November 9, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಡಂತ್ಯಾರ್‌ನಲ್ಲಿ ಪೊಯೆಟಿಕಾ ಕವಿಗೋಷ್ಠಿ 40 ಮತ್ತು ಸಾಂಸ್ಕೃತಿಕ ಸಂಜೆ

ಕೊಂಕಣಿ ಭಾಷೆಯ ಸಾಂಸ್ಕೃತಿಕ ವೈಭವವನ್ನು ಸಾರುವ ಕಾರ್ಯಕ್ರಮವಾದ 40ನೇ ಪೊಯೆಟಿಕಾ ಕವಿಗೋಷ್ಠಿಯು ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.) ಮಡಂತ್ಯಾರ್ ಘಟಕ, ರಂಗ್ ತರಂಗ್ ಮಡಂತ್ಯಾರ್ ಮತ್ತು ಪೊಯೆಟಿಕಾ ಸಹಯೋಗದಲ್ಲಿ   ಮಡಂತ್ಯಾರ್ ಸೆಕ್ರೆಡ್ ಹಾರ್ಟ್ ಸಭಾಭವನದಲ್ಲಿ ನಡೆಯಿತು. ಮಡಂತ್ಯಾರ್ ಚರ್ಚ್ ನ ಧರ್ಮಗುರುಗಳಾದ ವಂದನೀಯ ಫಾದರ್ ಡಾ. ಸ್ಟ್ಯಾನಿ ಗೋವಿಯಸ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಾಹಿತ್ಯ ಹಾಗೂ ಸಂಸ್ಕೃತಿಯ ಮಹತ್ವವನ್ನು ವಿಸ್ತೃತವಾಗಿ ವಿವರಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸಹಾಯಕ ಧರ್ಮಗುರು ಫಾದರ್ ಲ್ಯಾರಿ ಪಿಂಟೋ ಪ್ರಾರ್ಥನೆಯನ್ನು ನೆರವೇರಿಸಿದರು.

