ಅಕ್ರಮ ಮಧ್ಯ ಸಾಗಾಟ ಪ್ರಕರಣ ಆರೋಪಿ ಪ್ರತಾಪ್ ಶೆಟ್ಟಿ ಖುಲಾಸೆ
2023 ರ ಮಾರ್ಚ್ 15ರಂದು ರಾತ್ರಿ 12:15 ಗಂಟೆಗೆ ಗ್ರಾಮದ ಕಡಂಬು ಎಂಬಲ್ಲಿ ಆರೋಪಿ ಪ್ರತಾಪ್ ಶೆಟ್ಟಿ ಯಾವುದೇ ದಾಖಲಾತಿಗಳಿಲ್ಲದೆ ಸ್ವಿಫ್ಟ್ ಕಾರ್ ನಲ್ಲಿ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಮಧ್ಯದ ಸ್ಯಾಚೆಟ್ ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ಸಾಗಾಟ ಮಾಡುತ್ತಿದ್ದುದ್ದನ್ನು ಉಪ್ಪಿನಂಗಡಿ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ಪಿ.ಎಸ್.ಐ.ರವರು ತಮ್ಮ ಸಿಬ್ಬಂದಿಗಳ ಜೊತೆ ದಾಳಿ ನಡೆಸಿ ಆರೋಪಿ ವಶದಲ್ಲಿದ್ದ ಒಟ್ಟು 106.83 0 ಲೀಟರ್ ಮಧ್ಯವನ್ನು ವಾಹನ ಸಮೇತ ವಶಪಡಿಸಿಕೊಂಡು ಕರ್ನಾಟಕ ಅಬಕಾರಿ ಕಾಯ್ದೆ ಕಾಲಂ 32,34,43 (ಎ) ರಡಿಯಲ್ಲಿ ಪ್ರಥಮ ವರ್ತಮಾನವನ್ನು ದಾಖಲಿಸಿ ಪೂರ್ಣ ತನಿಕೆಯನ್ನು ನಡೆಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿರುತ್ತಾರೆ.

ಪ್ರಕರಣವನ್ನು ಕೈಗೆತ್ತಿಕೊಂಡ ಮಾನ್ಯ ನ್ಯಾಯಾಲಯವು ಸುಮಾರು 12 ಸಾಕ್ಷಿಗಳ ಪೈಕಿ ಎಂಟು ಜನರನ್ನು ವಿಚಾರಣೆ ಮಾಡಿ ಸುಮಾರು 10 ದಾಖಲೆಗಳನ್ನು ಅಭಿಯೋಜನ ಪರ ಗುರುತಿಸುವಿಕೆಯನ್ನು ಮಾಡಿರುತ್ತಾರೆ. ಸದರಿ ಅಭಿಯೋಜನೆ ಮತ್ತು ಆರೋಪಿಯ ಪರ ವಾದ ವಿವಾದಗಳನ್ನು ಆಲಿಸಿದ ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಯೋಗೀಂದ್ರ ಶೆಟ್ಟಿರವರು ಸದರಿ ಆರೋಪಿಯನ್ನು ದೋಷ ಮುಕ್ತ ಎಂದು ತೀರ್ಪು ನೀಡಿ ಸದರಿ ಪ್ರಕರಣದಿಂದ ಖುಲಾಸೆ ಮಾಡಿರುತ್ತದೆ. ಆರೋಪಿಯ ಪರ ಪುತ್ತೂರಿನ ಕಜೆ ಲಾ ಚೇಂಬರ್ಸ್ ನ ವಕೀಲರಾದ ಮಹೇಶ್ ಕಜೆರವರು ವಾದಿಸಿರುತ್ತಾರೆ.



