ಎಸ್.ಎಸ್.ವಿ.ಪಿ. ಅಂಜೆಲೋರ್ ಘಟಕ ವತಿಯಿಂದ ಬಡ ಕುಟುಂಬಗಳಿಗೆ ಎರಡು ಮನೆ ಕೊಡುಗೆ
ಮಂಗಳೂರಿನ ನಾಗುರಿ ಬಳಿ ಇರುವ ಅಂಜೆಲೋರ್ ಚರ್ಚ್ ಎಂದೇ ಕರೆಯಲ್ಪಡುವ ಗಾರ್ಡಿಯನ್ ಏಂಜೆಲ್ ಚರ್ಚ್ ನ ಸಮಾಜ ಸೇವಾ ಸಂಘಟನೆ ಸೈಂಟ್ ವಿನ್ಸೆಂಟ್ ಪಾವ್ಲ್ ಸಭಾ ಇದರ ಸುವರ್ಣಹೋತ್ಸವ ವರ್ಷಾಚರಣೆ ಅಂಗವಾಗಿ ಎರಡು ಬಡ ಕುಟುಂಬಗಳಿಗೆ ಮನೆಗಳನ್ನು ಕಟ್ಟಿಸಿ ಕೊಟ್ಟಿದೆ. ಅಡ್ಯಾರ್ ಗ್ರಾಮದ ಎರಡು ಬಡ ಕುಟುಂಬಗಳಿಗಾಗಿ ತಲಾ 14 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಿಸಿರುವ ಈ ಮನೆಗಳ ಉದ್ಘಾಟನೆ ಇಂದು ಜುಲಾಯ್ 7ರಂದು ಸೋಮವಾರ ನೆರವೇರಿತು.




ಅಂಜೆಲೋರ್ ಚರ್ಚ್ ನ ಸೈಂಟ್ ವಿನ್ಸೆಂಟ್ ಪಾವ್ಲ್ ಸಭಾ ಘಟಕವು 1971ರಲ್ಲಿ ಸ್ಥಾನೆಯಾಗಿದ್ದು 2021ರಲ್ಲಿ 50 ವರ್ಷಗಳ ಸೇವೆಯನ್ನು ಪೂರ್ತಿಗೊಳಿಸಿತ್ತು. ಈ ಸಂದರ್ಭದಲ್ಲಿ ಬಡವರಿಗೆ ಮನೆ ಕಟ್ಟಿಸಿ ಕೊಡುವ ಸಾಮಾಜಿಕ ಕಳಕಳಿಯ ಯೋಜನೆ ಹಮ್ಮಿಕೊಂಡಿತ್ತು. ಖ್ಯಾತ ಸಂಗೀತ ಕಲಾವಿದ ಮೆಲ್ವಿನ್ ಪೆರಿಸ್ ಅವರಿಂದ ಕಪಿತಾನಿಯೋ ಶಾಲೆಯಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಿ ಹಣಕಾಸು ಸಂಗ್ರಹವನ್ನು ಮಾಡಿತ್ತು.






ಆದರೆ ಆಗ ಕೋವಿಡ್ ಬಂದ ಕಾರಣ ಯೋಜನೆ ಕಾರ್ಯಗತ ಮಾಡಲು ಸಾಧ್ಯವಾಗಿರಲಿಲ್ಲ. ಈ ವರ್ಷ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಸೋಮವಾರ ಅಡ್ಯಾರಿನ ಜೆಸ್ಸಿ ಡಿಸೋಜ ಮತ್ತು ಕುಟುಂಬಕ್ಕೆ ಹಾಗೂ ಪ್ರಫುಲ್ಲ ಡಿಕೋಸ್ತಾ ಮತ್ತು ಕುಟುಂಬಕ್ಕೆ ಮನೆಗಳನ್ನು ಹಸ್ತಾಂತರ ಮಾಡಲಾಯಿತು.



ಸಮಾರಂಭದಲ್ಲಿ ಅಂಜೆಲೋರ್ ಚರ್ಚ್ ಧರ್ಮಗುರು ವಂದನೀಯ ಫಾದರ್ ಫ್ರೆಡ್ರಿಕ್ ಮೊಂತೆರೊ, ವಂದನೀಯ ಫಾದರ್ ಪಾವ್ಲ್ ಪಿಂಟೊ ಮೇರ್ಲಪದವು, ವಂದನೀಯ ಫಾದರ್ ವಿಲಿಯಂ ಮಿನೇಜಸ್ ಒಮ್ಜೂರ್, ವಂದನೀಯ ಫಾದರ್ ಸ್ಟೇನಿ ಫೆರ್ನಾಂಡಿಸ್ ಅಂಜೆಲೋರ್, ಎಸ್.ಎಸ್.ವಿ.ಪಿ. ಮಂಗಳೂರು ಸಿಟಿ ವಲಯದ ಅಧ್ಯಕ್ಷ ರಿಚ್ಚರ್ಡ್ ವಿಲ್ಸನ್ ಪಿಂಟೊ, ಮಾಜಿ ಅಧ್ಯಕ್ಷ ಜಾರ್ಜ್ ಬೊರೆಮಿಯೊ, ಅಂಜೆಲೋರ್ ಘಟಕದ ಅಧ್ಯಕ್ಷ ಐವನ್ ಡಿಸಿಲ್ವಾ, ಪೆರಿಸ್ ನೈಟ್ ಸಂಘಟಕ ಮೆಲ್ವಿನ್ ಪೆರಿಸ್, ಅಂಜೆಲೋರ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಪಾವ್ಲ್ ರೊಡ್ರಿಗಸ್, ಕಾರ್ಯದರ್ಶಿ ಲೊಲಿನಾ ಡಿಸೋಜ, ಅಡ್ಯಾರ್ ಪಂಚಾಯತ್ ಪಿಡಿಒ ಕೃಷ್ಣ ನಾಯ್ಕ್, ಪಂಚಾಯತ್ ಅಧ್ಯಕ್ಷ ರೊನಾಲ್ಡ್ ಸಲ್ದಾನ್ಹಾ, ಎಸ್.ಎಸ್.ವಿ.ಪಿ. ಸಿಟಿ ವಲಯದ ಸಿರಿಲ್ ಡಿಸೋಜ ಮತ್ತು ಉಪಾಧ್ಯಕ್ಷ ಜೋಕಿಮ್ ಡಿಸೋಜ, ಸಿವಿಲ್ ಎಂಜಿನಿಯರ್ ಗಳಾದ ಪ್ರವೀಣ್ ಸಲ್ದಾನ್ಹಾ ಮತ್ತು ಕಿರಣ್ ಡಿಸೋಜ, ಗುತ್ತಿಗೆದಾರ ಎಡ್ವಿನ್ ಡಿಸೋಜ, ಎಸ್.ಎಸ್.ವಿ.ಪಿ. ಅಂಜೆಲೋರ್ ಘಟಕದ ಐವನ್ ಡಿಸಿಲ್ವಾ, ವಿಲ್ಫ್ರೆಡ್ ಪಿಂಟೊ, ಐಡಾ ಡಿಮೆಲ್ಲೊ, ಯೂಜೀನ್ ಲೋಬೊ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.




