September 22, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕೈಬರಹದ ಭೂ ದಾಖಲೆಗೆ ವಿದಾಯ – ಇನ್ನು ಮುಂದೆ ಎಲ್ಲವೂ ಡಿಜಿಟಲ್

ಭೂ ದಾಖಲೆ ಪಡೆಯಲು ಹೊಸ ನಿಯಮ

ಇನ್ನು ಮುಂದೆ ಭೂ ದಾಖಲೆಗಳ ದೃಢೀಕೃತ ನಕಲು ನಿಮಗೆ ಸಿಗುವುದಿಲ್ಲ. ಈ ಕೈಬರಹದ ಭೂ ದಾಖಲೆಗಳಿಗೆ ವಿದಾಯ ಹೇಳಲಾಗಿದೆ. ಇನ್ನು ಮುಂದೆ ಎಲ್ಲವೂ ಡಿಜಿಟಲ್. ಭೂ ದಾಖಲೆ ಪಡೆಯಲು ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ಕಂದಾಯ ಇಲಾಖೆ ಕೈಬರಹದ ಭೂದಾಖಲೆ ನೀಡುವ ವ್ಯವಸ್ಥೆಗೆ ತಿಲಾಂಜಲಿ ನೀಡಿದ್ದು, ಡಿಜಿಟಲ್ ರೂಪದಲ್ಲೇ ದಾಖಲೆಗಳ ವಿತರಣೆಯನ್ನು ಕಡ್ಡಾಯಗೊಳಿಸಿದೆ. ಈ ಪ್ರಕ್ರಿಯೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಶುರುವಾಗಿದೆ. ಇನ್ನು ಮುಂದೆ ಎ ಹಾಗೂ ಬಿ ವರ್ಗದ ಭೂ ದಾಖಲೆಗಳನ್ನು ಸಾಂಪ್ರದಾಯಿಕ ದೃಢೀಕೃತ ನಕಲು ಪ್ರತಿ ಅಥವಾ ಕೈಬರಹದ ಮೂಲಕ ನೀಡುವ ಬದಲಾಗಿ ಡಿಜಿಟಲ್ ರೂಪದಲ್ಲಿಯೇ ನೀಡಲಿದೆ. ಸದ್ಯ ರಾಜ್ಯದ ಎಲ್ಲ 240 ತಹಶೀಲ್ದಾರ್ ಕಚೇರಿಗಳಲ್ಲಿ ಡಿಜಿಟಲ್ ದಾಖಲೆಗಳನ್ನು ನೀಡಲಾಗುತ್ತಿದೆ.

ಇನ್ನು ಈ ಸೇವೆಯನ್ನು ರಾಜ್ಯದಲ್ಲಿ ಇರುವ 700 ಅಟಲ್ ಜನಸ್ನೇಹಿ ಕೇಂದ್ರ (ನಾಡ ಕಚೇರಿ)ಗಳಿಗೆ ವಿಸ್ತರಿಸಲು ಕಂದಾಯ ಇಲಾಖೆ ಮುಂದಾಗಿದೆ. ಅರ್ಜಿದಾರರು ಕೋರುವ ಭೂ ದಾಖಲೆಗಳು ಈಗಾಗಲೇ ಸ್ಕ್ಯಾನ್ ಆಗಿದ್ದರೆ ಅದನ್ನು ಒಂದೇ ದಿನದಲ್ಲಿ ಡಿಜಿಟಲ್ ದಾಖಲೆ ವಿತರಣೆ ಮಾಡಲಾಗುವುದು. ಒಂದೊಮ್ಮೆ ಸ್ಕ್ಯಾನಿಂಗ್ ಪ್ರಕ್ರಿಯೆಯು ಆಗಿರದಿದ್ದರೆ, ಅದನ್ನು ಏಳು ದಿನದೊಳಗೆ ಡಿಜಿಟಲ್ ದಾಖಲೆ ವಿತರಣೆ ಮಾಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಕಂದಾಯ ಇಲಾಖೆ ಹೇಳಿದೆ. ಇದರಿಂದ ಭೂ ದಾಖಲೆಗಳನ್ನು ಯಾವುದೇ ಅಡಚಣೆ ಹಾಗೂ ವಿಳಂಬ ಇಲ್ಲದೆ ಪಡೆಯಲು ಅನುಕೂಲವಾಗಲಿದೆ. ಜನ ಬಯಸುವ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ವಿತರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಸುರಕ್ಷಿತವಾಗಿ ಸಂರಕ್ಷಿಸಿದ ಭೂ ದಾಖಲೆಗಳನ್ನು ಖಾಸಗಿ ಆಸ್ತಿದಾರರು ಪಾರದರ್ಶಕ ವಿಧಾನದಡಿ ಪಡೆಯಬಹುದು. ಹಾಗೆಯೇ ದೀರ್ಘಕಾಲದ ಬಾಕಿ ಇರುವ ಬಗರ್ ಹುಕುಂ, ದರ್ಖಾಸ್ತು ಪೋಡಿ ಇತರೆ ವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕೆ ಅನುಕೂಲವಾಗಲಿದೆ ಎಂದು ಕಂದಾಯ ಇಲಾಖೆಯ ಆಯುಕ್ತರಾದ ಸುನಿಲ್ ಕುಮಾರ್ ಪೊಮ್ಮಲ ಹೇಳಿದ್ದಾರೆ.

ಈ ವ್ಯವಸ್ಥೆಯಿಂದ ಆಗುವ ಅನುಕೂಲಗಳು:-

  • ದಾಖಲೆಗಳು ಶಿಥಿಲವಾಗಿ ಹಾಳಾಗುವುದನ್ನು ತಡೆಯಬಹುದು.
  • ಭೂ ದಾಖಲೆ ದೃಢೀಕೃತ ಪ್ರತಿಗಾಗಿ ಅನಗತ್ಯ ಕಾಯಬೇಕಾಗಿಲ್ಲ, ವಿಳಂಬ ತಪ್ಪಿಸಬಹುದು.
  • ⁠ಭೂ ದಾಖಲೆಗಳನ್ನು ತಿರುಚಲು ಅವಕಾಶ ಇರುವುದಿಲ್ಲ.
  • ⁠ತಾವು ಇರುವಲ್ಲೇ ಭೂ ದಾಖಲೆ ಕೋರಿ ಅರ್ಜಿ ಸಲ್ಲಿಸಲು ಅವಕಾಶ
  • ಅರ್ಧಕ್ಕೆ ನಿಂತ ಹಳೆಯ ಬಗರ್ ಹುಕುಂ ಅರ್ಜಿ ವಿಲೇವಾರಿಗೂ ಅನುಕೂಲವಾಗಲಿದೆ.
  • ಪಾರದರ್ಶಕವಾಗಿ ಕಾಲಮಿತಿಯಲ್ಲಿ ಡಿಜಿಟಲ್ ಭೂ ದಾಖಲೆಗಳು ಲಭ್ಯವಾಗಲಿದೆ.

You may also like

News

ಅಪಘಾತದಲ್ಲಿ ಗಾಯಗೊಂಡ ರಮಾನಾಥ ರೈ ಆರೋಗ್ಯ ವಿಚಾರಿಸಿದ ಸಂಸದ ಬ್ರಿಜೇಶ್ ಚೌಟ

ಕಾರು ಹಾಗೂ ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ಬಿ. ರಮಾನಾಥ ರೈ ಮತ್ತು ಅವರ
News

Father Muller Welcomes 33rd Batches of Allied Health and Physiotherapy Students

A new generation of aspiring healthcare professionals began their academic journey at Father Muller as the 33rd batches of Father

You cannot copy content of this page