August 31, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕೃತಕ ನೆರೆ ಆವೃತವಾಗುವ ಪಂಪ್‌ವೆಲ್ ವೃತ್ತದಲ್ಲಿ ಜಿಲ್ಲಾಧಿಕಾರಿಗಳಿಂದ ಪರಿಸ್ಥಿತಿಯ ಅವಲೋಕನ

ಪಂಪ್‌ವೆಲ್ ವ್ರತ್ತಕ್ಕೆ ಹರಿದು ಬರುವ ಮಳೆ ನೀರನ್ನು ಅರ್ಧದಲ್ಲೇ ಪ್ರತೇಕಿಸಲು ಸಾಧ್ಯವೇ ಎಂದು ತಜ್ಞರ ಅಭಿಪ್ರಾಯ ಪಡೆದು ಪರಿಹಾರ – ಜಿಲ್ಲಾಧಿಕಾರಿ

ಪಂಪ್‌ವೆಲ್ ಮೇಲ್ಸೇತುವೆ ನಿರ್ಮಾಣ ಸಂದರ್ಭ ಸಂಬಂಧಿಸಿದ ಇಂಜಿನಿಯರ್ ಗಳು ಮಾಡಿಕೊಂಡಿರುವ ಎಡವಟ್ಟುಗಳಿಂದ ಸ್ಥಳೀಯ ನಿವಾಸಿಗಳು ಪ್ರತಿ ವರ್ಷದ ಮಳೆಗಾಲದಲ್ಲಿ ಸಮಸ್ಯೆ ಎದುರಿಸುವಂತಾಗಿದೆ. ಪಂಪ್‌ವೆಲ್‌ ಮೇಲ್ಸೇತುವೆಯ ಅಡಿಭಾಗದಲ್ಲಿರುವ ಪ್ರದೇಶಕ್ಕೆ ಅಷ್ಟ ದಿಕ್ಕುಗಳ ನೀರು ಧುಮ್ಮಿಕ್ಕಿ ಬರುತ್ತದೆ. ಕಂಕನಾಡಿ ಹಳೇ ರಸ್ತೆ, ಬೈಪಾಸ್ ರಸ್ತೆ, ನಂತೂರು ರಸ್ತೆ, ಬೆಂಗಳೂರು ರಸ್ತೆ ಹಾಗೂ ತೊಕ್ಕೊಟ್ಟು ರಸ್ತೆಗಳೆಲ್ಲ – ಪಂಪ್‌ವೆಲ್ ವ್ರತ್ತದಿಂದ ಮೇಲಿವೆ. ಅಲ್ಲಿಂದ ಹರಿದು ಬರುವ ನೀರು ಹೊರಗೆ ಹರಿದು ಹೋಗುವ ಚರಂಡಿ ಸಾಮರ್ಥ್ಯ ಕಡಿಮೆ ಇದೆ. ಇಲ್ಲಿ ಚರಂಡಿ ಇನ್ನಷ್ಟು ಆಳ ಮಾಡಿದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ.

