ರಾಷ್ಟ್ರೀಯ ಮಟ್ಟದ ಕಬ್ಬಡ್ಡಿ ತೀರ್ಪುಗಾರರಾಗಿ ಯುವ ವಕೀಲ ದೀಪಕ್ ಪೆರಾಜೆ
ರಾಜಸ್ಥಾನ ರಾಜ್ಯದ ಜೈಪುರ್ ನಲ್ಲಿ ರಾಷ್ಟ್ರೀಯ ಅಮೆಚೂರ್ ಕಬ್ಬಡ್ಡಿ ಫೆಡರೇಶನ್ ಆಪ್ ಇಂಡಿಯಾ ನಡೆಸಿದ ರಾಷ್ಟ್ರೀಯ ಮಟ್ಟದ ಕಬ್ಬಡ್ಡಿ ತೀರ್ಪುಗಾರರ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ದೀಪಕ್ ಪೆರಾಜೆ ಇವರು ಉತ್ತೀರ್ಣರಾಗಿ ರಾಷ್ಟ್ರೀಯ ಮಟ್ಟದ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ.



ಇವರು ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ದಾಮೋದರ ಸುವರ್ಣ ಮತ್ತು ಲಲಿತ ದಂಪತಿಗಳ ಮಗನಾಗಿದ್ದು ಪ್ರಸ್ತುತ ಬಂಟ್ವಾಳದ ಹಿರಿಯ ನೋಟರಿ ವಕೀಲರಾದ ಪಿ. ಜಯರಾಮ್ ರೈ ಇವರ ಕಛೇರಿಯಲ್ಲಿ ವಕೀಲರಾಗಿ ಸೇವೆ ಸಲ್ಲಿಸುವ ಜೊತೆಗೆ ಮಾಣಿಯಲ್ಲಿ ಸ್ವಂತ ಕಛೇರಿ ಹೊಂದಿರುತ್ತಾರೆ. ಕಳೆದ 9 ವರ್ಷಗಳಿಂದ ರಾಜ್ಯ ಮಟ್ಟದ ತೀರ್ಪುಗಾರರಾಗಿ ಸೇವೆ ಸಲ್ಲಿಸುತ್ತಿದ್ದು ಜೂನಿಯರ್ ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ್ದು ಸತತ 3 ಬಾರಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವನ್ನು ದಕ್ಷಿಣ ಭಾರತ ಮಟ್ಟದ ಕಬ್ಬಡ್ಡಿ ಪಂದ್ಯಾಟದಲ್ಲಿ ಪ್ರತಿನಿಧಿಸಿದ್ದಾರೆ.



ಅಲ್ಲದೇ ಪೆರಾಜೆ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿ, ಪ್ರಸ್ತುತ ಯುವವಾಹಿನಿ (ರಿ.)ಮಾಣಿ ಘಟಕದ ಕಾರ್ಯದರ್ಶಿಯಾಗಿ, ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಜೊತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.




