ಬಜ್ಪೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಳೆಬಿಲ್ಲು ದಿನಾಚರಣೆ
ಬಜ್ಪೆಯಲ್ಲಿರುವ ಬೆಥನಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಜೂನ್ 18ರಂದು ಬುಧವಾರ ಕಿಂಡರ್ ಗಾರ್ಟನ್ ಮಕ್ಕಳು ಆಕಾಶದಲ್ಲಿ ಉಂಟಾಗುವ ಬಣ್ಣದ ಬೆಳಕಿನ ಬಗ್ಗೆ ಮಳೆಬಿಲ್ಲು ದಿನವನ್ನು ಆಚರಿಸುವುದರ ಮೂಲಕ ಸಂಭ್ರಮಿಸಿದರು.


ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವಂದನೀಯ ವೀಣಾ ಡಿಸೋಜರವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ಮುದ್ದು ಪುಟಾಣಿ ಮಕ್ಕಳಿಗೆ ಕಾಮನಬಿಲ್ಲು ಬಣ್ಣಗಳ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳ ಸಂತೋಷದಲ್ಲಿ ಮುಖ್ಯ ಶಿಕ್ಷಕರು ಹಾಗೂ ಕಿಂಡರ್ ಗಾರ್ಟನ್ ನ ಎಲ್ಲಾ ಶಿಕ್ಷಕರು ಭಾಗಿಯಾದರು.

ವಿದ್ಯಾರ್ಥಿಗಳು ಅದ್ಭುತವಾದ ಮಳೆಬಿಲ್ಲಿನ ವಿಷಯದ ಕರಕುಶಲ ವಸ್ತುಗಳೊಂದಿಗೆ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಿದರು. ವರ್ಣರಂಜಿತ ಉಡುಪುಗಳನ್ನು ಧರಿಸಿ, ವಿವಿಧ ಬಣ್ಣಗಳಲ್ಲಿ ಹಣ್ಣುಗಳ ಶ್ರೇಣಿಯನ್ನು ವರ್ಣಿಸಿ ಕಾರ್ಯಕ್ರಮವನ್ನು ಚಂದಗಾಣಿಸಿದರು.




