August 31, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಾಕಿ ಹಣ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ – ಪ್ರಕರಣ ದಾಖಲು – ಆರೋಪಿ ವಶಕ್ಕೆ

ಬಾಕಿ ಇರಿಸಿದ ದಿನಸಿ ಖರೀದಿ ದುಡ್ಡನ್ನು ಕೇಳಿದ್ದಕ್ಕೆ ಬೆಳ್ತಂಗಡಿ ಕುವೆಟ್ಟು ಗ್ರಾಮದ 50 ವರ್ಷ ಪ್ರಾಯದ ಸದಕುತುಲ್ಲ ಎಂಬವರ ಅಂಗಡಿಗೆ ಉಮೇಶ್ ಬಂಗೇರ ಎಂಬಾತನು ಬೆಂಕಿ ಹಚ್ಚಿದ್ದರಿಂದ 3,000 ರೂಪಾಯಿ ನಷ್ಟ ಉಂಟಾದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜುಲಾಯ್ 9ರಂದು ಆರೋಪಿತ ಉಮೇಶ್ ಬಂಗೇರ ಅವರಲ್ಲಿ ಬೆಳ್ತಂಗಡಿ ಗುರುವಾಯನಕೆರೆ ಎಂಬಲ್ಲಿ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡ ಅಂಗಡಿ ಮಾಲೀಕ ಸದಕುತುಲ್ಲ  ಎಂಬವರು ಈ ಮುಂಚೆ ದಿನಸಿ ಖರೀದಿಸಿ ಬಾಕಿ ಇರಿಸಿದ ಹಣವನ್ನು ಕೇಳಿದ್ದರು.

ಅದರಿಂದ ಕೋಪಗೊಂಡ ಬಳಂಜ ಗ್ರಾಮದ ನಿವಾಸಿ ಉಮೇಶ ಬಂಗೇರ ಮರುದಿನ ಬೆಳಿಗ್ಗೆ ಅಂಗಡಿಗೆ ಬೆಂಕಿ ಹಚ್ಚಿದ್ದರಿಂದ ಅಂಗಡಿಗೆ ಅಳವಡಿಸಿದ್ದ ಎರಡು ಫ್ಲೆಕ್ಸ್ ಸುಟ್ಟು ಹೋಗಿ 10 ಪ್ಲಾಸ್ಟಿಕ್ ಉಪ್ಪಿನ ಚೀಲಗಳಿಗೆ ಹಾನಿಯಾಗಿರುತ್ತದೆ. ಮಾಹಿತಿ ಸಿಕ್ಕಿದ ಕೂಡಲೇ ಅಂಗಡಿಗೆ ಧಾವಿಸಿ ಸ್ಥಳೀಯರ ನೆರವಿನಿಂದ ಬೆಂಕಿಯನ್ನು ನಂದಿಸಲಾಗಿದೆ. ಅಂಗಡಿ ಮಾಲೀಕ ಸದಕುತುಲ್ಲ ನೀಡಿದ ದೂರಿನಂತೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆ ಕ್ರ: 56/2025 ಕಲಂ 326(f) 324(2) ಬಿಎನ್ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಆರೋಪಿ ಉಮೇಶ್ ಬಂಗೇರನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page