July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಾಜಿ ಸೈನಿಕರಿಂದ ಗುತ್ತಿಗೆ ನವೀಕರಿಸಲು ಪುತ್ತೂರು ಶಾಸಕ ಅಶೋಕ್ ರೈಯವರಿಗೆ ವಿನಂತಿ ಪತ್ರ

ಕರ್ನಾಟಕದ ವಿವಿಧ ಭಾಗಗಳಲ್ಲಿ ಕರ್ನಾಟಕ ರಾಜ್ಯ ವಿಪತ್ತು ಸ್ಪಂದನಾ ಪಡೆಯ ವಿಪತ್ತು ನಿರ್ವಹಣೆ ಹಾಗೂ ರಕ್ಷಣಾ ಕಾರ್ಯಗಳಿಗೆ ಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸುವ ಮಾಜಿ ಸೈನಿಕರ ಕೆಲಸವು ಇದೇ ವರ್ಷದ ಮೇ 22ರಂದು ಮುಕ್ತಾಯಗೊಂಡಿದೆ. ಆದರೆ ಎರಡು ತಿಂಗಳಾದರೂ ಕೂಡ ಇದನ್ನು ನವೀಕರಿಸಿಲ್ಲ. ಆದುದರಿಂದ ಈ ಕೆಲಸವನ್ನು ಮಾಡುವ ಸುಮಾರು 12 ಜನ ಮಾಜಿ ಸೈನಿಕರು ಇದನ್ನು ನವೀಕರಣಗೊಳಿಸಲು ಸಂಬಂಧಪಟ್ಟ ಸರಕಾರದ ಅಧಿಕಾರಿಗಳ ಗಮನಕ್ಕೆ ತರುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಲಿಖಿತ ಪತ್ರ ಒಂದನ್ನು ನೀಡಿದ್ದಾರೆ.

ಈ ಪತ್ರಕ್ಕೆ ಮಾಜಿ ಸೈನಿಕರಾದ ಸುನಿಲ್ ಕುಮಾರ್, ಅಶೋಕ್ ಎಂ., ರಾಜೇಶ್, ಮೋಹನ್ ಎಸ್., ವಿಶ್ವನಾಥ ಕೊಳ್ಕೆ, ರಂಜಿತ್ ಶೆಟ್ಟಿ, ಜಗದೀಶ್ ಎಂ., ಉಮೇಶ್ ಎನ್., ಶಿವಪ್ರಸಾದ್ ಡಿ.ಕೆ., ದಿನೇಶ್ ಎಸ್., ಪುರಂದರ ಗೌಡ ಹಾಗೂ ಬೇಬಿ ಟಿ. ಸಹಿ ಹಾಕಿದ್ದಾರೆ.

You may also like

News

ಮಂಗಳೂರಿನ ಸಂದೇಶ ಫೌಂಡೇಶನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯ

‘Mangalore IAS – A School for Civil Services’ಗೆ ಚಾಲನೆ ನೀಡಿದ ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹೆನ್ರಿ ಡಿಸೋಜ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ
News

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ – ಸೆಲೆನ ಬಸ್ ಕಂಡಕ್ಟರ್ ಬಂಧನ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಕೊಂಡು ಅಸಭ್ಯವಾಗಿ ವರ್ತಿಸಿ, ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೆಲೆನ ಬಸ್ ಕಂಡಕ್ಟರ್‌ನನ್ನು ಮಂಗಳೂರು

You cannot copy content of this page