October 31, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ತಾಕೊಡೆ ಚರ್ಚ್ ನಲ್ಲಿ ಸ್ತ್ರೀ ಸಂಘಟನೆ ಘಟಕದ ವತಿಯಿಂದ “ಅಪ್ಪಂದಿರ ದಿನ” ಆಚರಣೆ

ತಾಕೊಡೆಯಲ್ಲಿರುವ ಪವಿತ್ರ ಶಿಲುಬೆಯ ಧರ್ಮಕೇಂದ್ರದ ಸಭಾಭವನದಲ್ಲಿ ಅಂತರಾಷ್ಟ್ರೀಯ ಅಪ್ಪಂದಿರ ದಿನಾಚರಣೆಯನ್ನು ಜೂನ್ 15ರಂದು ಆದಿತ್ಯವಾರ ಸಂಭ್ರಮದಿಂದ ಆಚರಿಸಲಾಯಿತು. ಸ್ತ್ರೀ ಸಂಘಟನೆಯ ಸದಸ್ಯರಿಂದ ಪ್ರಾರ್ಥನಾ ಗೀತೆ ಹಾಗೂ ಸ್ವಾಗತ ನೃತ್ಯದ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.

ಸಭಾ ಕಾರ್ಯಕ್ರಮದ ಮೊದಲು ನೆರೆದಿರುವ ಎಲ್ಲಾ ಅಪ್ಪಂದಿರಲ್ಲಿ ಚೀಟಿ ತೆಗೆಯುವ ಮುಖಾಂತರ ಒಬ್ಬರಾದ ಸಿಲ್ವೆಸ್ಟರ್ ಪಿಂಟೊರವರು ಆ ದಿನದ ಅದೃಷ್ಟ ಅಪ್ಪ ಎಂದು ಆಯ್ಕೆಯಾದರು. ನಂತರ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ತಾಕೊಡೆ ಚರ್ಚ್ ಧರ್ಮಗುರುಗಳಾದ ವಂದನೀಯ ಫಾದರ್ ರೋಹನ್ ಲೋಬೊ, ಮುಖ್ಯ ಅಥಿತಿಗಳಾಗಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಫ್ರಾನ್ಸಿಸ್ ಮೆಂಡೋನ್ಸಾ, ಕಾರ್ಯದರ್ಶಿ ಆಲ್ವಿನ್ ಪಿಂಟೊ, ಆಯೋಗಗಳ ಸಂಯೋಜಕ ಪಾವ್ಲ್ ಡಿಸೋಜ, ಬೆಥೆನಿ ಕಾನ್ವೆಂಟ್ ನ ಸುಪೀರಿಯರ್ ಸಿಸ್ಟರ್ ರೀನಾ, ನೆರೆದ ಆಪ್ಪಂದಿರ ಪರವಾಗಿ ಸಿಲ್ವೆಸ್ಟರ್ ಪಿಂಟೊ, ಸಂಪನ್ಮೂಲ ವ್ಯಕ್ತಿ ಸಬಿತಾ ರೊಡ್ರಿಗಸ್, ಸ್ತ್ರೀ ಸಂಘಟನೆಯ ಅಧ್ಯಕ್ಷೆ ಐವಿ ಕ್ರಾಸ್ತಾ, ಕಾರ್ಯದರ್ಶಿ ಶಾಂತಿ ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ತ್ರೀ ಸಂಘಟನೆಯ ಅಧ್ಯಕ್ಷೆ ಐವಿ ಕ್ರಾಸ್ತಾ ಗಣ್ಯ ವ್ಯಕ್ತಿಗಳನ್ನು ಹಾಗೂ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಧರ್ಮಗುರುಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ತಾವು ಬರೆದ ಒಂದು ಕವನದ ಮುಖಾಂತರ ಒಳ್ಳೆಯ ಸಂದೇಶವನ್ನು ನೀಡಿದರು ಮಾತ್ರವಲ್ಲದೆ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ಸ್ತ್ರೀ ಸಂಘಟನೆಗೆ ಶ್ಲಾಗಿಸಿದರು. ಸ್ತ್ರೀ ಸಂಘಟನೆಯ ಸದಸ್ಯರು ಹಾಡನ್ನು ಹಾಡುವ ಮುಖಾಂತರ ನೆರೆದಿರುವ ಎಲ್ಲಾ ಅಪ್ಪಂದಿರಿಗೆ ಶುಭಕೋರಿದರು. ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಆಲ್ವಿನ್ ಪಿಂಟೊ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಚರ್ಚ್ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷೆ ಹಾಗೂ ಪಸ್ತುತ ವಾರಾಡೊ ಸ್ತ್ರೀ ಸಂಘಟನೆಯ ಖಜಾಂಜಿ ಸಬಿತಾ ರೊಡ್ರಿಗಸ್ ಇವರು ಕುಟುಂಬದಲ್ಲಿ ಅಪ್ಪಂದಿರ ಮಹತ್ವದ ಬಗ್ಗೆ, ಪರದೆಯ ಹಿಂದೆ ಕುಟುಂಬಗೋಸ್ಕರ ಅವರ ಶ್ರಮ, ತ್ಯಾಗ, ಅಮ್ಮ ಇಲ್ಲದೇ ಇರುವ ಸಮಯದಲ್ಲಿ ಅವರ ಒಂಟಿತನವನ್ನು ಲೆಕ್ಕಿಸದೆ ಮಕ್ಕಳ ಲಾಲನೆ -ಪಾಲನೆ ಹೀಗೆ ಉತ್ತಮ ಸಂದೇಶವನ್ನು ನೀಡಿದರು.

