವಾಸಿಯಾಗಿರುವ ಡಾ. ರೈ ಅವರು, ಸಂಸ್ಥೆಗಳನ್ನು ಪರಿಣಾಮಕಾರಿ ಬೆಳವಣಿಗೆಯತ್ತ ನಿರಂತರವಾಗಿ ಕೊಂಡೊಯ್ದಿದ್ದಾರೆ. ಕಷ್ಟಕರ ಪರಿಸ್ಥಿತಿಯಲ್ಲೂ ಸಂಯಮವನ್ನು ಕಾಯ್ದುಕೊಳ್ಳುವ ಹಾಗೂ ಸವಾಲುಗಳನ್ನು ಅಭಿವೃದ್ಧಿಯ ಅವಕಾಶಗಳಾಗಿ ಪರಿವರ್ತಿಸುವ ಅವರ ಸಾಮರ್ಥ್ಯಕ್ಕಾಗಿ ಅವರನ್ನು ಮೆಚ್ಚಲಾಗುತ್ತದೆ. KVAFSU ಮಂಡಳಿಗೆ ಅವರ ನಾಮನಿರ್ದೇಶನವು ರಾಜ್ಯದ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ಪರಿಸರ ವ್ಯವಸ್ಥೆಯನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆ ಎಂದೇ ಪರಿಗಣಿಸಲಾಗುತ್ತಿದೆ.

You may also like

News

ಪಾಲ್ದನೆ ಚರ್ಚ್ ನಲ್ಲಿ ಪ್ರಕೃತಿಯಲ್ಲಿ ಒಂದು ದಿನ ಆಚರಣೆ

ಮಂಗಳೂರಿನ ಪಾಲ್ದನೆ ಸಂತ ತೆರೆಜಾ ಚರ್ಚ್ ಪಾಲನಾ ಸಮಿತಿ ಮತ್ತು ಚರ್ಚ್ ನ ಕ್ರೈಸ್ತ ಶಿಕ್ಷಣ ಬೋಧಿಸುವ ಶಿಕ್ಷಕ-ಶಿಕ್ಷಕಿಯರು ಜಂಟಿಯಾಗಿ ‘ಪ್ರಕೃತಿಯಲ್ಲಿ ಒಂದು ದಿನ’ ಆಚರಣೆಯ ಅಂಗವಾಗಿ
News

Father Muller Press Meet Rings in a Week of Milestones

Father Muller Charitable Institutions (FMCI) hosted a press meet on Monday 10th  November at the Decennial Memorial Hall, Library Building,

You cannot copy content of this page