ಚರಂಡಿ ಅಗಲಗೊಳಿಸಿದರೆ ಅನುಕೂಲವಾಗುತ್ತದೆ. ಅಗಲಗೊಳಿಸಲು ಸ್ಥಳಾವಕಾಶದ ಕೊರತೆ ಇದೆ. ನೆರೆ ನೀರು ಸುಮಾರು 3.5 ಕಿ.ಮೀ. ಹರಿದು ನದಿ ಸೇರುತ್ತದೆ. ಪಂಪ್‌ವೆಲ್ ಸಂಪರ್ಕಿಸುವ ರಸ್ತೆಯ ಉಭಯ ಕಡೆಗಳಲ್ಲಿ ದುಬಾರಿ ಬಹು ಅಂತಸ್ತಿನ ಕಟ್ಟಡಗಳು ಇವೆ. ಇಷ್ಟು ದೂರ ಸ್ಥಳ ಸ್ವಾಧೀನಗೊಳಿಸಿ ಅಗತ್ಯ ಚರಂಡಿ ನಿರ್ಮಾಣ ಅತ್ಯಂತ ದುಬಾರಿಯಾಗಲಿದೆ. ಮಳೆಯ ನೀರು ಹರಿದು ಹೋಗಿ ನದಿ ಸೇರುವ ಪ್ರತಿ ಡ್ರೈನೇಜ್ ಚರಂಡಿಯ ಒಳಗೆ ವಿವಿಧ ಇಲಾಖೆಗಳ ಬಹಳ ಕೇಬಲ್ಗಳು ಹಾಗೂ ಪೈಪ್ಗಳು ಇದ್ದು ಇವುಗಳಿಂದಾಗಿಯೇ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಮಳೆ ನೀರಿನ ಜೊತೆ ಕಸಕಡ್ಡಿಗಳು, ಪ್ಲಾಸ್ಟಿಕ್ ಪೇಪರ್ ಹಾಗೂ ಇತರ ವಸ್ತುಗಳು ಬಂದು ಚರಂಡಿಯ ಒಳಗಿರುವ ಈ ಪೈಪ್ ಹಾಗೂ ಕೇಬಲ್ ಗಳಿಗೆ ತಾಗಿನಿಂತು ನೀರು ಶಾಶ್ವತವಾಗಿ ಸರಾಗವಾಗಿ ಹರಿದು ಹೋಗಲು ಅಡ್ಡಿಯನ್ನುಂಟು ಮಾಡುತ್ತವೆ. ಆದುದರಿಂದ ಸಂಬಂಧ ಪಟ್ಟವರಿಗೆ ಪತ್ರವನ್ನು ನೀಡಿ ಮೂರು ದಿನಗಳೊಳಗೆ ಚರಂಡಿ ಒಳಗಿನ ಕೇಬಲ್ ಹಾಗೂ ಪೈಪುಗಳನ್ನು ಬೇರೆ ರಹದಾರಿಯ ಮೂಲಕ ಹಾಕಲು ತಿಳಿಸಿ ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚಿಸಿದರು. ನಂತೂರಿನಿಂದ ಬಂದ ರಸ್ತೆ ಪಂಪುವೆಲ್ ಬಂದು ಮುಟ್ಟುವಲ್ಲಿ ಇರುವ ಸೇತುವೆಯು ತೀರಾ ಕೆಳಮಟ್ಟದಲ್ಲಿದ್ದು ಮಳೆ ನೀರು ಸರಾಗವಾಗಿ ಹೋಗಲು ಅಡ್ಡಿಯನ್ನುಂಟುಮಾಡುತ್ತದೆ ಈ ಸೇತುವೆಯ ಎತ್ತರವನ್ನು ಹೆಚ್ಚಿಸಬೇಕು ಎಂಬ ಅಭಿಪ್ರಾಯವೂ ಕೇಳಿ ಬಂತು.

ನಾಲ್ಕೂ ದಿಕ್ಕುಗಳಿಂದ ಪಂಪ್‌ವೆಲ್ ವ್ರತ್ತಕ್ಕೆ ಹರಿದು ಬರುವ ಮಳೆ ನೀರನ್ನು ಅರ್ಧದಲ್ಲೇ ಪ್ರತೇಕಿಸಲು ಸಾಧ್ಯವೇ ಎಂದು ತಜ್ಞರ ಅಭಿಪ್ರಾಯ ಪಡೆದು ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೆ  ಮುಹಿಲನ್ ಹೇಳಿದ್ದಾರೆ.  ಇಂದು ಜೂನ್ 17 ರಂದು ಮಂಗಳವಾರ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್, ಸ್ಥಳೀಯ ಮಾಜಿ ಕೋರ್ಪರೇಟರ್ ಸಂದೀಪ್ ಗರೋಡಿ, ಮಂಗಳೂರು ಮಹಾನಗರ ಪಾಲಿಕೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ನರೇಶ್ ಶೆಣೈ, ಉಪ ಆಯುಕ್ತರು ಅಭಿವೃದ್ಧಿ, ಸಹಾಯಕ ಕಾರ್ಯ ಪಾಲ ಅಭಿಯಂತರದ ರಾಜೇಶ್ ಕುಮಾರ್ ಮತ್ತು ಶಿವಲಿಂಗಪ್ಪ, ರಸ್ತೆ ಸಾರಿಗೆ ಸಲಹಾ ಸಮಿತಿಯ ಸದಸ್ಯ ಗೋಪಾಲಕೃಷ್ಣ ಭಟ್, ಸಮಾಜ ಸೇವಕ ಅಮ್ರುತ್ ಪ್ರಭು ಗಂಜೀಮಠ ಇವರ ಜೊತೆ ಜಿಲ್ಲಾಧಿಕಾರಿ ಪರಿಸ್ಥಿತಿಯ ಅವಲೋಕನ ನಡೆಸಿದರು.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page