October 31, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

MCC ಬ್ಯಾಂಕಿನ ವಾರ್ಷಿಕ ಪ್ರಗತಿ ಪರಿಶೀಲನೆ

ಮಂಗಳೂರು ಕಥೋಲಿಕ್ ಕೋ ಅಪರೇಟಿವ್ (MCC) ಬ್ಯಾಂಕಿನ ವಾರ್ಷಿಕ ಪ್ರಗತಿ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಜೂನ್ 14ರಂದು ಬ್ಯಾಂಕಿನ ಪಿ.ಎಫ್.ಎಕ್ಸ್. ಸಲ್ಡಾನ್ಹಾ ಮೆಮೊರಿಯಲ್ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ಧರ್ಮ ಪ್ರಾಂತ್ಯದ ರೊಸಾರಿಯೊ ಕಾಥೆದ್ರಾಲ್ ಚರ್ಚಿನ ರೆಕ್ಟರ್ ಹಾಗೂ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ವಲೇರಿಯನ್ ಡಿಸೋಜ ಇವರು ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ವಂದನೀಯ ಫಾದರ್ ವಲೇರಿಯ ಡಿಸೋಜ ಕಳೆದ ದಶಕದಲ್ಲಿ ಬ್ಯಾಂಕಿನ ಇತ್ತೀಚಿಗಿನ ಬೆಳವಣಿಗೆಯ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅವರು ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ಸಮರ್ಪಣೆಯನ್ನು ಶ್ಲಾಘಿಸಿದರು ಮತ್ತು ಬಾಹ್ಯ ಯಶಸ್ಸನ್ನು ಸಾಧಿಸುವಲ್ಲಿ ಆಂತರಿಕ ಶಕ್ತಿ ಮತ್ತು ವಿಶ್ವಾಸದ ಮಹತ್ವವನ್ನು ಒತ್ತಿ ಹೇಳಿದರು, “ನೀವು ನಿಮ್ಮ ಕಾರ್ಯಕ್ಷೇತ್ರದಲ್ಲಿ ಗೆದ್ದಾಗ ಮಾತ್ರ ಯಶಸ್ಸನ್ನು ಪಡೆಯಬಹುದು” ಎಂದು ಹೇಳಿದರು.

ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬ್ಯಾಂಕಿನ 113 ವರ್ಷಗಳ ಪರಂಪರೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು ಮತ್ತು ಬ್ಯಾಂಕನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಿಬ್ಬಂದಿಯ ಅಚಲ ಪ್ರಯತ್ನಗಳನ್ನು ಗುರುತಿಸಿದರು. ಪ್ರಶಸ್ತಿಯನ್ನು ಗಳಿಸಿದ ಶಾಖೆಯ ವ್ಯವಸ್ಥಾಪಕ ಮತ್ತು ಸಿಬ್ಬಂದಿಗಳನ್ನು ಅಬಿನಂದಿಸಿ, ಮುಂದಿನ ವರ್ಷದಲ್ಲಿ ಯುವ ಸಿಬ್ಬಂದಿಗಳು ಮುಂದೆ ಬಂದು ತಮಗೆ ನೀಡಿದ ಗುರಿಯನ್ನು ತಲುಪಲು ಶ್ರಮ ವಹಿಸಿ ಶಾಖೆಗಳಿಗೆ ನೀಡಿದ ಗುರಿಯನ್ನು ತಲುಪಲು ಕಾರಣಕರ್ತರಾಗಬೇಕು ಎಂದರು. ಮುಂದುವರೆದು ಎಲ್ಲಾ ಸಿಬ್ಬಂದಿಗಳು ವೃತ್ತಿಪರ ಮತ್ತು ಗ್ರಾಹಕ-ಕೇಂದ್ರಿತ ವಿಧಾನವನ್ನು ರೂಡಿಸಿಕೊಳ್ಳಬೇಕು, ಸಮಗ್ರತೆಯನ್ನು ಎತ್ತಿಹಿಡಿಯಬೇಕು ಮತ್ತು ಬ್ಯಾಂಕಿನ ಅಭಿವೃದ್ಧಿಗೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ಕೆನರಾ ಬ್ಯಾಂಕಿನ ಮಾಜಿ ಜನರಲ್ ಮ್ಯಾನೇಜರ್ ಬಾಲಚಂದ್ರ ರಾವ್ ರವರು ಮಾನವ ಸಂಪನ್ಮೂಲ ಮತ್ತು ವೃತ್ತಿಪರತೆಯ ಕುರಿತು ಮತನಾ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೈದ್ಧಾಂತಿಕ ಜ್ಞಾನದಿಂದ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಯಶಸ್ಸಿನ ಗುಟ್ಟು, ಪ್ರಾಯೋಗಿಕ ಅನುಭವ, ಸಮನ್ವಯತೆ ಮತ್ತು ಒಂದು ತಂಡವಾಗಿ ಮಾಡುವ ಕೆಲಸ ಎಂದು ಅವರು ಒತ್ತಿ ಹೇಳಿದರು. ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುವ ಮತ್ತು ನಿರಂತರ ಸುಧಾರಣೆಗಾಗಿ ಗುಣಮಟ್ಟವನ್ನು ರೂಪಿಸುವ ಮಹತ್ವವನ್ನು ಅವರು ಎತ್ತಿ ತೋರಿಸಿದರು.