ಘಟಕದ ಅಧ್ಯಕ್ಷ ವಿನ್ಸೆಂಟ್ ಡಿಸೋಜರವರು  ಸ್ವಾಗತ ಭಾಷಣದ ಮೂಲಕ ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಕಾರ್ಯಕ್ರಮವನ್ನು ಅಧಿಕೃತವಾಗಿ ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷ ಲಿಯೋ ರೋಡ್ರಿಗಸ್ ಅವರು ಉದ್ಘಾಟಿಸಿ, ಉದ್ಘಾಟನಾ ಭಾಷಣದಲ್ಲಿ ಸಮಾಜದಲ್ಲಿ ಸಾಹಿತ್ಯ ಮತ್ತು ಸಂಘಟನೆಯ ಪಾತ್ರದ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಡಾ. ಟೈಸನ್ ಡಿಕುನ್ಹಾರವರಿಗೆ ಸನ್ಮಾನಿಸಲಾಯಿತು. ಮಾರ್ಗದರ್ಶನಕ್ಕಾಗಿ ಕಥೋಲಿಕ್ ಸಭಾ ಕೇಂದ್ರೀಯ ಸಮಿತಿಯ ಸಲಹೆಗಾರ ಪಾವ್ಲ್ ರೋಲ್ಫಿ ಡಿಕೋಸ್ತಾರವರಿಗೂ ಗೌರವ ಅರ್ಪಿಸಲಾಯಿತು.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ‘ಅಮಿ ಆನಿ ಆಮ್ಚಿಂ’ ಸಂಘದ ಅಧ್ಯಕ್ಷ ಡೆನಿಸ್ ಡಿಸಿಲ್ವಾ ಕಥೋಲಿಕ್ ಸಭಾ ಕಾರ್ಯಕ್ರಮಗಳ್ನು ಶ್ಲಾಗಿಸಿ ಶುಭಾಷಯ  ನೀಡಿದರು. ಇನ್ನಿತರ ಗಣ್ಯ ಅತಿಥಿಗಳಲ್ಲಿ, ಪಾಲನ ಮಂಡಳಿ ಉಪಾಧ್ಯಕ್ಷ ಜೆರಾಲ್ಡ್ ಮೊರಾಸ್, ಕಾರ್ಯದರ್ಶಿ ನೆಲ್ಸನ್ ಲಾಸ್ರಾದೊ, ಪೊಯೆಟಿಕಾ ಮುಖ್ಯಸ್ಥರಾದ ನವೀನ್ ಪಿರೇರಾ, ಸುರತ್ಕಲ್ ಮತ್ತು ಬೆಳ್ತಂಗಡಿ ಕಥೋಲಿಕ್ ಸಭಾ ವಲಯ ಅಧ್ಯಕ್ಷ ಅಲ್ಬರ್ಟ್ ಸುನಿಲ್ ಮೊನಿಸ್ ಉಪಸ್ಥಿತರಿದ್ದರು. ಬೆಳ್ತಂಗಡಿ ವಲಯದ ಹಲವಾರು ಪದಾಧಿಕಾರಿಗಳು ಹಾಗೂ ಊರಿನ ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ಮಂಗಳೂರು ಧರ್ಮಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ 30 ಕವಿಗಳಾದ ಎಡಿ ಕಾಡ್ದೊಸ್ ತಾಕೊಡೆ, ಜೊಸ್ಸಿ ಪಿಂಟೊ ಕಿನ್ನಿಗೋಳಿ, ನವೀನ್ ಪಿರೇರಾ ಸುರತ್ಕಲ್,  ಪೆದ್ರು ಪ್ರಭು ತಾಕೊಡೆ, ವಲೇರಿಯನ್ ಮೊರಸ್ ತಾಕೊಡೆ, ಜೆನೆಟ್ ಡಿಸೋಜ ಮಡಂತ್ಯಾರ್, ಮರಿಯ ಜೋರ್ಜ್ ಪಿಂಟೊ, ಕುಲ್ಶೇಕರ್, ಜುಲಿಯೆಟ್ ಮೊರಸ್ ದೆರೆಬೈಲ್, ಸ್ಟೇನಿಸ್ಲಾವ್ಸ್ ಡಿಸೋಜ ಕಿರೆಂ, ಹೆನ್ರಿ ಮಸ್ಕರೇನ್ಹಸ್ ಗಂಜಿಮಠ, ರೆಮಿ ಕಾಟಿಪಳ್ಳ, ಜೆರಾಲ್ಡ್ ಮೊರಾಸ್ ಮಡಂತ್ಯಾರ್, ಜೋರ್ಜ್ ಲಿಗೊರಿ ಡಿಸೋಜ ಸುರತ್ಕಲ್, ಲ್ಯಾನ್ಸಿ ಸಿಕ್ವೇರಾ ಸುರತ್ಕಲ್, ರೋಶನ್ ಕ್ಯಾಸ್ತೆಲಿನೊ ಪಾಲಡ್ಕಾ, ವಿನೊದ್ ಪಿಂಟೊ ತಾಕೊಡೆ, ರೋಶನ್ ಕ್ರಾಸ್ತಾ ಕುಲ್ಶೆಕರ್, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ಜಾನೆಟ್ ಸೆರಾವೊ ಉಜಿರೆ, ರೇಶ್ಮಾ ಲೋಬೊ ತಾಕೊಡೆ, ಮೆಲಿಶಾ ಲಸ್ರಾದೊ ಮಡಂತ್ಯಾರ್, ಡಿಯೋನ್ ಫೆರ್ನಾಂಡಿಸ್ ಮಡಂತ್ಯಾರ್, ಲಿಲ್ಲಿ ಪಿರೇರಾ ನಾರಾವಿ, ಡಯಾನಾ ಫೆರ್ನಾಂಡಿಸ್ ಮಡಂತ್ಯಾರ್ ಮತ್ತು ತೆಲ್ಮಾ ಮಾಡ್ತಾ ಮಡಂತ್ಯಾರ್ ಕವಿತಾ ವಾಚನ ಮಾಡಿ ರಸಿಕರನ್ನು ರಂಜಿಸಿದರು. ಡೊ. ರುಡಾಲ್ಫ್ ಜೊಯೆರ್ ನೊರೊನ್ಹಾ ಕಿನ್ನಿಗೋಳಿ ಮತ್ತು ಲವಿ ಗಂಜಿಮಠ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ರಂಗ್ ತರಂಗ್ ತಂಡದಿಂದ ಕಲೆಗೂ ನಯಕ್ಕೂ ಕನ್ನಡಿ ಹಿಡಿಯುವಂತಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿಶೇಷ ಆಕರ್ಷಣೆಯಾಗಿ ಬ್ಲೂ ಬ್ರಾಸ್ ಬ್ಯಾಂಡ್ ಬದ್ಯಾರ್ ಅಭಿಮಾನಿಗಳನ್ನು ರಂಜಿಸಿತು. ನೆಲ್ಸನ್ ಮೊನಿಸ್, ಮಡಂತ್ಯಾರ್ ಸ್ವಂತ ರಚಿಸಿದ ಹಾಡನ್ನು ಹಾಡಿ ಪ್ರೇಕ್ಷಕರ ಹೃದಯ ಗೆದ್ದರು.ಕಾರ್ಯಕ್ರಮದ ಅಂತ್ಯದಲ್ಲಿ ರಂಗ್ ತರಂಗ್ ಮುಖ್ಯಸ್ಥ ವಿನಯ್ ಡಿಸೋಜ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿನ್ಸೆಂಟ್ ಮೊರಾಸ್ ಸುಗಮವಾಗಿ ನಿರ್ವಹಿಸಿದರು.

You may also like

News

ಸೂರಿಕುಮೇರು ಚರ್ಚ್‌ನಲ್ಲಿ ಭಾತೃತ್ವದ ಭಾನುವಾರ ಭಕ್ತಿಭಾವದಿಂದ ಆಚರಣೆ

ಭರವಸೆಯ ಯಾತ್ರಿಕರಾಗಿ ಪರಮ ಪ್ರಸಾದದ ಸುತ್ತ ಧರ್ಮಕೇಂದ್ರವನ್ನು ಒಂದು ಕುಟುಂಬವನ್ನಾಗಿ ರೂಪಿಸೋಣ – ಫಾದರ್ ಮ್ಯಾಕ್ಸಿಂ ರುಜಾರಿಯೊ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್‌ನಲ್ಲಿ ಇಂದು ನವಂಬರ್ 9ರಂದು
News

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಡಳಿತ ಮಂಡಳಿ ಚುನಾವಣೆ 2025-28

ನವಂಬರ್ 9ರಂದು ನಾಳೆ ಜಿದ್ದಾಜಿದ್ದಿನ ಹೋರಾಟಕ್ಕೆ ಅಖಾಡ ಸಿದ್ಧ ಘಟಾನುಘಟಿಗಳ ನಡುವೆ ನಡೆಯಲಿದೆ ಫೈಟ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ದಕ್ಷಿಣ ಕನ್ನಡ ಜಿಲ್ಲಾ ಘಟಕದ

You cannot copy content of this page