ಮಂಗಳೂರಿನ ಮೊದಲ ಮಹಿಳಾ ಟೈಲರ್ ನಿಧನ
ಸೆಂಟ್ರಲ್ ಲೇಡಿಸ್ ಟೈಲರ್ ಮಂಗಳೂರು ಇದರ ಸ್ಥಾಪಕಿ ಹಾಗೂ ದಿ| ಬಿ. ಮಂಜುನಾಥ್ ರವರ ಪತ್ನಿ 87 ವರ್ಷ ಪ್ರಾಯದ ವಸಂತಿ ಎಂಬವರು ಜುಲಾಯ್ 16ರಂದು ಬುಧವಾರ ಮೈಸೂರಿನ ಅವರ ಮಗಳ ಮನೆಯಲ್ಲಿ ನಿಧನ ಹೊಂದಿದರು. ಇವರು ಮಂಗಳೂರಿನ ಮೊದಲ ಮಹಿಳಾ ಟೈಲರ್ ಆಗಿದ್ದಾರೆ. ಮೃತರು ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.