ಬ್ಯಾಂಕಿನ ಸಲಹೆಗಾರರಾದ ಎಸ್. ಎಚ್. ವಿಶ್ವೆಸ್ವರಯ್ಯ ಇವರು ಬ್ಯಾಂಕಿನ 2024-25ನೇ ಸಾಲಿನ ಕಾರ್ಯಕ್ಷಮತೆಯ ವಿಮರ್ಶೆಯನ್ನು ನಡೆಸಿ ಕೊಟ್ಟರು. 2025-26ನೇ ಸಾಲಿನಲ್ಲಿ ಎಲ್ಲಾ ಸಿಬ್ಬಂದಿಗಳು ವೈಯಕ್ತಿಕ ಹಾಗೂ ಶಾಖೆಯ ಗುರಿ ಮುಟ್ಟಲು ಶ್ರಮಿಸಬೇಕೆಂದು ಕರೆ ಕೊಟ್ಟರು. ಗುರಿ ಸಾಧಿಸಿದ ಮತ್ತು ಗುರಿ ಸಾಧಿಸಲು ಶ್ರಮ ವಹಿಸಿದ ಶಾಖ್ಯಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿದರು. ಸಿಬ್ಬಂದಿ ಕಾರ್ಯಕ್ಷಮತೆ ವಿಮರ್ಶೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ – 2025 ರ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ವಹಿಸಿದ್ದರು. ಎನ್‌ಐಟಿಕೆ ಸುರತ್ಕಲ್‌ನ ಮಾಜಿ ಪ್ರಾಧ್ಯಾಪಕ ಮತ್ತು ಡೀನ್ ಡಾ| ಅಲೋಶಿಯಸ್ ಸಿಕ್ವೇರಾ ಮತ್ತು ಪದುವಾ ಕಾಲೇಜು ಪ್ರಾಂಶುಪಾಲರಾದ ವಂದನೀಯ ಫಾದರ್ ಅರುಣ್ ಲೋಬೊ ಮುಖ್ಯ ಅತಿಥಿಗಳಾಗಿದ್ದರು. ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ಜನರಲ್ ಮ್ಯಾನೇಜರ್ ಸುನಿಲ್ ಮೆನೆಜಸ್ ಮತ್ತು ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ವೇದಿಕೆಯಲ್ಲಿದ್ದರು.

30 ವರ್ಷಗಳ ಸೇವೆಯ ನಂತರ ಏಪ್ರಿಲ್ 2025 ರಲ್ಲಿ ನಿವೃತ್ತರಾದ ಬ್ಯಾಂಕಿನ ಸಿಬ್ಬಂದಿ ರಾಬರ್ಟ್ ಫೆರ್ನಾಂಡಿಸ್ ರವರನ್ನು ಕುಟುಂಬ ಸಮೇತ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶೈಕ್ಷಣಿಕ ಮತ್ತು ಪಠ್ಯೇತರ ಕ್ಷೇತ್ರದಲ್ಲಿ ಸಾಧನೆಗೈದ ಸಿಬ್ಬಂದಿ ಮತ್ತು ನಿದೇಶಕರ ಮಕ್ಕಳನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ವಿವಾಹವಾದ ಸಿಬ್ಬಂದಿ ಸದಸ್ಯರನ್ನು ಸನ್ಮಾನಿಸಲಾಯಿತು. ಹೊಸದಾಗಿ ವಿವಾಹವಾದ ವೃತ್ತಿಪರ ನಿರ್ದೇಶಕ ಸುಶಾಂತ್ ಸಲ್ಡಾನಾರವರನ್ನು ಅವರ ಪತ್ನಿಯೊಂದಿಗೆ ಸನ್ಮಾನಿಸಲಾಯಿತು.

