ಮೊಬೈಲ್ ನೋಡಬೇಡ ಎಂದಿದ್ದಕ್ಕೆ 13ರ ಬಾಲಕ ಆತ್ಮಹತ್ಯೆ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ಮೊಬೈಲ್ ನೋಡಬೇಡ ಎಂದು ತಂದೆಯ ಎಚ್ಚರಿಕೆಯಿಂದ ಮನನೊಂದ 13ರ ಬಾಲಕ ಓಂ ಕದಂ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಕ ಘಟನೆ ನಡೆದಿದೆ. ಈ ಘಟನೆಯು ಕುಟುಂಬ ಮತ್ತು ಸಮಾಜದಲ್ಲಿ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ.


ಘಟನೆಯ ವಿವರ :- ಹಳಿಯಾಳದ ಸರ್ಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ 13 ವರ್ಷ ಪ್ರಾಯದ ಓಂ ಕದಂ ಸಾವನ್ನಪ್ಪಿದ ಬಾಲಕ. ಮನೆಯಲ್ಲಿ ಪ್ರತಿದಿನ ಹೆಚ್ಚು ಸಮಯ ಮೊಬೈಲ್ ಫೋನ್‌ನಲ್ಲಿ ಕಳೆಯುತ್ತಿದ್ದ ಓಂಗೆ, ತಂದೆ ಮನೋಹರ್ ಆತನಿಗೆ ಮೊಬೈಲ್ ನೋಡುವ ಅಭ್ಯಾಸ ಬಿಡಬೇಕು ಎಂದು ಎಚ್ಚರಿಕೆ ನೀಡುತ್ತಿದ್ದರು. ಆದರೆ ಓಂ ತಂದೆಯ ಮಾತು ಕೇಳದೇ ಮೊಬೈಲ್ ಬಳಕೆಯಲ್ಲಿ ಮುಂದುವರಿದಿದ್ದ. ಜುಲಾಯ್ 15ರಂದು ಮಂಗಳವಾರ ರಾತ್ರಿ ಓಂ ಮೊಬೈಲ್‌ನಲ್ಲಿ ತೊಡಗಿಕೊಂಡಿದ್ದಾಗ, ತಂದೆ ಗದರಿಸಿ ಮೊಬೈಲ್‌ನ್ನು ತೆಗೆದು ಓದಿಕೊಳ್ಳುವಂತೆ ಒತ್ತಾಯಿಸಿದ್ದರು. ಇದರಿಂದ ಮನನೊಂದ ಓಂ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣವೇ ಕುಟುಂಬಸ್ಥರು ಓಂನನ್ನು ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಓಂ ಸಾವನ್ನಪ್ಪಿದ. ಈ ಘಟನೆಯ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.




