July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಜ್ಪೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫೌಂಡೇಶನ್ ಡೇ ಆಚರಣೆ

ಬಜ್ಪೆಯಲ್ಲಿರುವ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜುಲಾಯ್ 15ರಂದು ಮಂಗಳವಾರ ಫೌಂಡೇಶನ್ ಡೇಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಬೆಥನಿ ಸಂಸ್ಥಾಪಕರಾದ ಆರ್.ಎಫ್.ಸಿ. ಮಸ್ಕರೇನಸ್ ರವರ ಮೌಲ್ಯಗಳು ಮತ್ತು ದೃಷ್ಟಿಕೋನವನ್ನು ವಿದ್ಯಾರ್ಥಿಗಳು ತಮ್ಮ ಅಭಿನಯದ ಮೂಲಕ ಉತ್ತುಂಗಕ್ಕೆ ಎತ್ತಿ ಹಿಡಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸ್ಥಳೀಯ ಕಾನ್ವೆಂಟಿನ ಮೇಲ್ವಿಚಾರಕರಾಗಿರುವ ವಂದನೀಯ ಭಗಿನಿ ಲಿಲ್ಲಿ ಡಿಸೋಜರವರು ವಹಿಸಿದ್ದರು. ಅವರು ‘ಫೌಂಡೇಶನ್ ಡೇ’ಯ ಮಹತ್ವವನ್ನು ತಮ್ಮ ಅಧ್ಯಕ್ಷೀಯ ನುಡಿಗಳಿಂದ ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಭಾಷಣ, ನಾಟಕ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಬೆಥನಿ ಫೌಂಡೇಶನ್ ದಿನವನ್ನು ಅದ್ಭುತ ದಿನವನ್ನಾಗಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿಯಾಗಿರುವ ವಂದನೀಯ ಭಗಿನಿ ವೀಣಾ ಹಾಗೂ ಶಾಲೆಯ ಸಹ ಶಿಕ್ಷಕರಾಗಿರುವ ವಂದನೀಯ ಭಗಿನಿ ಅನಿತಾ, ವಂದನೀಯ ಭಗಿನಿ ಹೆರಿಟ ಹಾಗೂ ವಂದನೀಯ ಭಗಿನಿ ಪ್ರೆಸಿಲ್ಲ ಪ್ರೇಮರವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕರು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಕಾರ್ಯಕ್ರಮವನ್ನು ರಶ್ಮಿತಾ ಹಾಗೂ ಪ್ರಮೀಳರವರು ನೆರವೇರಿಸಿಕೊಟ್ಟರು.

You may also like

News

Father Muller Principal Wins Prestigious Global Young Investigator Award at MASCC/ISOO Congress in Australia

In a moment of immense pride for the nation and the physiotherapy fraternity, Prof. Cherishma Dsilva, Principal of Father Muller
News

ಮಂಗಳೂರಿನ ಸಂದೇಶ ಫೌಂಡೇಶನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯ

‘Mangalore IAS – A School for Civil Services’ಗೆ ಚಾಲನೆ ನೀಡಿದ ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹೆನ್ರಿ ಡಿಸೋಜ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ

You cannot copy content of this page