ಸುನಿಲ್ ಮೆನೆಜಸ್, ಜನರಲ್ ಮ್ಯಾನೇಜರ್ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಿದರು.  ವೈಯಕ್ತಿಕ ಕಾರ್ಯಕ್ಷಮತೆ, ಸಾಮಾಜಿಕ ಮಾಧ್ಯಮ ಪ್ರಚಾರ, ಪೈವ್ ಸ್ಟಾರ್ ರೇಟಿಂಗ್ ಪಡೆದ ಶಾಖೆ (ಗೂಗಲ್), ಸಾಮಾಜಿಕ ಮಾಧ್ಯಮ ಗುರಿ ಸಾಧನೆ, ಮೈಲಿಗಲ್ಲು ಸಾಧನೆ ಪ್ರಶಸ್ತಿ (ಒಂದು ವರ್ಷ ಪೂರ್ಣಗೊಳಿಸಿದ ಶಾಖೆಗೆ), 2024–25ನೇ ವಿತ್ತೀಯ ವರ್ಷದಲ್ಲಿ ಅತ್ಯುತ್ತಮ ಸಾಧನೆಗೈದ ಶಾಖೆ ಮತ್ತು 2024–25ನೇ ವಿತ್ತೀಯ ವರ್ಷದಲ್ಲಿ ಅತ್ಯಧಿಕ ವಹಿವಾಟು ಸಾಧಿಸಿದ ಶಾಖೆಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು.

ಗೂಗಲ್‌ನಲ್ಲಿ ಪೈವ್ ಸ್ಟಾರ್ ರೇಟಿಂಗ್ ಪಡೆದ ಶಾಖೆಗಳಾದ ಕುಲಶೇಖರ, ಮೊರ್ಗನ್ಸ್ಗೇಟ್, ಮೂಡಬದ್ರಿ, ಶಿರ್ವಾ ಮತ್ತು ಉಳ್ಳಾಲ ಇವರನ್ನು ಸನ್ಮಾನಿಸಲಾಯಿತು. ಬೆಳ್ತಂಗಡಿ, ಬಜ್ಪೆ, ಕುಲಶೇಖರ್ ಮತ್ತು ಮಾರ್ಗನ್ಸ್ಗೇಟ್ ಶಾಖೆಗಳು ಸಾಮಾಜಿಕ ಮಾಧ್ಯಮ ಗುರಿ ಸಾಧನೆ ಪ್ರಶಸ್ತಿಯನ್ನು ಪಡೆದುಕೊಂಡವು. ಶಾಖೆಯ ಸ್ಥಾಪನೆಯ ಒಂದು ವರ್ಷದಲ್ಲಿ ಮೈಲಿಗಲ್ಲು ಸಾಧನೆ ಪ್ರಶಸ್ತಿಯನ್ನು ಬ್ರಹ್ಮಾವರ ಶಾಖೆ ಪಡೆದುಕೊಂಡಿತು. ಬಜ್ಪೆ ಶಾಖೆಯು ಅತ್ಯುತ್ತಮ ವ್ಯವಹಾರ ದಾಖಲಿಸಿದ ಶಾಖೆ ಪ್ರಶಸ್ತಿಯನ್ನು ಪಡೆದುಕೊಂಡಿತು. 2024-25ನೇ ವಿತ್ತೀಯ ವರ್ಷದಲ್ಲಿ ಅತಿ ಹೆಚ್ಚು ವಹಿವಾಟು ನಡೆಸಿದ ಶಾಖೆಗಾಗಿ ಕುಲಶೇಖರ ಶಾಖೆಯು ಪ್ರಶಸ್ತಿಯನ್ನು ಪಡೆದುಕೊಂಡಿತು. ಈ ಎಲ್ಲಾ ಶಾಖೆಗಳ ಶಾಖಾ ವ್ಯವಸ್ಥಾಪಕರಿಗೆ ಶಾಲು, ಪುಷ್ಪಗುಚ್ಛ, ಪ್ರಶಸ್ತಿ, ಮೆಚ್ಚುಗೆ ಪ್ರಮಾಣಪತ್ರ ಮತ್ತು ನಗದು ಬಹುಮಾನವನ್ನು ನೀಡಿ ಸನ್ಮಾನಿಸಲಾಯಿತು. ಈ ಶಾಖೆಗಳ ಸಿಬ್ಬಂದಿಗಳಿಗೆ ಪುಷ್ಪಗುಚ್ಛವನ್ನು ನೀಡಿ ಸನ್ಮಾನಿಸಲಾಯಿತು. ಡಾ| ಅಲೋಶಿಯಸ್ ಸಿಕ್ವೇರಾ ಅವರು ತಮ್ಮ ಮುಖ್ಯ ಸಂದೇಶದಲ್ಲಿ ಎಲ್ಲಾ ಸಿಬ್ಬಂದಿ ಸದಸ್ಯರನ್ನು ಅಭಿನಂದಿಸಿದರು ಮತ್ತು ಕೆನರಾ ಕ್ಯಾಥೊಲಿಕ್ ಸಮುದಾಯಕ್ಕೆ ನಂಬಿಕೆ ಮತ್ತು ಸಮೃದ್ಧಿಯ ದಾರಿದೀಪವಾಗಿ ಎಂಸಿಸಿ ಬ್ಯಾಂಕಿನ ಪಾತ್ರವನ್ನು ಎತ್ತಿ ತೋರಿಸಿದರು. ಬ್ಯಾಂಕಿನ ಧ್ಯೇಯವನ್ನು ಮತ್ತಷ್ಟು ಮುನ್ನಡೆಸಲು ತಂತ್ರಜ್ಞಾನ, ಪಾರದರ್ಶಕತೆ ಮತ್ತು ತಂಡದ ಕೆಲಸವನ್ನು ಅಳವಡಿಸಿಕೊಳ್ಳುವುದನ್ನು ಅವರು ಒತ್ತಿ ಹೇಳಿದರು. ಎಂಸಿಸಿ ಬ್ಯಾಂಕಿನಲ್ಲಿನ ಕುಟುಂಬದಂತಹ ವಾತಾವರಣವನ್ನು ವಂದನೀಯ ಫಾದರ್ ಅರುಣ್ ಲೋಬೊ ಶ್ಲಾಘಿಸಿದರು ಮತ್ತು ಸಿಬ್ಬಂದಿಗಳು “ಕೆಲಸದ ಸ್ಥಳದಲ್ಲಿ ಹೊಳೆಯುವ ನಕ್ಷತ್ರ ಮತ್ತು ಮನೆಯಲ್ಲಿ ದೀಪ” ವಾಗಿರಲು ಪ್ರೋತ್ಸಾಹಿಸಿದರು. ಸಹಾನುಭೂತಿ ಮತ್ತು ಸಕಾರಾತ್ಮಕತೆಯ ಮಹತ್ವವನ್ನು ಒತ್ತಿ ಹೇಳಿದರು.

