ಅಪಘಾತ ಪ್ರಕರಣ ಆರೋಪಿ ಸುನಿಲ್ ಕುಮಾರ್ ದೋಷ ಮುಕ್ತ
ಸುಮಾರು ಮೂರು ವರ್ಷಗಳ ಹಿಂದೆ 2022 ಜೂನ್ 18ರಂದು ಆರೋಪಿ ಲಾರಿ ಚಾಲಕ ಸುನಿಲ್ ಕುಮಾರ್ ರವರು KA–26-A-7351ನೇ ನೋಂದಣಿ ನಂಬರಿನ ಲಾರಿಯನ್ನು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಉಪ್ಪಿನಂಗಡಿ ಕಡೆಯಿಂದ ಪೆರ್ನೆ ಕಡೆಗೆ ಚಲಾಯಿಸಿಕೊಂಡು ಹೋಗಿ ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ದೋರ್ಮೆ ಎಂಬಲ್ಲಿ ಲಾರಿಯ ಮುಂದೆ ಬಾಲಕೃಷ್ಣರವರು ಉಪ್ಪಿನಂಗಡಿ ಕಡೆಯಿಂದ ಪೆರ್ನೆ ಕಡೆಗೆ ರಸ್ತೆಯ ತೀರಾ ಬದಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ KA-19-EE-8362ನೇ ನೋಂದಣಿ ನಂಬರಿನ ಸ್ಕೂಟರನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಎದುರುಗಡೆಯಿಂದ ಕಾರು ಬಂದಿದ್ದು ಆಗ ಲಾರಿ ಚಾಲಕನು ಅಜಾಾಗರಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರ ಎಡಬದಿಗೆ ಚಲಾಯಿಸಿದ ಪರಿಣಾಮದಿಂದ ಸ್ಕೂಟರ್ ಹಾಗೂ ಪೂರ್ಣಿಮಾರವರಿಗೆ ಲಾರಿಯ ಎಡ ಮುಂಭಾಗದ ಚಕ್ರದ ಮಡ್ ಗಾರ್ಡ್ ಅಪಘಾತವಾಗಿ ಹತೋಟಿ ತಪ್ಪಿದ ಸ್ಕೂಟರ್ ಸವಾರ ಬಾಲಕೃಷ್ಣ ಎನ್.ರವರು ಸ್ಕೂಟರ್ ನೊಂದಿಗೆ ರಸ್ತೆಯ ಎಡಗಡೆಗೆ ಬಿದ್ದಿದ್ದು ಸಹಸವಾರೆ ಪೂರ್ಣಿಮಾ ಬಿ.ಎನ್.ರವರು ಸ್ಕೂಟರ್ ನಿಂದ ರಸ್ತೆಗೆ ಬಿದ್ದಾಗ ಅವರ ದೇಹದ ಮೇಲೆ ಲಾರಿಯ ಹಿಂಭಾಗದ ಎಡ ಚಕ್ರಹರಿದು ಹೋಗಿ ತಲೆಗೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪೂರ್ಣಿಮಾರವರು ಮೃತ ಹೊಂದಲು ಹಾಗೂ ಅಪಘಾತದ ಪರಿಣಾಮದಿಂದ ಬಾಲಕೃಷ್ಣರವರಿಗೆ ಸಾಮಾನ್ಯ ಸ್ವರೂಪದಲ್ಲಿ ಗಾಯಗೊಳ್ಳಲು ಕಾರಣರಾಗಿರುತ್ತಾರೆ.


ಅಪಘಾತದ ಬಳಿಕ ಆರೋಪಿ ಲಾರಿ ಚಾಲಕನ ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸದೇ ಮತ್ತು ಪೊಲೀಸ್ ಠಾಣೆಗೆ ಮಾಹಿತಿ ನೀಡದೇ ಲಾರಿಯೊಂದಿಗೆ ಸ್ಥಳದಿಂದ ಪರಾರಿಯಾಗಿರುತ್ತಾರೆ ಎಂದು ಆರೋಪಿ ಸುನಿಲ್ ಕುಮಾರ್ ರವರ ಮೇಲೆ ಭಾರತೀಯ ದಂಡ ಸಂಹಿತೆಯ ಕಲಂ 279, 337, 304 (A) ಮತ್ತು ಕಲಂ 134 ಎ ಬಿ ಜೊತೆಗೆ 187 ಮೊ. ವಾ. ಕಾಯ್ದೆ ಅನ್ವಯ ಶಿಕ್ಷಾರ್ಹರಾಗಿರುತ್ತಾರೆ ಎಂಬುದಾಗಿ ದೋಷಾರೋಪಣಾ ಪಟ್ಟಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಸದ್ರಿ ಪ್ರಕರಣದಲ್ಲಿ ಅಭಿಯೋಜನ ಪರ ಸುಮಾರು 24 ಸಾಕ್ಷಿಗಳ ಪೈಕಿ 15 ಸಾಕ್ಷಿಗಳನ್ನು ತನಿಖೆ ನಡೆಸಿ ಸುಮಾರು 25 ದಾಖಲೆಗಳನ್ನು ಅಭಿಯೋಜನ ಪರ ಗುರುತಿಸಲ್ಪಟ್ಟಿತು. ಆರೋಪಿಯ ಪರ ಹಿರಿಯ ವಕೀಲರಾದ ಪುತ್ತೂರು ಕಜೆ ಲಾ ಚೇಂಬರ್ಸ್ ಮುಖ್ಯಸ್ಥರಾದ ಮಹೇಶ್ ಕಜೆಯವರು ಹಾಜರಾಗಿ ತಮ್ಮ ವಾದ-ವಿವಾದಗಳನ್ನು ಮಂಡಿಸಿರುತ್ತಾರೆ. ವಾದ-ವಿವಾದಗಳನ್ನು ಆಲಿಸಿದ ನಂತರ ಅಭಿಯೋಜನ ಪರ ದಾಖಲೆಗಳನ್ನು ಪರಿಶೀಲಿಸಿ, ಈ ಪ್ರಕರಣವನ್ನು ಸಂಶಯಾರ್ತಿತವಾಗಿ ಸಾಬೀತುಪಡಿಸಲು ವಿಫಲವಾಗಿದೆ ಎಂದು ತೀರ್ಮಾನಿಸಿ, ಮಾನ್ಯ ಪ್ರಧಾನ ವ್ಯವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ನ್ಯಾಯಕ ದಂಡಾಧಿಕಾರಿ ಯವರ ನ್ಯಾಯಾಲಯ ಪುತ್ತೂರು ದಕ್ಷಿಣ ಕನ್ನಡ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣ್ ಪುರರವರು ಆರೋಪಿಯನ್ನು ನಿರಪರಾಧಿ ಎಂದು ಬಿಡುಗಡೆಗೊಳಿಸಿ ಆದೇಶಿಸಿರುತ್ತಾರೆ.




