ನಾಳೆ ಜೂನ್ 21ರಂದು ಪುತ್ತೂರಿನಲ್ಲಿ ವಿಶ್ವ ಯೋಗ ದಿನ ಆಚರಣೆ
ವಿಶ್ವ ಯೋಗ ದಿನದ ಸಂದರ್ಭದಲ್ಲಿ ಪುತ್ತೂರು ದೇವಾಲಯದ ಸಭಾಭವನ /ನಟರಾಜ ವೇದಿಕೆ, ಪುತ್ತೂರು ಇಲ್ಲಿ ನಾಳೆ ಜೂನ್ 21ರಂದು ಶನಿವಾರ ಬೆಳಿಗ್ಗೆ 5:30 ಗಂಟೆಯಿಂದ ಸಾಯಂಕಾಲ 7:00ರ ತನಕ ವಿಶ್ವ ಯೋಗ ದಿನಾಚರಣೆಯು ನಡೆಯಲಿದೆ.

ಯೋಗ ಕೇಂದ್ರ ಪುತ್ತೂರು, ಸುದ್ದಿ ಸಮೂಹ ಸಂಸ್ಥೆಗಳು, ಅರಣ್ಯ ಇಲಾಖೆ ಪುತ್ತೂರು, ಮಹಾಬಲ ಲಲಿತ ಕಲಾ ಸಭಾ (ರಿ.) ಮತ್ತು ಅನಿಕೇತನ ಎಜುಕೇಶನಲ್ ಟ್ರಸ್ಟ್ (ರಿ.) ಪುತ್ತೂರು ಇವರೆಲ್ಲರ ಸಹಕಾರದೊಂದಿಗೆ ನಡೆಯಲಿರುವ ಈ ಯೋಗ ದಿನಾಚರಣೆಯ ಅಧ್ಯಕ್ಷತೆಯನ್ನು ಈಶ್ವರ ಭಟ್ ಪಂಜಿಗುಡ್ಡೆ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇವರು ವಹಿಸಲಿದ್ದಾರೆ. ವೇದಮೂರ್ತಿ ಶ್ರೀ ವಸಂತಕೃಷ್ಣ ಕೆದಿಲಾಯ, ಪ್ರಧಾನ ಅರ್ಚಕರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇವರು ಯೋಗ ದಿನಾಚರಣೆಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಿರಣ್ ಬಿ.ಎಂ. ಅರಣ್ಯಾಧಿಕಾರಿ ಪುತ್ತೂರು ಇವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ದೇವಾಲಯದ ಪರಿಸರದಲ್ಲಿ ಮರ ಗಿಡಗಳ ನಿರ್ವಹಣೆ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿಶ್ವ ಯೋಗ ಆಚರಣೆ ಸಮಿತಿ ಪುತ್ತೂರು ಇವರು ತಿಳಿಸಿದ್ದಾರೆ.




