ಬಂಟ್ವಾಳ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಜಗನ್ನಾಥ ಚೌಟ ಮಾಣಿ ಆಯ್ಕೆ
ಬಂಟ್ವಾಳ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಜಗನ್ನಾಥ ಚೌಟ ಮಾಣಿ ಬದಿಗುಡ್ಡೆ ಇವರು ಆಯ್ಕೆಯಾಗಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾಗಿ, ಜಿಲ್ಲೆಯ ಹಲವು ದೈವಸ್ಥಾನ ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಯ ಜವಾಬ್ದಾರಿಯನ್ನು ವಹಿಸಿಕೊಂಡು, ಧಾರ್ಮಿಕವಾಗಿ ಸಾಮಾಜಿಕವಾಗಿ ಜನಾನುರಾಗಿಯಾಗಿರುತ್ತಾರೆ ಮಾತ್ರವಲ್ಲದೆ ಪ್ರಗತಿಪರ ಕೃಷಿಕರೂ ಆಗಿದ್ದಾರೆ.

ಉಪಾಧ್ಯಕ್ಷರಾಗಿ ಐತಪ್ಪ ಬಿ.ಸಿ. ರೋಡ್, ಕಾರ್ಯದರ್ಶಿಯಾಗಿ ಸದಾನಂದ ಆಳ್ವ, ಜೊತೆ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಶೆಟ್ಟಿ ಸಜಿಪ, ಕೋಶಾಧಿಕಾರಿಯಾಗಿ ಲೋಕೆಶ್ ಶೆಟ್ಟಿ ಕುಳ, ಜೊತೆ ಕೋಶಾಧಿಕಾರಿಯಾಗಿ ಶ್ರೀವಿದ್ಯಾ ರೈ ಬಿ.ಸಿ. ರೋಡ್ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳ ಆಯ್ಕೆಯ ಸಭೆಯು ತಾಲೂಕು ಬಂಟರ ಭವನದ ಸಭಾಂಗಣದಲ್ಲಿ ನಡೆಯಿತು.

ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಕಿರಣ್ ಹೆಗ್ಡೆ ಅನಂತಾಡಿ, ವಿವೇಕ್ ಶೆಟ್ಟಿ ನಗ್ರಿಗುತ್ತು, ಲೋಕನಾಥ ಶೆಟ್ಟಿ ಬಿ.ಸಿ. ರೋಡ್, ಶಾಂತರಾಮ ಶೆಟ್ಟಿ ಬೋಳಂತೂರು ನಡೆಸಿಕೊಟ್ಟರು. ಸಂಘದ ಅಧ್ಯಕ್ಷ ಚಂಡ್ರಹಾಸ ಶೆಟ್ಟಿ ರಂಗೋಲಿ, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.




