ಮಂಗಳೂರು ಧರ್ಮಕ್ಷೇತ್ರದ ICYM ಕೇಂದ್ರೀಯ ಅಧ್ಯಕ್ಷರಾಗಿ ವಿಜಯ್ ಕಾರ್ಡೋಜ – ಉಪಾಧ್ಯಕ್ಷರಾಗಿ ಮೆಲ್ ರೊಯ್ ಡಿಸೋಜ ಆಯ್ಕೆ
2025-26 ನೇ ಸಾಲಿಗೆ ನಡೆದ ವಾರ್ಷಿಕ ಚುನಾವಣೆ



ಮಂಗಳೂರು ಧರ್ಮಕ್ಷೇತ್ರದ ICYM ಕೇಂದ್ರೀಯ ಸಮಿತಿಯ ಮಹಾಸಭೆಯು ಜುಲಾಯ್ 6ರಂದು ಆದಿತ್ಯವಾರ ಮಂಗಳೂರಿನ ರುಸಾರಿಯೊ ಕೆಥೆಡ್ರಲ್ ಚರ್ಚ್ ಸಭಾಂಗಣದಲ್ಲಿ ನಡೆಯಿತು. ಇದರಲ್ಲಿ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಚುನಾವಣೆಯು ನಡೆಯಿತು. ಈ ಚುನಾವಣೆಯಲ್ಲಿ ಮೂಡಬಿದ್ರೆ ಚರ್ಚ್ ನ ವಿಜೋಯ್ ಅಶ್ವಿನ್ ಕಾರ್ಡೋಜ ಕೇಂದ್ರೀಯ ಅಧ್ಯಕ್ಷರಾಗಿ ಹಾಗೂ ಅಲ್ಲಿಪಾದೆ ಚರ್ಚ್ ನ ಮೆಲ್ ರೊಯ್ ಪ್ರೇಮ್ ಡಿಸೋಜ ಉಪಾಧ್ಯಕ್ಷರಾಗಿ ಆಯ್ಕೆಯಾದರು.







ICYM ಕೇಂದ್ರೀಯ ಅಧ್ಯಕ್ಷ ವಿನ್ಸ್ಟನ್ ಜೋಯಲ್ ಸಿಕ್ವೇರಾ ಅತಿಥಿಗಳನ್ನು ಮತ್ತು ಸಭೆಯನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಆಶ್ಲಿನ್ ಅವಿತಾ ಡಿಸೋಜ ವಾರ್ಷಿಕ ವರದಿಯನ್ನು ಮಂಡಿಸಿದರು. 2024-25ರ ವಾರ್ಷಿಕ ಲೆಕ್ಕಪತ್ರವನ್ನು ಖಜಾಂಚಿ ರೀನಾ ಅಂಜಲಿ ಕ್ರಾಸ್ತಾ ಸಭೆಯಲ್ಲಿ ಮಂಡಿಸಿದರು. ಐಸಿವೈಎಂ ಕೇಂದ್ರೀಯ ಸಮಿತಿಯ ವಾರ್ಷಿಕ ಚುನಾವಣೆಯು ಮಧ್ಯಾಹ್ನ 12:00 ರಿಂದ 2:00 ತನಕ ನಡೆಯಿತು. ಚುನಾವಣಾಧಿಕಾರಿಯಾಗಿ ಕುಳೂರು ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾದರ್ ವಿಕ್ಟರ್ ವಿಜಯ್ ಲೋಬೊರವರು ಆಗಮಿಸಿ ಚುನಾವಣೆಯನ್ನು ನಡೆಸಿಕೊಟ್ಟರು.






















2025-26 ನೇ ಸಾಲಿನ ನೂತನ ಪದಾಧಿಕಾರಿಗಳಾಗಿ Vijoy Ashwin Cardoza Moodbidri – President, Maria Dsilva Surathkal – General Secretary, Melroy Prem Dsouza Allipade, Vice President, Ashinta Monteiro – Lady Vice President, Floyd Vincent Pinto Neerude – Joint Secretary, Supreeth Fernandes Arva – Treasurer, Muriel Mascarenhas -Social Cause Secretary ಆಯ್ಕೆಯಾದರು. ಚುನಾವಣೆಯ ನಂತರ ಎಲ್ಲಾ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.



















ಇತರ ಸಮಿತಿ ಸದಸ್ಯರು: Regional Vice President – Jaison Dsouza Fajir, Regional Representative Female – Clarin Ashwitha Dsouza, MIJARC Asia Coordinator – Viola Reshma Lewis, Immediate Past President – Winston Jeol Sequeira Hospet.




















ಮಂಗಳೂರು ಧರ್ಮಕ್ಷೇತ್ರದ ICYM ಕೇಂದ್ರೀಯ ನಿರ್ದೇಶಕರಾದ ವಂದನೀಯ ಫಾದರ್ ಅಶ್ವಿನ್ ಕಾರ್ಡೋಜ, ICYM ನಿಯೋಜಿತ ನಿರ್ದೇಶಕರಾದ ವಂದನೀಯ ಫಾದರ್ ಪ್ರವೀಣ್ ಡಿಸೋಜ, ಚುನಾವಣಾಧಿಕಾರಿ ಹಾಗೂ ಕುಳೂರು ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾದರ್ ವಿಕ್ಟರ್ ವಿಜಯ್ ಲೋಬೊ, ರುಸಾರಿಯೊ ಕೆಥೆದ್ರಲ್ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾದರ್ ವಲೇರಿಯನ್ ಡಿಸೋಜ ಮತ್ತು ನೆರೆದವರೆಲ್ಲರೂ ನೂತನ ಪದಾಧಿಕಾರಿಗಳನ್ನು ಮತ್ತು ಇತರ ಸಮಿತಿ ಸದಸ್ಯರುಗಳನ್ನು ಅಭಿನಂದಿಸಿ ಶುಭ ಹಾರೈಸಿದರು.