ನಂತರ ಸ್ತ್ರೀ ಸಂಘಟನೆಯ ಸದಸ್ಯರಾದ ಲೀಜಾ ರೊಡ್ರಿಗಸ್, ಶಾಂತಿ ಪಿಂಟೊ ಹಾಗೂ ಸಬಿತಾ ರೊಡ್ರಿಗಸ್ ಇವರು ವಿವಿಧ ಆಟಗಳನ್ನು ನೆರವೇರಿಸಿದರು. ಆಟದಲ್ಲಿ ವಿಜೇತರಾದವರಿಗೆ ಬ್ರದರ್ ಜೋನ್ಸನ್ ಕ್ರಾಸ್ತಾರವರು ಬಹುಮಾನಗಳನ್ನು ವಿತರಿಸಿ ಶುಭ ಹಾರೈಸಿದರು. ಅಂತೆಯೇ ಸ್ತ್ರೀ ಸಂಘಟನೆಯ ಸದಸ್ಯರು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನೀಡುವುದರೊಂದಿಗೆ ಅಲ್ಲಿ ನೆರೆದ ಅಪ್ಪಂದಿರನ್ನು ಮನೋರಂಜಿಸಿದರು. ಸಿಸ್ಟರ್ ರೀನಾರವರು ಭೋಜನದ ಮೇಲೆ ಆಶೀರ್ವಚನ ನೀಡಿದರು. ಘಟಕದ ಉಪಾಧ್ಯಕ್ಷೆ ರೇಶ್ಮಾ ಲೋಬೊ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶಾಂತಿ ಪಿಂಟೊ ವಂದನಾರ್ಪಣೆ ಮಾಡಿದರು. ನೆರೆದ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

You may also like

News

ಬಂಟ್ವಾಳದ ನೇತ್ರಾವತಿ ನದಿಗೆ ಹಾರಿ ಮೊಗರ್ನಾಡ್ ನಿವಾಸಿ ಪೀಟರ್ ಲೋಬೊ ಆತ್ಮಹತ್ಯೆ

ಬಂಟ್ವಾಳ ತಾಲೂಕಿನ ಮೊಗರ್ನಾಡ್ ಮಾರ್ನಬೈಲ್ ನಿವಾಸಿ 60 ವರ್ಷ ಪ್ರಾಯದ ಪೀಟರ್ ಲೋಬೊ ಎಂಬುವವರು ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದು, ತಾನು ಯಾರಿಗೂ ಅವಲಂಬನೆಯಾಗಬಾರದೆಂಬ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ
News

ಶೀಘ್ರದಲ್ಲೇ ಅಧಿಕೃತ Caller ID ಸೇವೆ ಆರಂಭ – ಸ್ಕ್ಯಾಮ್ ಕರೆಗಳಿಗೆ ಬೀಳಲಿದೆ ಕಡಿವಾಣ

ಇತ್ತೀಚಿನ ದಿನಗಳಲ್ಲಿ ಅಪರಿಚಿತ ನಂಬರ್‌ಗಳಿಂದ ಕರೆ ಮಾಡಿ ವಂಚಿಸುವ ಘಟನೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಆದರೆ ಇದೀಗ, ಈ ರೀತಿಯ ವಂಚನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ದೂರಸಂಪರ್ಕ

You cannot copy content of this page