ಬಂಟ್ವಾಳದ ಫರ್ಲಾ ಚರ್ಚ್ ನಲ್ಲಿ ಉಚಿತ ಆರೋಗ್ಯ ಶಿಬಿರ
ವೆಲಂಕಣಿ ಮಾತೆಗೆ ಸಮರ್ಪಿತ ದೇವಾಲಯ ಫರ್ಲಾ, ಬಂಟ್ವಾಳ ಇಲ್ಲಿಯ ಕಥೊಲಿಕ್ ಸಭಾ ಸಂಘಟನೆ ಹಾಗೂ ಸ್ವಸ್ತ ಆಯೋಗ ಇವರ ಜಂಟಿ ಆಶ್ರಯದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ಹಾಗೂ ತುಂಬೆ ಇವರ ಸಹಯೋಗದಲ್ಲಿ ಜುಲಾಯ್ 20ರಂದು ಆದಿತ್ಯವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ನಡೆಸಲಾಯಿತು.




ಚರ್ಚ್ ಧರ್ಮಗುರು ವಂದನೀಯ ಫಾದರ್ ಮಾರ್ಕ್ ಅರುಣ್ ಡಿಸೋಜರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಆಸ್ಪತ್ರೆ ಸಿಬ್ಬಂದಿಯವರ ನಿಸ್ವಾರ್ಥ ಸೇವೆಗೆ ಕೃತಜ್ಞತೆಯನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಕಾರ್ಯಕ್ರಮದಲ್ಲಿ ವಂದನೀಯ ಫಾದರ್ ಗಿಲ್ಬರ್ಟ್ ಮಸ್ಕರೇನಸ್, ಕಥೊಲಿಕ್ ಸಭಾ ಫರ್ಲಾ ಘಟಕದ ಅಧ್ಯಕ್ಷ ಹಾಗೂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ನವೀನ್ ಮಿನೇಜಸ್, ಆಯೋಗಗಳ ಸಂಯೋಜಕಿ ಸುನೀತಾ ರೊಡ್ರಿಗಸ್, ಫಾದರ್ ಮುಲ್ಲರ್ ಆಸ್ಪತ್ರೆಯ ಪರವಾಗಿ ಡಾಕ್ಟರ್ ಚಿನ್ಮಯಿ ಹೆಬ್ಬಾರ್, ಸ್ವಸ್ಥ ಆಯೋಗದ ಸಂಚಾಲಕಿ ಸೆವ್ರಿನ್ ಡಿಸೋಜ ಹಾಗೂ ಕಥೊಲಿಕ್ ಸಭಾ ಕಾರ್ಯದರ್ಶಿ ರೂಪಾ ಮೋರಸ್ ಉಪಸ್ಥಿತರಿದ್ದರು.

ಅನೇಕ ಜನರು ಬೇರೆ ಬೇರೆ ರೀತಿಯ ತಪಾಸಣೆಗಳನ್ನು ಮಾಡಿ ಉಚಿತ ಆರೋಗ್ಯ ಕಾರ್ಡ್ ಪಡೆದರು. ಹಿಲ್ಡಾ ಪಿರೇರಾ ಕಾರ್ಯಕ್ರಮ ನಿರೂಪಿಸಿದರು. ಕಥೊಲಿಕ್ ಸಭಾ ಅಧ್ಯಕ್ಷರು ಸ್ವಾಗತಿಸಿದರು. ಕಾರ್ಯದರ್ಶಿ ವಂದನಾರ್ಪಣೆ ಸಲ್ಲಿಸಿದರು.




