July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಥೊಲಿಕ್ ಸಭಾ ಪೆರುವಾಯಿ ಘಟಕದ ವತಿಯಿಂದ ಪೆರುವಾಯಿ ಚರ್ಚ್ ಸಮುದಾಯ ಭವನದಲ್ಲಿ ಕೃಷಿ ಮಾಹಿತಿ ಶಿಬಿರ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಪೆರುವಾಯಿ ಘಟಕ, ಪೆರುವಾಯಿ ಚರ್ಚ್ ಪರಿಸರ ಆಯೋಗ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಬಂಟ್ವಾಳ ಮತ್ತು ಕೃಷಿ ವಿಜ್ಞಾನ ಕೇಂದ್ರ ದಕ್ಷಿಣ ಕನ್ನಡ ಇದರ ಜಂಟಿ ಆಶ್ರಯದಲ್ಲಿ ಸಮಗ್ರ ಕೃಷಿ ಮಾಹಿತಿ ಶಿಬಿರವು ಪೆರುವಾಯಿ ಫಾತಿಮಾ ಮಾತಾ ಸಮುದಾಯ ಭವನದಲ್ಲಿ ಜುಲಾಯ್ 10ರಂದು ಗುರುವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತಾ ದೇವಾಲಯದ ಧರ್ಮಗುರು ವಂದನೀಯ ಫಾದರ್ ಸೈಮನ್ ಡಿಸೋಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಫಿಸಾರವರು ಶುಭ ಹಾರೈಸಿದರು. ಕೃಷಿ ವಿಜ್ಞಾನ ಕೇಂದ್ರದ ಡಾ. ರಶ್ಮಿ ಆರ್.ರವರು ಮಲ್ಲಿಗೆ ಬೇಸಾಯದ ಬಗ್ಗೆ ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕ ಪ್ರದೀಪ್ ಡಿಸೋಜರವರು ತೋಟಗಾರಿಕ ವಿವಿಧ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಇಲಾಖೆ ಕೃಷಿ ಅಧಿಕಾರಿ ಬೆಳೆ ವಿಮೆ ಮತ್ತು ಬೆಳೆ ಸಮಿಕ್ಷೆ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗೋವಿಂದ ಭಟ್ ಕಡೆಂಗೊಡ್ಲು ಕಾಳು ಮೆಣಸಿನ ವಿವಿಧ ತಳಿಗಳ ಬಗ್ಗೆ ವಿವರಣೆ ನೀಡಿ, ಆಧುನಿಕ ಪರಿಸರದ ಬಗ್ಗೆ ವಿವರಿಸಿ ಬಹಿರಂಗವಾಗಿ ಪ್ರದರ್ಶಿಸುವ ಮುಖಾಂತರ ರೈತರಿಗೆ ಮಾಹಿತಿ ನೀಡಿದರು. ಮಲ್ಲಿಗೆ ಕೃಷಿ ಟೇರೆಸಿನ ಮೇಲೆ ಅತ್ಯುತ್ತಮ ಸಾಧನೆ ಸಾದಿಸಿ ರೈತ ರತ್ನ ಪ್ರಶಸ್ತಿ ಪಡೆದ ಅನಿತಾ ಜೆರಾಲ್ಡ್ ಮುಳಿಯ ದಂಪತಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ವಿಟ್ಲ ವಲಯದ ಪ್ರಧಾನ ಕಾರ್ಯದರ್ಶಿ ರಾಲ್ಫ್ ಡಿಸೋಜ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಡೇನಿಸ್ ಮೊಂತೇರೊ, ಪೆರುವಾಯಿ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಂದ್ರ ರೈ, ವರುಣ್ ಶೆಟ್ಟಿ, ಬಾಲಕೃಷ್ಣ ಪೂಜಾರಿ, ಸೆಲ್ವಿನಾ ಡಿಸೋಜ ಅಳಿಕೆ ಮತ್ತು ವ್ಯವಸಾಯ ಕೇಂದ್ರ ಸಹಕಾರಿ ಸಂಘ ಪೆರುವಾಯಿ ಇದರ ಅಧ್ಯಕ್ಷ ಮನುರಾಜ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಲ್ಯಾನ್ ವಿನ್ ನಿರೂಪಿಸಿದರು. ಕೃಷಿ ಸಖಿ ನವಿತ ಧನ್ಯವಾದ ನೀಡಿದರು.           

                                            

You may also like

News

Father Muller Principal Wins Prestigious Global Young Investigator Award at MASCC/ISOO Congress in Australia

In a moment of immense pride for the nation and the physiotherapy fraternity, Prof. Cherishma Dsilva, Principal of Father Muller
News

ಮಂಗಳೂರಿನ ಸಂದೇಶ ಫೌಂಡೇಶನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯ

‘Mangalore IAS – A School for Civil Services’ಗೆ ಚಾಲನೆ ನೀಡಿದ ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹೆನ್ರಿ ಡಿಸೋಜ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ

You cannot copy content of this page