ಉಪಾಧ್ಯಕ್ಷರಾದ ಜೂಡ್ ಜೆರಾಲ್ಡ್ ಡಿಸಿಲ್ವಾ, ನಿರ್ದೇಶಕ ಜೋಸೆಫ್ ಅನಿಲ್ ಪತ್ರಾವೊ, ಎಲ್ರಾಯ್ ಕ್ರಾಸ್ಟೊ, ಆಂಡ್ರು ಡಿಸೋಜ, ಡೇವಿಡ್ ಡಿಸೋಜ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜ, ಮೆಲ್ವಿನ್ ವಾಸ್, ಡಾ ಫ್ರೀಡಾ ಎಫ್. ಡಿಸೋಜ, ಐರಿನ್ ರೆಬೆಲ್ಲೊ, ಡಾ ಜೆರಾಲ್ಡ್ ಪಿಂಟೊ, ವಿನ್ಸೆಂಟ್ ಲಸ್ರಾದೊ, ವೃತ್ತಿಪರ ನಿರ್ದೇಶಕ ಸಿ.ಜಿ. ಪಿಂಟೋ, ಸುಶಾಂತ್ ಸಲ್ಡಾನಾ, ಆಡಳಿತ ಮಂಡಳಿ ಸದಸ್ಯರಾದ ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿ’ಕ್ರೂಜ್ ಮತ್ತು ಆಲ್ವಿನ್ ಮೊಂತೇರೊ ಉಪಸ್ಥಿತರಿದ್ದರು. ಉಪ ಪ್ರಧಾನ ವ್ಯವಸ್ಥಾಪಕ ರಾಜ್ ಎಫ್. ಮಿನೇಜಸ್ ಧನ್ಯವಾದ ಅರ್ಪಿಸಿದರು ಮತ್ತು ಹಿರಿಯ ವ್ಯವಸ್ಥಾಪಕ ಡೆರಿಲ್ ಲಸ್ರಾದೊ ಕಾರ್ಯಕ್ರಮವನ್ನು ನಿರೂಪಿಸಿದರು.

You may also like

News

ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ವಿರುದ್ಧದ ಆರೋಪ ಖಂಡನೀಯ — AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್

ರಾಜಕೀಯ ಲಾಭಕ್ಕಾಗಿ ವ್ಯಕ್ತಿತ್ವ ಹಾನಿಗೆ ಯತ್ನಿಸುವಂತ ಹೇಳಿಕೆಗಳನ್ನು ತಕ್ಷಣ ಹಿಂಪಡೆಯಬೇಕು ವಿಧಾನಸಭಾ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ರವರ ವಿರುದ್ಧ ಶಾಸಕರಾದ ಭರತ್ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದ
News

ನವೆಂಬರ್ 2ರಂದು ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘದ ಸುವರ್ಣ ಮಹೋತ್ಸವ

ಐತಿಹಾಸಿಕ 50 ವರ್ಷದ ಪಯಣ MLC ಐವನ್ ಡಿಸೋಜ ನೇತೃತ್ವದಲ್ಲಿ ಪತ್ರಿಕಾ ಗೋಷ್ಠಿ ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮವು

You cannot copy content of this page